ಪಾಕ್ vs ವಿಂಡೀಸ್ ಮುಖಾಮುಖಿಯಲ್ಲಿ ಹೆಚ್ಚು ಗೆದ್ದವರು ಯಾರು? ಮೊದಲ ಏಕದಿನ ಪಂದ್ಯದ ಮಾಹಿತಿ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಬೃಹತ್ ಪ್ರಮಾಣದಲ್ಲಿ ಶುರುವಾಗಿದ್ದು, ವೆಸ್ಟ್ ಇಂಡೀಸ್ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದೆ. ಈ ಪ್ರವಾಸದಲ್ಲಿ ಇತ್ತಂಡಗಳ ನಡುವೆ ಮೂರು ಏಕದಿನ ಪಂದ್ಯ ನಡೆಯಲಿದ್ದು, ಎಲ್ಲಾ ಪಂದ್ಯಗಳೂ ಸಹ ರಾವಲ್ಪಿಂಡಿಯ ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ನಡೆಯಲಿವೆ. ಇನ್ನು ಈ ಹಿಂದೆ 2021ರ ಡಿಸೆಂಬರ್ ತಿಂಗಳಿನಲ್ಲಿ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದಾಗಲೇ ಈ ಮೂರು ಪಂದ್ಯಗಳು ನಡೆಯಬೇಕಿತ್ತು. ಆದರೆ, ಇತ್ತಂಡಗಳ ನಡುವಿನ ಮೂರು ಟಿ ಟ್ವೆಂಟಿ ಪಂದ್ಯಗಳು ಮುಕ್ತಾಯವಾದ ನಂತರ ಕ್ಯಾಂಪ್‌ನಲ್ಲಿ ಕೊವಿಡ್ ಸಮಸ್ಯೆ ಎದುರಾಗಿತ್ತು. ಹೀಗಾಗಿ ನಂತರ ಆಯೋಜನೆಯಾಗಿದ್ದ ಏಕದಿನ ಸರಣಿಯನ್ನು ಮುಂದೂಡಲಾಗಿತ್ತು.
ಇದೀಗ ಆ ಮೂರು ಪಂದ್ಯಗಳ ಏಕದಿನ ಸರಣಿ ಮರು ಆಯೋಜನೆಯಾಗಿದ್ದು, ನಾಳೆ ( ಜೂನ್ 8 ) ಮೊದಲ ಏಕದಿನ ಪಂದ್ಯ ನಡೆಯಲಿದೆ. ರಾವಲ್ಪಿಂಡಿಯ ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸುವತ್ತ ಕಣ್ಣಿಟ್ಟಿದ್ದರೆ, ಹಿಂದಿನ ಎಲ್ಲಾ ಮೂರು ಟಿ ಟ್ವೆಂಟಿ ಪಂದ್ಯಗಳನ್ನು ಸೋತು ವೈಟ್‌ವಾಷ್ ಮುಖಭಂಗಕ್ಕೊಳಗಾಗಿದ್ದ ವೆಸ್ಟ್ ಇಂಡೀಸ್ ಈ ಏಕದಿನ ಸರಣಿಯನ್ನು ಗೆದ್ದು ಕಮ್‌ಬ್ಯಾಕ್ ಮಾಡುವತ್ತ ಚಿತ್ತ ನೆಟ್ಟಿದೆ.
ಇತ್ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದ ಮಾಹಿತಿ ಹಾಗೂ ಇತ್ತಂಡಗಳ ನಡುವೆ ಇಲ್ಲಿಯವರೆಗೂ ನಡೆದಿರುವ ಪಂದ್ಯಗಳ ಪೈಕಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಸಂಭಾವ್ಯ ಆಡುವ ಬಳಗ
ಪಾಕಿಸ್ತಾನ ಆಡುವ ಬಳಗ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್
ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ ಬಳಗ: ಶಾಯ್ ಹೋಪ್ (ವಿಕೆಟ್ ಕೀಪರ್), ಶಮರ್ ಬ್ರೂಕ್ಸ್, ಎನ್ಕ್ರುಮಾ ಬೋನರ್, ನಿಕೋಲಸ್ ಪೂರನ್ (ನಾಯಕ), ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ಕೈಲ್ ಮೇಯರ್ಸ್, ಅಲ್ಜಾರಿ ಜೋಸೆಫ್, ಹೇಡನ್ ವಾಲ್ಷ್, ಅಕೆಲ್ ಹೋಸೇನ್, ಶೆರ್ಫೇನ್ ರುದರ್‌ಫೋರ್ಡ್

ಮುಖಾಮುಖಿಯಲ್ಲಿ ಯಾರು ಬಲಿಷ್ಟರು?
ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 134 ಏಕದಿನ ಪಂದ್ಯಗಳು ನಡೆದಿದ್ದು, ಪಾಕಿಸ್ತಾನ 60 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ವೆಸ್ಟ್ ಇಂಡೀಸ್ 71 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದ 3 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಈ ಮೂಲಕ ಇತ್ತಂಡಗಳ ನಡುವಿನ ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್ ಸ್ಪಷ್ಟ ಮೇಲುಗೈ ಸಾಧಿಸಿದೆ.

ಪಂದ್ಯದ ಮಾಹಿತಿ
ಇತ್ತಂಡಗಳ ನಡುವಿನ ಮೊದಲ ಏಕದಿನ ಪಂದ್ಯವು ನಾಳೆ ( ಜೂನ್ 8 ) ಸಂಜೆ 4.30ಕ್ಕೆ ಆರಂಭವಾಗಲಿದೆ. ಈ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ನಲ್ಲಿ ವೀಕ್ಷಿಸಬಹುದು. ಮೊಬೈಲ್ ಅಪ್ಲಕೇಷನ್ ಆದ ಸೋನಿ ಲಿವ್‌ನಲ್ಲಿಯೂ ಸಹ ವೀಕ್ಷಿಸಬಹುದಾಗಿದೆ.
ಪಿಚ್ ವರದಿ: ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬೌಲರ್ಸ್ ಮತ್ತು ಬ್ಯಾಟ್ಸ್‌ಮನ್ ಇಬ್ಬರಿಗೂ ಸಮನಾಗಿ ಸಹಕಾರಿಯಾಗಲಿದೆ. ಇನ್ನು ಈ ಪಿಚ್‌ನಲ್ಲಿ ದಾಖಲಾಗಿರುವ ಗರಿಷ್ಠ ತಂಡದ ಮೊತ್ತ 323 ಆಗಿದ್ದು, ಈ ಮೊತ್ತವನ್ನು ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧ ದಾಖಲಿಸಿತ್ತು. ಇನ್ನು ಇದೊಂದೇ ತಂಡವೊಂದು ಈ ಕ್ರೀಡಾಂಗಣದಲ್ಲಿ 300ಕ್ಕೂ ಹೆಚ್ಚು ರನ್ ದಾಖಲಿಸಿದ ಉದಾಹರಣೆಯಾಗಿದೆ. ಹಾಗೂ ಈ ಕ್ರೀಡಾಂಗಣದಲ್ಲಿ ಟಾಸ್ ಗೆಲ್ಲುವ ನಾಯಕ ಚೇಸಿಂಗ್ ಆಯ್ಕೆ ಮಾಡಿಕೊಳ್ಳುವತ್ತ ಚಿಂತಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications