PAK vs NZ: 9ನೇ ಟೆಸ್ಟ್ ಶತಕ ಬಾರಿಸಿ ಈ ಅಂಕಿಅಂಶದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಬಾಬರ್ ಅಜಂ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಪ್ರಸ್ತುತ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಬ್ಯಾಟ್‌ನೊಂದಿಗೆ ಕಳಪೆ ಫಾರ್ಮ್‌ನಿಂದ ದೂರವಿರುವ ಈ ಬ್ಯಾಟರ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತನ್ನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎದುರಾಳಿ ಬೌಲರ್‌ಗಳನ್ನು ನಿರಾಶೆಗೊಳಿಸಿದರು.
ಮೊದಲ ಟೆಸ್ಟ್ ಪಂದ್ಯದ 1ನೇ ದಿನದಂದು ಬಾಬರ್ ಅಜಂ 277 ಎಸೆತಗಳಲ್ಲಿ 161 ರನ್ ಗಳಿಸುವ ಮೂಲಕ ಬ್ಯಾಟಿಂಗ್ ಪರಾಕ್ರಮ ಮುಂದುವರೆಸಿದ್ದಾರೆ. ಮೊದಲ ದಿನದಂತ್ಯಕ್ಕೆ ಪಾಕಿಸ್ತಾನ ತಂಡವು 5 ವಿಕೆಟ್ ನಷ್ಟಕ್ಕೆ 317 ರನ್‌ಗಳನ್ನು ಗಳಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ 9ನೇ ಶತಕ ಬಾರಿಸಿದ ಬಾಬರ್ ಅಜಂ, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದರು. ಅವರ ಬ್ಯಾಟಿಂಗ್ ಸರಾಸರಿ 50 ರನ್ ಮಾರ್ಕ್‌ಗಿಂತ ಹೆಚ್ಚಾಗಿದೆ.

ಬಾಬರ್ ಅಜಂ ಸರಾಸರಿ ವಿರಾಟ್ ಕೊಹ್ಲಿಗಿಂತ ಇದೇ ಮೊದಲ ಬಾರಿಗೆ ಏರಿಕೆ
ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಬಾಬರ್ ಅಜಂ ಅವರ ಸರಾಸರಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗಿಂತ ಇದೇ ಮೊದಲ ಬಾರಿಗೆ ಏರಿಕೆ ಕಂಡಿತು. ಪಾಕಿಸ್ತಾನದ ಬ್ಯಾಟರ್ ತನ್ನ ಬಿರುಸಿನ ಬ್ಯಾಟಿಂಗ್ ಪ್ರದರ್ಶನದಿಂದ ರನ್ ಗಳಿಸಲು ಪ್ರಾರಂಭಿಸಿದಾಗಿನಿಂದ ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿ ನಡುವೆ ಪರಸ್ಪರ ಹೋಲಿಸಲಾಗುತ್ತದೆ.
ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನವು ಕೇವಲ 19 ರನ್‌ಗಳಿಗೆ ಮೊದಲೆರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿದ್ದಾಗ ಬಾಬರ್ ಅಜಂ ಬ್ಯಾಟಿಂಗ್‌ಗೆ ಬಂದರು.

ಬಾಬರ್ ಅಜಂ 161 ರನ್ ಗಳಿಸಿ ಅಜೇಯರಾಗುಳಿದರು
ಪಾಕಿಸ್ತಾನದ ನಾಯಕ ಮೊದಲು ಸೌದ್ ಶಕೀಲ್ ಜೊತೆ 4ನೇ ವಿಕೆಟ್‌ಗೆ 62 ರನ್‌ಗಳ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ನಂತರ ಬಾಬರ್ ಅಜಂ ಮತ್ತು ಪಾಕಿಸ್ತಾನದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಜೊತೆ 5ನೇ ವಿಕೆಟ್‌ಗೆ 194 ರನ್‌ಗಳನ್ನು ಸೇರಿಸಿದರು. ನಂತರ ಸರ್ಫರಾಜ್ ಅಹ್ಮದ್ 86 ರನ್‌ಗಳಿಗೆ ಔಟಾದರು.
ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಬಾಬರ್ ಅಜಂ 161 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಮೊದಲ ದಿನದ ಆಟದ ಅಂತ್ಯದ ನಂತರ ಪಾಕಿಸ್ತಾನ ತಂಡವನ್ನು ಉತ್ತಮ ಸ್ಥಾನದಲ್ಲಿ ಇರಿಸಿದರು. ಬಾಬರ್ ಅಜಂ ತಮ್ಮ 9ನೇ ಟೆಸ್ಟ್ ಶತಕ ಮತ್ತು ತಮ್ಮ ಹೆಸರಿಗೆ ಕೆಲವು ಹೊಸ ದಾಖಲೆಗಳೊಂದಿಗೆ ದಿನವನ್ನು ಮುಕ್ತಾಯಗೊಳಿಸಿದರು.

ಬಾಬರ್ ಅಜಂ 54.93ರ ಸರಾಸರಿ
ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಬರ್ ಅಜಂ 54.93ರ ಸರಾಸರಿಯು ಇದೀಗ ಭಾರತದ ವಿರಾಟ್ ಕೊಹ್ಲಿ 48.91ರ ಸರಾಸರಿಗಿಂತ ಹೆಚ್ಚಾಗಿರುವುದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಮುಂಬರುವ ಫೆಬ್ರವರಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡುವುದರಿಂದ ಈ ಅಂಕಿಅಂಶಗಳು ತ್ವರಿತವಾಗಿ ಬದಲಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಬಾಬರ್ ಅಜಂ 2022ರಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಬಾಬರ್ ಅಜಂ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ 1100ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ರೂಟ್ 1098 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಕೂಡ ಈ ವರ್ಷ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ನಾಯಕನಾಗಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚಿನ 50+ ರನ್‌ಗಳ ಇನ್ನಿಂಗ್ಸ್‌ಗಳನ್ನು ಹೊಂದಿದ್ದಾರೆ. ಇದು ಈ ವರ್ಷ ಬಾಬರ್ ಅಜಂ 25ನೇ ಬಾರಿ 50+ ಸ್ಕೋರ್ ದಾಖಲಿಸಿದ್ದು, 2005ರಲ್ಲಿ ರಿಕಿ ಪಾಂಟಿಂಗ್ ನಿರ್ಮಿಸಿದ್ದ 24 ಬಾರಿ 50+ ರನ್‌ಗಳ ದಾಖಲೆಯನ್ನು ಮೀರಿಸಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications