PAK vs SL 2ನೇ ಟೆಸ್ಟ್: ಧನಂಜಯ ಡಿ ಸಿಲ್ವಾ ಶತಕ, ಪಾಕಿಸ್ತಾನಕ್ಕೆ 508 ರನ್‌ಗಳ ಬೃಹತ್ ಗುರಿ

ಪಾಕಿಸ್ತಾನ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದು, 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ಪಂದ್ಯದಲ್ಲಿ ಜಯ ಸಾಧಿಸಿದ ಪಾಕಿಸ್ತಾನ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಇದೇ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಟವನ್ನು ನಡೆಸುತ್ತಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಬ್ಯಾಟಿಂಗ್ ಆಯ್ದುಕೊಂಡರು. ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 378 ರನ್ ಕಲೆಹಾಕಿತು. ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 231 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ 147 ರನ್‌ಗಳ ಬೃಹತ್ ಹಿನ್ನಡೆಯನ್ನು ಅನುಭವಿಸಿತ್ತು. ನಂತರ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿ ಐದನೇ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ 323 ರನ್‌ಗಳ ಮುನ್ನಡೆಯನ್ನು ಸಾಧಿಸಿತ್ತು. ಹೀಗೆ ಸಾಮಾನ್ಯ ಮೊತ್ತಕ್ಕೆ ತನ್ನ ಮೊದಲ ಐದು ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡಕ್ಕೆ ನಾಯಕ ಕರುಣರತ್ನೆ ಮತ್ತು ಧನಂಜಯ ಡಿ ಸಿಲ್ವಾ ನಾಲ್ಕನೇ ದಿನದಾಟದಲ್ಲಿ ಆಸರೆಯಾಗಿದ್ದಾರೆ.
ನಾಯಕ ದಿಮುತ್ ಕರುಣರತ್ನೆ 61 ರನ್ ಕಲೆಹಾಕಿದರೆ, ಧನಂಜಯ ಡಿ ಸಿಲ್ವಾ 109 ರನ್ ಕಲೆಹಾಕಿದರು. ನಂತರ ಕಣಕ್ಕಿಳಿದ ದುನಿತ್ ವೆಲ್ಲಲಾಗೆ 18 ರನ್ ಗಳಿಸಿ ಔಟ್ ಆಗುತ್ತಿದ್ದ ಬೆನ್ನಲ್ಲೇ ಶ್ರೀಲಂಕಾ ಡಿಕ್ಲೇರ್ ಮಾಡಿಕೊಂಡಿತು. ಶ್ರೀಲಂಕಾದ ರಮೇಶ್ ಮೆಂಡಿಸ್ ಅಜೇಯ 45 ರನ್ ಕಲೆಹಾಕಿದ್ದು, ತಂಡ ಡಿಕ್ಲೇರ್ ಸಮಯಕ್ಕೆ 8 ವಿಕೆಟ್ ನಷ್ಟಕ್ಕೆ 360 ರನ್ ಕಲೆಹಾಕಿತು. ಈ ಮೂಲಕ ಶ್ರೀಲಂಕಾ ಎದುರಾಳಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 508 ರನ್‌ಗಳ ಗುರಿಯನ್ನು ನೀಡಿದೆ.

ದಿನದಾಟದಂತ್ಯಕ್ಕೆ ಪಾಕ್ 89ಕ್ಕೆ 1
ಇನ್ನು ಶ್ರೀಲಂಕಾ ನೀಡಿರುವ ಗುರಿಯನ್ನು ಬೆನ್ನತ್ತಿರುವ ಪಾಕಿಸ್ತಾನ ತಂಡ ನಾಲ್ಕನೇ ದಿನದಾಟದಂತ್ಯಕ್ಕೆ 89 ರನ್ ಕಲೆಹಾಕಿ 1 ವಿಕೆಟ್ ಕಳೆದುಕೊಂಡಿದೆ. ಪಾಕಿಸ್ತಾನದ ಆರಂಭಿಕ ಆಟಗಾರ ಅಬ್ದುಲ್ಲಾ ಶಫಿಕ್ 16 ರನ್ ಗಳಿಸಿ ಔಟ್ ಆಗಿದ್ದಾರೆ. ಇನ್ನು ಮೂರನೇ ವಿಕೆಟ್‌ಗೆ ಜತೆಯಾಗಿರುವ ನಾಯಕ ಬಾಬರ್ ಅಜಮ್ ಮತ್ತು ಇಮಾಮ್ ಉಲ್ ಹಕ್ 47 ರನ್‌ಗಳ ಜತೆಯಾಟವನ್ನಾಡಿದ್ದು, ಅಜೇಯರಾಗಿ ಕಣದಲ್ಲಿದ್ದಾರೆ. ಇಮಾಮ್ ಉಲ್ ಹಕ್ ಅಜೇಯ 46 ರನ್ ಮತ್ತು ನಾಯಕ ಬಾಬರ್ ಅಜಮ್ ಅಜೇಯ 26 ರನ್ ಕಲೆಹಾಕಿದ್ದಾರೆ. ಈ ಮೂಲಕ ಪಾಕಿಸ್ತಾನ ನಾಲ್ಕನೇ ದಿನದಾಟದಂತ್ಯಕ್ಕೆ 419 ರನ್‌ಗಳ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದು, ಐದನೇ ದಿನದಾಟದಂದು ಪಂದ್ಯವನ್ನು ಯಶಸ್ವಿಯಾಗಿ ಡ್ರಾ ಮಾಡಿಕೊಳ್ಳುತ್ತಾ ಅಥವಾ ಮೊದಲ ಇನ್ನಿಂಗ್ಸ್‌ನಂತೆ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಗುತ್ತಾ ಕಾದುನೋಡಬೇಕಿದೆ.

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್
ದಿಮುತ್ ಕರುಣಾರತ್ನೆ (ನಾಯಕ), ಓಶದ ಫೆರ್ನಾಂಡೊ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೊ.ಎರಡನೇ ಇನ್ನಿಂಗ್ಸ್‌ನಲ್ಲಿ ತಂಡ ಕುಸಿತ ಕಂಡಿದ್ದಾಗ ನಾಯಕ ದಿಮುತ್ ಕರುಣರತ್ನೆ ಜತೆ ಸೇರಿ ಉತ್ತಮ ಆಟವನ್ನಾಡಿದ ಧನಂಜಯ ಡಿ ಸಿಲ್ವಾ ತಮ್ಮ ಎಂಟನೇ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ.

ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ ಆಡುವ ಬಳಗ ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications