For Quick Alerts
ALLOW NOTIFICATIONS  
For Daily Alerts
 

PAK vs NZ: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ವೇಗದ ಬ್ಯಾಟರ್ ಡೆವೊನ್ ಕಾನ್ವೆ

PAK vs NZ: Devon Conway Becomes Fastest New Zealand Batsman To Score 1,000 Runs In Test Cricket

ನ್ಯೂಜಿಲೆಂಡ್‌ನ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಡೆವೊನ್ ಕಾನ್ವೆ ಟೆಸ್ಟ್ ಕ್ರಿಕೆಟ್‌ನಲ್ಲಿ 1,000 ರನ್‌ಗಳನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಅತ್ಯಂತ ವೇಗದ ನ್ಯೂಜಿಲೆಂಡ್ ಬ್ಯಾಟರ್ ಎಂಬ ಗರಿಮೆಗೆ ಭಾಜನರಾದರು.

ಮಂಗಳವಾರ ಕರಾಚಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ನ್ಯೂಜಿಲೆಂಡ್‌ನ ಮೊದಲ ಟೆಸ್ಟ್‌ನಲ್ಲಿ ಡೆವೊನ್ ಕಾನ್ವೆ ಈ ಮೈಲುಗಲ್ಲನ್ನು ಸಾಧಿಸಿದರು.

ಮೊದಲ ದಿನದಾಟದ ಅಂತ್ಯಕ್ಕೆ ಡೆವೊನ್ ಕಾನ್ವೆ 156 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯರಾಗುಳಿದರು. ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಲ್ಲಿ ಸೊಗಸಾದ 12 ಬೌಂಡರಿಗಳನ್ನು ಒಳಗೊಂಡಿತ್ತು. ಇದೀಗ ಡೆವೊನ್ ಕಾನ್ವೆ ಅವರ ಟೆಸ್ಟ್ ದಾಖಲೆಯು 11 ಟೆಸ್ಟ್‌ಗಳ 19 ಇನ್ನಿಂಗ್ಸ್‌ಗಳಲ್ಲಿ 55.55ರ ಸರಾಸರಿಯಲ್ಲಿ 1,000 ರನ್ ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಡೆವೊನ್ ಕಾನ್ವೆ ಮೂರು ಶತಕ ಮತ್ತು ಐದು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಸ್ವರೂಪದಲ್ಲಿ ಅವರ ಅತ್ಯುತ್ತಮ ಸ್ಕೋರ್ 200 ಆಗಿದೆ.

PAK vs NZ: Devon Conway Becomes Fastest New Zealand Batsman To Score 1,000 Runs In Test Cricket

20 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಪೂರೈಸಿದ್ದ ನ್ಯೂಜಿಲೆಂಡ್‌ನ ಮಾಜಿ ಆಟಗಾರ ಜಾನ್ ರೀಡ್ ಅವರ ದಾಖಲೆಯನ್ನು ಡೆವೊನ್ ಕಾನ್ವೆ ಹಿಂದಿಕ್ಕಿದ್ದಾರೆ.

ಇಂಗ್ಲೆಂಡ್ ಆಟಗಾರ ಹರ್ಬರ್ಟ್ ಸಟ್‌ಕ್ಲಿಫ್ ಆಟದ ದೀರ್ಘ ಸ್ವರೂಪದಲ್ಲಿ ಒಂದು ಸಾವಿರ ರನ್ ಗಳಿಸಿದ ಅತ್ಯಂತ ವೇಗದ ಆಟಗಾರ ಎನಿಸಿದ್ದಾರೆ. ಅವರು 1925ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 12 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಪೂರೈಸಿದ್ದರು.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ನ ಕರಾಚಿ ಟೆಸ್ಟ್‌ ಬಗ್ಗೆ ಹೇಳುವುದಾದರೆ, ಎರಡನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 165/0 ನಲ್ಲಿತ್ತು, ಕಾನ್ವೆ (82*) ಮತ್ತು ಟಾಮ್ ಲ್ಯಾಥಮ್ (78*) ಅಜೇಯರಾಗುಳಿದಿದ್ದರು.

ಮೂರನೇ ದಿನದಾಟ ಆರಂಭಿಸಿರುವ ನ್ಯೂಜಿಲೆಂಡ್ ಈವರೆಗೆ 4 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದೆ. ಟಾಮ್ ಲ್ಯಾಥಮ್ 113 ರನ್, ಡೆವೊನ್ ಕಾನ್ವೆ 92 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ 438 ರನ್‌ಗಳಿಗೆ ಆಲೌಟ್ ಆಗಿತ್ತು. ಇದೀಗ ಆತಿಥೇಯ ತಂಡವನ್ನು ಹಿಂದಿಕ್ಕಲು ಇನ್ನೂ 73 ರನ್ ಗಳಿಸಬೇಕಿದೆ.

ಪಾಕಿಸ್ತಾನ ನಾಯಕ ಬಾಬರ್ ಅಜಂ (161), ಅಘಾ ಸಲ್ಮಾನ್ (103) ಮತ್ತು ಕೊನೆಯಲ್ಲಿ ಸರ್ಫರಾಜ್ ಅಹ್ಮದ್ (86) ರನ್ ಗಳಿಸಿ ಮಿಂಚಿದ್ದರು.

ನ್ಯೂಜಿಲೆಂಡ್ ಪರ ಟಿಮ್ ಸೌಥಿ 69 ರನ್‌ಗೆ 3 ವಿಕೆಟ್ ಕಿತ್ತು ಗಮನಸೆಳೆದರು. ಅಜಾಜ್ ಪಟೇಲ್, ಇಶ್ ಸೋಧಿ ಮತ್ತು ಮೈಕೆಲ್ ಬ್ರೇಸ್‌ವೆಲ್ ಕೂಡ ತಲಾ ಎರಡು ವಿಕೆಟ್ ತೆಗೆದುಕೊಂಡರೆ, ನೀಲ್ ವ್ಯಾಗ್ನರ್ ಒಂದು ವಿಕೆಟ್ ಪಡೆದರು.

Story first published: Wednesday, December 28, 2022, 16:02 [IST]
Other articles published on Dec 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+