PAK vs NZ 1st Test : ದ್ವಿಶತಕ ಗಳಿಸಿದ ಕೇನ್ ವಿಲಿಯಮ್ಸನ್, ಬೃಹತ್ ಮೊತ್ತ ಗಳಿಸಿದ ನ್ಯೂಜಿಲೆಂಡ್

ಪಾಕಿಸ್ತಾನದ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ದ್ವಿಶತಕ ಸಿಡಿಸಿದ್ದಾರೆ. ಕೇನ್ ವಿಲಿಯನ್ಸನ್ ಅತ್ಯುತ್ತಮ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 612 ರನ್ ಗಳಿಸಿದ್ದಾಗ 174 ರನ್ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿತು.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 438 ರನ್ ಗಳಿಸಿ ಆಲೌಟ್ ಆಯಿತು. ಪಾಕಿಸ್ತಾನ ನಾಯಕ ಬಾಬರ್ ಅಜಂ 161 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಘಾ ಸಲ್ಮಾನ್ ಕೂಡ 103 ರನ್ ಗಳಿಸಿ ಪಾಕಿಸ್ತಾನ ಉತ್ತಮ ಮೊತ್ತ ಕಲೆಹಾಕಲು ಕಾರಣವಾದರು. ಸರ್ಫರಾಜ್ 86 ರನ್ ಗಳಿಸಿ ಅಘಾ ಸಲ್ಮಾನ್‌ಗೆ ಸಾಥ್ ನೀಡಿದರು.
ಅಂತಿಮವಾಗಿ ಪಾಕಿಸ್ತಾನ 438 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರವಾಗಿ ಟಿಮ್ ಸೌಥಿ 3 ವಿಕೆಟ್ ಪಡೆದರು. ಅಜಾಜ್ ಪಟೇಲ್, ಬ್ರಾಸ್‌ವೆಲ್, ಇಶ್ ಸೋಧಿ ತಲಾ 2 ವಿಕೆಟ್ ಪಡೆದರು. ವ್ಯಾಗ್ನರ್ ಒಂದು ವಿಕೆಟ್ ಪಡೆದರು.

ಕೇನ್ ವಿಲಿಯಮ್ಸನ್ ಅಮೋಘ ದ್ವಿಶತಕ
ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಅತ್ಯುತ್ತಮ ಆರಂಭ ಪಡೆಯಿತು. ಟಾಮ್ ಲಥಮ್ ಮತ್ತು ಡಿವೋನ್ ಕಾನ್ವೆ ಮೊದಲ ವಿಕೆಟ್‌ಗೆ 183 ರನ್‌ಗಳ ಜೊತೆಯಾಟ ಆಡಿದರು.
ಟಾಮ್ ಲಥಮ್ 113 ರನ್ ಗಳಿಸಿದರು, ಡಿವೋನ್ ಕಾನ್ವೆ 92 ರನ್ ಗಳಿಸಿ ಶತಕದಿಂದ ವಂಚಿತರಾದರು. ನಂತರ ಕ್ರೀಸ್‌ಗೆ ಬಂದ ಕೇನ್ ವಿಲಿಯಮ್ಸನ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶಿಸಿದರು.
395 ಎಸೆತಗಳಲ್ಲಿ 21 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 200 ರನ್ ಗಳಿಸಿದರು. ವಿಲಿಯಮ್ಸನ್ ದ್ವಿಶತಕ ಗಳಿಸುತ್ತಿದ್ದಂತೆ ನ್ಯೂಜಿಲೆಂಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಕೇನ್ ವಿಲಿಯಮ್ಸನ್ 5ನೇ ದ್ವಿಶತಕ ಗಳಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದರು. ಹಲವು ತಿಂಗಳುಗಳಿಂದ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದ ಕೇನ್ ವಿಲಿಯಮ್ಸನ್ ಅಂತಿಮವಾಗಿ ದ್ವಿಶತಕ ಗಳಿಸುವ ಮೂಲಕ ಫಾರ್ಮ್ ಕಂಡುಕೊಂಡರು. ಇತ್ತೀಚೆಗೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ 2 ಕೋಟಿ ರುಪಾಯಿ ಮೂಲಬೆಲೆಗೆ ಗುಜರಾತ್ ತಂಡದ ಪಾಲಾಗಿದ್ದರು.
ಪಾಕಿಸ್ತಾನದ ಪರವಾಗಿ ಅಬ್ರಾರ್ ಅಹ್ಮದ್ 5 ವಿಕೆಟ್ ಪಡೆದು ಮಿಂಚಿದರು. ನೌಮನ್ ಅಲಿ 3 ವಿಕೆಟ್ ಪಡೆದರೆ, ಮೊಹಮ್ಮದ್ ವಾಸಿಂ ಜ್ಯೂನಿಯರ್ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications