ICC Player Of The Month Award : ಮೊದಲ ಬಾರಿಗೆ ವಿರಾಟ್ ಕೊಹ್ಲಿ ನಾಮನಿರ್ದೇಶನ

ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟಿ20 ವಿಶ್ವಕಪ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಐಸಿಸಿ ತಿಂಗಳ ಆಟಗಾರನಾಗಿ ನಾಮನಿರ್ದೇಶನಗೊಂಡಿದ್ದಾರೆ.

ಸತತ ಮೂರು ವರ್ಷಗಳ ಸುದೀರ್ಘ ಕಾಯುವಿಕೆ ನಂತರ ವಿರಾಟ್ ಕೊಹ್ಲಿ ತಮ್ಮ ಫಾರ್ಮ್‌ಗೆ ಮರಳಿದರು. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ನೀಡಿದ್ದ ಅವರು, ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಅದ್ಭುತ ಪ್ರದರ್ಶನ ನೀಡಿದ್ದರು.

ಕೊಹ್ಲಿ ಬ್ಯಾಟಿಂಗ್ ಬಗ್ಗೆ ಯಾರು ಟೀಕಿಸಿದ್ದರೋ, ಆತನನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಬೇಡಿ ಅಂದವರೇ ಈಗ ಆತನನ್ನು ಹಾಡಿ ಹೊಗಳುವಂತಾಗಿದೆ. ಕೊಹ್ಲಿ ಎಲ್ಲರ ಟೀಕೆಗಳಿಗೆ, ಎಲ್ಲರ ಪ್ರಶ್ನೆಗಳಿಗೆ ಬ್ಯಾಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

PAK vs SA: ನಿರ್ಣಾಯಕ ಘಟ್ಟದಲ್ಲಿ ಹರಿಣ ಪಡೆಗೆ ಆಘಾತ; ಪಾಕ್ ವಿರುದ್ಧ ಹೊರಗುಳಿದ ಮಿಲ್ಲರ್, ಕೇಶವ್PAK vs SA: ನಿರ್ಣಾಯಕ ಘಟ್ಟದಲ್ಲಿ ಹರಿಣ ಪಡೆಗೆ ಆಘಾತ; ಪಾಕ್ ವಿರುದ್ಧ ಹೊರಗುಳಿದ ಮಿಲ್ಲರ್, ಕೇಶವ್

ಅಕ್ಟೋಬರ್ ತಿಂಗಳಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ ಅವರನ್ನು ಸ್ಪರ್ಧೆಗೆ ನಾಮನಿರ್ದೇಶನ ಮಾಡಲಾಗಿದೆ. ವಿರಾಟ್ ಕೊಹ್ಲಿ ಜೊತೆಗೆ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಡೇವಿಡ್ ಮಿಲ್ಲರ್ ಮತ್ತು ಜಿಂಬಾಬ್ವೆಯ ಸ್ಟಾರ್ ಅಲ್‌ರೌಂಡರ್ ಸಿಕಂದರ್ ರಾಜಾ ಕೂಡ ನಾಮನಿರ್ದೇಶನಗೊಂಡಿದ್ದಾರೆ.

ಮೂರು ಆಟಗಾರರು ಅಕ್ಬೋಬರ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗಾಗಿ ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡದಿಂದ ತಲಾ ಒಬ್ಬರು ನಾಮನಿರ್ದೇಶನಗೊಂಡಿದ್ದಾರೆ.

ಮೊದಲಬಾರಿ ವಿರಾಟ್ ಕೊಹ್ಲಿ ನಾಮನಿರ್ದೇಶನ

ಮೊದಲಬಾರಿ ವಿರಾಟ್ ಕೊಹ್ಲಿ ನಾಮನಿರ್ದೇಶನ

ವಿರಾಟ್ ಕೊಹ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಾಲ್ಕು ಇನ್ನಿಂಗ್ಸ್‌ ಆಡಿದ್ದಾರೆ. ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣವಾದರು. ಇದು ವಿರಾಟ್ ಕೊಹ್ಲಿ ಟಿ20 ವೃತ್ತಿ ಜೀವನದ ಶ್ರೇಷ್ಠ ಇನ್ನಿಂಗ್ಸ್ ಎಂದು ಹಲವರು ಹೇಳಿದ್ದಾರೆ.

ಭಾರತವು 160 ರನ್‌ಗಳನ್ನು ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ 31 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ, ಕೊಹ್ಲಿ ಹಾರ್ದಿಕ್ ಪಾಂಡ್ಯ ಜೊತೆ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು. ನಂತರ ನೆದರ್ಲ್ಯಾಂಡ್ಸ್ ವಿರುದ್ಧ 44 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಾತ್ರ 12 ರನ್ ಗಳಿಸಿ ಔಟಾದರು.

ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ 28 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದ್ದರು. ದಿತು. ಒಟ್ಟಾರೆಯಾಗಿ, ಕೊಹ್ಲಿ ಅಕ್ಟೋಬರ್‌ನಲ್ಲಿ 150.73 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ 205 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾದ Unsung ಹೀರೋ: ಭಾರತದ ಆಟಗಾರರ ಶೂ ಕ್ಲೀನ್ ಮಾಡಿದ ರಘು ಕುರಿತು ಭಾರೀ ಪ್ರಶಂಸೆ

ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್

ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್

ಡೇವಿಡ್ ಮಿಲ್ಲರ್ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತದ ವಿರುದ್ಧದ ಟಿ20 ಸರಣಿಯ ಪಂದ್ಯದಲ್ಲಿ 47 ಎಸೆತಗಳಲ್ಲಿ ಅಜೇಯ 106 ರನ್ ಗಳಿಸಿದರು. ಅವರ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ಸೋಲನ್ನಪ್ಪಿತು. ನಂತರ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಅಜೇಯ 75 ರನ್ ಗಳಿಸಿದರು.

ನಂತರ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಭಾರತದ ವಿರುದ್ಧ ಅಜೇಯ 59 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿಗೆ ಕಾರಣವಾದರು. ಅಕ್ಟೋಬರ್ ತಿಂಗಳಿನಲ್ಲಿ ಏಕದಿನ ಮತ್ತು ಟಿ20 ಸೇರಿ ಒಟ್ಟು ಏಳು ಇನ್ನಿಂಗ್ಸ್‌ಗಳನ್ನು ಆಡಿದರು, 146.37 ಉತ್ತಮ ಸ್ಟ್ರೈಕ್-ರೇಟ್‌ನಲ್ಲಿ 303 ರನ್ ಗಳಿಸಿದ್ದಾರೆ.

ಸ್ಟಾರ್ ಆಲ್‌ರೌಂಡರ್ ಸಿಕಂದರ್ ರಾಜಾ

ಸ್ಟಾರ್ ಆಲ್‌ರೌಂಡರ್ ಸಿಕಂದರ್ ರಾಜಾ

ಅನುಭವಿ ಆಲ್‌ರೌಂಡರ್ ಅಕ್ಟೋಬರ್‌ನಲ್ಲಿ ಜಿಂಬಾಬ್ವೆಗಾಗಿ ಕೆಲವು ಅದ್ಭುತ ಆಲ್‌ರೌಂಡ್ ಪ್ರದರ್ಶನಗಳನ್ನು ನೀಡಿದರು. ರಾಜಾ ಟಿ20 ವಿಶ್ವಕಪ್‌ನಲ್ಲಿ ತಮ್ಮ ಉತ್ತಮ ಫಾರ್ಮ್‌ ಅನ್ನು ಮುಂದುವರೆಸಿದರು. ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 82 ರನ್ ಗಳಿಸಿದರು ಮತ್ತು 4 ಓವರ್ ಗಳಲ್ಲಿ 22 ರನ್ 1 ವಿಕೆಟ್ ಪಡೆದು ಜಿಂಬಾಬ್ವೆ ಗೆಲ್ಲಲು ಕಾರಣವಾದರು.

ಸ್ಕಾಟ್ಲೆಂಡ್ ವಿರುದ್ಧ ಮತ್ತೊಂದು ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನವನ್ನು ನೀಡಿದರು, ಅವರು 23 ಎಸೆತಗಳಲ್ಲಿ 40 ರನ್ ಗಳಿಸಿದರು ಮತ್ತು 4 ಓವರ್ ಗಳಲ್ಲಿ 20 ರನ್ 1 ವಿಕೆಟ್ ಪಡೆದು ಜಿಂಬಾಬ್ವೆ ಗೆಲ್ಲಲು ಕಾರಣವಾದರು. ವೆಸ್ಟ್ ಇಂಡೀಸ್ ವಿರುದ್ಧ 4 ಓವರ್ ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು, ಪಾಕಿಸ್ತಾನದ ವಿರುದ್ಧ 25 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸುವಲ್ಲಿ ರಾಜಾ ಮಹತ್ವದ ಕೊಡುಗೆ ನೀಡಿದರು.

For Quick Alerts
ALLOW NOTIFICATIONS
For Daily Alerts
Story first published: Thursday, November 3, 2022, 15:39 [IST]
Other articles published on Nov 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X