PAK vs SL 2ನೇ ಟೆಸ್ಟ್: ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದ ಪಾಕಿಸ್ತಾನ; 3ನೇ ದಿನದಾಟದ ಲೈವ್ ಸ್ಕೋರ್

ಪಾಕಿಸ್ತಾನ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದು, 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ಪಂದ್ಯದಲ್ಲಿ ಜಯ ಸಾಧಿಸಿದ ಪಾಕಿಸ್ತಾನ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಇದೇ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಟವನ್ನು ನಡೆಸುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಬ್ಯಾಟಿಂಗ್ ಆಯ್ದುಕೊಂಡಿದ್ದು, ಶ್ರೀಲಂಕಾ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ 378 ರನ್ ಕಲೆಹಾಕಿದೆ. ಇತ್ತ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಪಾಕಿಸ್ತಾನ ತಂಡ ಎರಡನೇ ದಿನದಾಟಕ್ಕೆ 7 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿದ್ದು, ಎರಡನೆ ದಿನದಾಟದಂತ್ಯಕ್ಕೆ ಶ್ರೀಲಂಕಾ 187 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಲೈವ್ ಸ್ಕೋರ್ ಕೆಳಕಂಡಂತಿದೆ.

ಶ್ರೀಲಂಕಾ ಇನ್ನಿಂಗ್ಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಒಶಾಡಾ ಫೆರ್ನಾಂಡೋ ಮತ್ತು ನಾಯಕ ದಿಮುತ್ ಕರುಣರತ್ನೆ 91 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಸಾಮಾನ್ಯ ಆರಂಭವನ್ನು ಕಟ್ಟಿಕೊಟ್ಟರು. ಒಶಾಡಾ ಫರ್ನಾಂಡೊ 50 ಗಳಿಸಿ ಔಟ್ ಆದರೆ, ದಿಮುತ್ ಕರುಣರತ್ನೆ 40 ರನ್ ಕಲೆಹಾಕಿದರು. ಉಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಸಾಲ್ ಮೆಂಡಿಸ್ 3 ರನ್, ಏಂಜೆಲೊ ಮ್ಯಾಥ್ಯೂಸ್ 42 ರನ್, ದಿನೇಶ್ ಚಾಂಡಿಮಾಲ್ 80 ರನ್, ಧನಂಜಯ ಡಿ ಸಿಲ್ವಾ 33 ರನ್, ನಿರೋಷನ್ ಡಿಕ್ವೆಲ್ಲಾ 51 ರನ್, ದುನೀತ್ ವೆಲ್ಲಲಾಗೆ 11 ರನ್, ರಮೇಶ್ ಮೆಂಡಿಸ್ 35 ರನ್, ಪ್ರಭಾತ್ ಜಯಸೂರ್ಯ 8 ರನ್ ಮತ್ತು ಅಸಿತಾ ಫರ್ನಾಂಡೊ ಅಜೇಯ 4 ರನ್ ಕಲೆ ಹಾಕಿದರು. ಈ ಮೂಲಕ ಶ್ರೀಲಂಕಾ 378 ರನ್ ಕಲೆ ಹಾಕಿತು.
ಪಾಕಿಸ್ತಾನದ ಪರ ನಸೀಮ್ ಷಾ ಮತ್ತು ಯಾಸಿರ್ ಶಾ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ನವಾಜ್ 2 ವಿಕೆಟ್ ಮತ್ತು ನೌಮನ್ ಅಲಿ 1 ವಿಕೆಟ್ ಪಡೆದುಕೊಂಡರು.

ಕುಸಿದ ಪಾಕಿಸ್ತಾನ
ಇನ್ನು ಪಂದ್ಯದ ಎರಡನೇ ದಿನದಾಟದಂದು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ ತೀವ್ರ ಕುಸಿತ ಕಂಡಿದೆ. ಪಾಕಿಸ್ತಾನದ ಪರ ಆರಂಭಿಕರಾಗಿ ಕಣಕ್ಕಿಳಿದ ಅಬ್ದುಲ್ಲಾ ಶಫೀಕ್ ಡಕ್ ಔಟ್ ಆದರೆ, ಇಮಾಮ್ ಉಲ್ ಹಕ್ 32, ನಾಯಕ ಬಾಬರ್ ಅಜಮ್ 16, ಮೊಹಮ್ಮದ್ ರಿಜ್ವಾನ್ 24, ಫಾವದ್ ಆಲಂ 24, ಆಘ ಸಲ್ಮಾನ್ 62, ಮೊಹಮ್ಮದ್ ನವಾಜ್ 12 ರನ್ ಕಲೆ ಹಾಕಿದರು. ಎರಡನೇ ದಿನದಾಟದಂತ್ಯಕ್ಕೆ ಪಾಕಿಸ್ತಾನದ ಯಾಸಿರ್ ಶಾ ಅಜೇಯ 13 ರನ್ ಕಲೆಹಾಕಿ ಸ್ಟ್ರೈಕ್ ಕಾಯ್ದುಕೊಂಡರೆ, ಯಾವುದೇ ರನ್ ಗಳಿಸದ ಹಸನ್ ಅಲಿ ಕೂಡ ಕಣದಲ್ಲಿದ್ದರು. ಹೀಗೆ ಎರಡನೇ ದಿನದಾಟದಂದು ತೀವ್ರ ಕುಸಿತ ಕಂಡಿರುವ ಪಾಕಿಸ್ತಾನ ಮೂರನೇ ದಿನದಾಟದಂದು ಚೇತರಿಸಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಶ್ರೀಲಂಕಾ ಪರ ರಮೇಶ್ ಮೆಂಡಿಸ್ 3 ವಿಕೆಟ್ ಪಡೆದಿದ್ದರೆ, ಪ್ರಭಾತ್ ಜಯಸೂರ್ಯ 2 ವಿಕೆಟ್ ಹಾಗೂ ಅಸಿತಾ ಫರ್ನಾಂಡೊ ಮತ್ತು ಧನಂಜಯ ಡಿಸಿಲ್ವಾ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗಗಳು
ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಓಶದ ಫೆರ್ನಾಂಡೊ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೊ
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications