PAK vs NZ 1st T20: ಬಾಬರ್ ಅಜಂ, ರಿಜ್ವಾನ್ ಬ್ಯಾಟಿಂಗ್ ವೈಫಲ್ಯದ ನಡುವೆಯೂ ಕಿವೀಸ್ ವಿರುದ್ಧ ಗೆದ್ದ ಪಾಕಿಸ್ತಾನ
ಶುಕ್ರವಾರ, ಏಪ್ರಿಲ್ 14ರಂದು ಲಾಹೋರ್‌ನಲ್ಲಿ ನಡೆದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಪಾಕಿಸ್ತಾನ ತಂಡ 88 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಇತ್ತ ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ 2023ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ 420ಕ್ಕೂ ಹೆಚ್ಚು ರನ್‌ಗಳು ಹರಿದು ಬಂದ ದಿನದಂದು, ಲಾಹೋರ್‌ನಲ್ಲಿ ಟಿ20 ಸರಣಿಯ ಆರಂಭಿಕ ಪಂದ್ಯ ದೊಡ್ಡ ಸದ್ದು ಮಾಡಲು ವಿಫಲವಾಗಿದೆ.

ಪಾಕಿಸ್ತಾನ ತಂಡದ ಪರ ನಾಯಕ ಬಾಬರ್ ಅಜಂ ಮತ್ತು ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಅವರ ಬ್ಯಾಟಿಂಗ್ ವೈಫಲ್ಯದ ನಡುವೆಯೂ ಫಖರ್ ಜಮಾನ್ ಮತ್ತು ಮತ್ತು ಸೈಮ್ ಅಯೂಬ್ ನೆರವಿನಿಂದ ಬೃಹತ್ ರನ್ ಕಲೆಹಾಕಿತು.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ನಿಗದಿತ 19.5 ಓವರ್‌ಗಳಲ್ಲಿ 182 ರನ್‌ಗಳಿಗೆ ಸರ್ವಪತನ ಕಂಡಿತು. ನಂತರ 183 ರನ್‌ಗಳ ಗುರಿ ಬೆನ್ನಟ್ಟಿದ ಟಾಮ್ ಲ್ಯಾಥಮ್ ನಾಯಕತ್ವದ ನ್ಯೂಜಿಲೆಂಡ್ 15.3 ಓವರ್‌ಗಳಲ್ಲಿ ಕೇವಲ 94 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 88 ರನ್‌ಗಳ ಬೃಹತ್ ಅಂತರದಿಂದ ಸೋಲು ಕಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಪರ ನಾಯಕ ಬಾಬರ್ ಅಜಂ 9 ರನ್, ಮೊಹಮ್ಮದ್ ರಿಜ್ವಾನ 8 ರನ್ ಗಳಿಸಿ ಉತ್ತಮ ಆರಂಭ ಒದಗಿಸಲು ವಿಫಲರಾದರು. ನಂತರ ಬಂದ ಫಖರ್ ಜಮಾನ್ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರೆ, ಸೈಮ್ ಅಯೂಬ್ 28 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 47 ರನ್ ಬಾರಿಸಿದರು.
ಅನಂತರ ಶದಾಬ್ ಖಾನ್ 5 ರನ್, ಇಫ್ತಿಕಾರ್ ಅಹ್ಮದ್ 0, ಇಮಾದ್ ವಾಸಿಂ 16 ರನ್, ಫಹೀಮ್ ಅಶ್ರಫ್ 22 ರನ್, ಹ್ಯಾರಿಸ್ ರೌಫ್ 11 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 4 ಓವರ್‌ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದರೆ, ಆಡಮ್ ಮಿಲ್ನೆ 4 ಓವರ್‌ಗಳಲ್ಲಿ 51 ರನ್ ನೀಡಿ 2 ವಿಕೆಟ್ ಪಡೆದರು. ಬೆನ್ ಲಿಸ್ಟರ್ 3.5 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಉಳಿದಂತೆ ಜಿಮ್ಮಿ ನಿಶಾಮ್ ಮತ್ತು ಇಶ್ ಸೋಧಿ ತಲಾ ಒಂದೊಂದು ವಿಕೆಟ್ ಪಡೆದರು.

183 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ಗಳು ಪ್ರತಿರೋಧ ತೋರಲು ವಿಫಲರಾದರು. ನಾಯಕ ಟಾಮ್ ಲ್ಯಾಥಮ್ 20 ರನ್, ಡೇರಿಲ್ ಮಿಚೆಲ್ 11 ರನ್, ಮಾರ್ಕ್ ಚಾಪ್ಮನ್ 27 ಎಸೆತಗಳಲ್ಲಿ 34 ರನ್, ಜಿಮ್ಮಿ ನಿಶಾಮ್ 15 ರನ್ ಗಳಿಸಿದ್ದು ಬಿಟ್ಟರೆ, ಉಳಿದವರು ಎರಡಂಕಿ ರನ್ ಗಳಿಸಲು ವಿಫಲರಾದರು.
ಇನ್ನು ಬೌಲಿಂಗ್‌ನಲ್ಲಿ ಪಾಕಿಸ್ತಾನ ತಂಡದ ಪರ ವೇಗಿಗಳಾದ ಹ್ಯಾರಿಸ್ ರೌಫ್ 3.3 ಓವರ್‌ಗಳಲ್ಲಿ 18 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ಇಮಾದ್ ವಾಸಿಂ 1 ಓವರ್‌ನಲ್ಲಿ 2 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಶಾಹೀನ್ ಶಾ ಅಫ್ರಿದಿ, ಜಮಾನ್ ಖಾನ್, ಫಹೀಮ್ ಅಶ್ರಫ್ ಮತ್ತು ಶದಾಬ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಭಾನುವಾರ, ಏಪ್ರಿಲ್ 16ರಂದು ಲಾಹೋರ್‌ನಲ್ಲಿ ನಡೆಯುವ 2ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮತ್ತೆ ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications