ಪಾಕಿಸ್ತಾನ vs ದ. ಆಫ್ರಿಕಾ: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪರ ದಾಖಲೆ ಬರೆದ ಶದಾಬ್ ಖಾನ್

ಟಿ20 ವಿಶ್ವಕಪ್‌ನಲ್ಲಿ ಗುರುವಾರ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು ಪಾಕಿಸ್ತಾನ ತಂಡದ ಪಾಲಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿರುವ ಪಾಕಿಸ್ತಾನ ಅದ್ಭುತ ಮೇಲುಗೈ ಸಾಧಿಸಿದೆ. ಇನ್ನು ಪಾಕಿಸ್ತಾನದ ಆಲ್‌ರೌಂಡರ್ ಶದಾಬ್ ಖಾನ್ ಈ ಪಂದ್ಯದಲ್ಲಿ ಅಮೋಘ ಆಟವನ್ನು ಪ್ರದರ್ಶಿಸಿದ್ದು ಬ್ಯಾಟಿಂಗ್‌ನಲ್ಲಿ ಪಾಕಿಸ್ತಾನದ ಪರ ಹೊಸ ದಾಖಲೆ ಬರೆದಿದ್ದಾರೆ.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶದಾಬ್ ಖಾನ್ ಪಾಕಿಸ್ತಾನದ ಪರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇಫ್ತಿಕಾರ್ ಅಹ್ಮದ್ ಜೊತೆಗೆ ಸೇರಿಕೊಂಡು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶದಾಬ್ ಖಾನ್ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪರವಾಗಿ ಎರಡನೇ ಅತ್ಯಂತ ವೇಗವಾಗಿ ಅರ್ಧ ಶತಕ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

20 ಎಸೆತಗಳಲ್ಲಿ ಶದಬ್ ಅರ್ಧ ಶತಕ
ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಜೊತೆ ಸಮಾನ ಅಂಕಗಳನ್ನು ಹೊಂದಿದ್ದರೂ ಆಸ್ಟ್ರೇಲಿಯಾದ ನೆಟ್‌ರನ್‌ರೇಟ್ ಬಹಳ ಕಳಪೆಯಾಗಿದೆ. ಹೀಗಾಗಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿದರೆ ಸೆಮಿಫೈನಲ್ ಸ್ಪರ್ಧೆಯಿಂದ ಆಸ್ಟ್ರೇಲಿಯಾ ತಂಡ ಹೊರಬೀಳಲಿದೆ. ಈ ಹಿನ್ನಲೆಯಲ್ಲಿ ರಿಕಿ ಪಾಂಟಿಂಗ್ ಮಾತನಾಡಿದ್ದು ಆಸ್ಟ್ರೇಲಿಯಾ ತಂಡ ಇಂಥಾ ಪರಿಸ್ಥಿತಿಯಲ್ಲಿ ಕೆಲ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಪಾಕ್‌ಗೆ ಮತ್ತೆ ಕೈಕೊಟ್ಟ ಅಗ್ರಕ್ರಮಾಂಕ
ಈ ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನದ ಪ್ರಮುಖ ಸಾಮರ್ಥ್ಯವೇ ಅಗ್ರ ಕ್ರಮಾಂಕ ಎಂದು ವಿಶ್ಲೇಷಿಸಲಾಗಿತ್ತು. ಅದಕ್ಕೆ ಕಾರಣ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಪ್ರದರ್ಶನ. ಆದರೆ ಆಸ್ಟ್ರೇಇಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಈ ಇಬ್ಬರು ಆಟಗಾರರು ಕೂಡ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅದರಲ್ಲೂ ನಾಯಕ ಬಾಬರ್ ಅಜಂ ಈ ಟೂರ್ನಿಯಲ್ಲಿ ಆಡಿದ ನಾಲ್ಕನೇ ಪಂದ್ಯದಲ್ಲಿಯೂ ಒಂದಂಕಿಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ದೊಡ್ಡ ಆಘಾತ ನೀಡಿದ್ದಾರೆ. ಈ ಪಂದ್ಯದಲ್ಲಿ 43 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ತಂಡ ಸಂಕಷ್ಟದಲ್ಲಿತ್ತು. 95 ರನ್‌ಗಳ:ಇಗೆ 5ನೇ ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ಮಧ್ಯಮ ಕ್ರಮಾಂಕ ಜವಾಬ್ದಾರಿಯುತ ಪ್ರದರ್ಶನ ನೀಡಿದೆ.
ICC Player Of The Month Award : ಮೊದಲ ಬಾರಿಗೆ ವಿರಾಟ್ ಕೊಹ್ಲಿ ನಾಮನಿರ್ದೇಶನ

ಇಫ್ತಿಕಾರ್- ಶದಬ್ ಅದ್ಭುತ ಪ್ರದರ್ಶನ
ಈ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಮೊದಲ 10 ಓವರ್‌ಗಳಲ್ಲಿ ಸಂಪೀಊರ್ಣ ವಿಫಲವಾಗಿತ್ತು. ಆದರೆ ದ್ವಿತಿಯಾರ್ಧದಲ್ಲಿ ಅಮೋಈಘ ಆಟವನ್ನು ಪ್ರದರ್ಶಿಸಿಸಿದೆ. ಅದಕ್ಕೆ ಕಾರಣ ಇಫ್ತಿಕಾರ್ ಅಹ್ಮದ್ ಹಾಗೂ ಶದಬ್ ಖಾನ್. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಇಫ್ತುಕಾರ್ ಈ ಪಂದ್ಯದಲ್ಲಿಯೂ ಮಧ್ಯಮ ಕ್ರಮಾಂಕದಲ್ಲಿ ಜವಾಬ್ಧಾರಿಯುತ ಪ್ರದರ್ಶನ ನೀಡಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಅವರು 35 ಎಸೆತಗಳಲ್ಲಿ 51 ರನ್ ಸಿಡಿಸಿದರು. ಮೊದಲಿಗೆ ನವಾಜ್ ಜೊತೆಗೆ ಅರ್ಧ ಶತಕದ ಜೊತೆಯಾಟದಲ್ಲಿ ಭಾಗಿಯಾದ ಇಫ್ತಿಕಾರ್ ಬಳಿಕ ಶದಬ್ ಖಾನ್ ಜೊತೆಗೆ ಅಮೋಘ ಆಟವನ್ನು ಪ್ರದರ್ಶಿಸಿದರು. ಈ ಜೋಡಿ 35 ಎಸೆತಗಳಲ್ಲಿ 82 ರನ್‌ಗಳ ಜೊತೆಯಾಟ ನೀಡುವ ಮೂಲಕ ಪಾಕಿಸ್ತಾನ ದೊಡ್ಡ ಮೊತ್ತದ ಗುರಿ ನೀಡಲು ಕಾರಣವಾದರು. ಈ ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡು 185 ರನ್‌ಗಳನ್ನು ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications