For Quick Alerts
ALLOW NOTIFICATIONS  
For Daily Alerts
 

Pak vs WI: ಸತತ 6ನೇ ಏಕದಿನ ಅರ್ಧ ಶತಕ ಬಾರಿಸಿದ ಪಾಕಿಸ್ತಾನದ ಈ ಜೋಡಿ

Pak vs WI: Babar Azam And Imam-ul-Haq Duo Scored of 6th Consecutive half-Century In ODIs

ಮುಲ್ತಾನ್‌ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ಮೊತ್ತ ಕಲೆ ಹಾಕಿದೆ. ನಾಯಕ ಬಾಬರ್ ಅಜಮ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಮತ್ತು ನಿಗದಿತ 50 ಓವರ್‌ಗಳಲ್ಲಿ 275/8 ಪೇರಿಸಿತು.

ಪಾಕ್‌ನ ಆರಂಭಿಕ ಇಮಾಮ್-ಉಲ್-ಹಕ್ ಜೊತೆಗಿನ ಎರಡನೇ ವಿಕೆಟ್‌ಗೆ ಅಸಾಧಾರಣ 120 ರನ್ ಜೊತೆಯಾಟದ ನೀಡಿದರು. ಆರಂಭಿಕ ಫಖರ್ ಜಮಾನ್ 17 ರನ್ ಗಳಿಸಿ ಔಟಾದ ನಂತರ ಬಾಬರ್ ಅಜಮ್ ಅವರು ಇಮಾಮ್-ಉಲ್-ಹಕ್ ಜೊತೆ ಸೇರಿಕೊಂಡು, ಇಬ್ಬರೂ ವೆಸ್ಟ್ ಇಂಡೀಸ್ ಬೌಲರ್‌ಗಳ ಮೇಲೆ ಬ್ಯಾಟಿಂಗ್ ಸವಾರಿ ಮಾಡಿದರು.

ಇಮಾಮ್ ಮತ್ತು ಬಾಬರ್ ಇಬ್ಬರೂ ಸತತವಾಗಿ ಉತ್ತಮ ಫಾರ್ಮ್‌ ಮುಂದುವರೆಸಿದ್ದಾರೆ ಮತ್ತು ಅವರಿಬ್ಬರು ತಮ್ಮ ವೈಯಕ್ತಿಕ ಅರ್ಧ ಶತಕಗಳನ್ನು ಗಳಿಸಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದರು.

Pak vs WI: Babar Azam And Imam-ul-Haq Duo Scored of 6th Consecutive half-Century In ODIs

ಇದು ಎರಡೂ ಬ್ಯಾಟರ್‌ಗಳಿಗೆ ಐವತ್ತು ಪ್ಲಸ್‌ನ ಆರನೇ ನೇರ ಇನ್ನಿಂಗ್ಸ್ ಆಗಿದೆ. ನಾಯಕ ಬಾಬರ್ ಅಜಮ್ ಸತತ ಮೂರು ಶತಕಗಳನ್ನು ಗಳಿಸಿದ್ದಾರೆ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ನಂತರ ಏಕದಿನದಲ್ಲಿ ಸತತ ಮೂರು ಶತಕಗಳನ್ನು ಗಳಿಸಿದ ಎರಡನೇ ಆಟಗಾರನಾಗಲು ಸಾಧ್ಯವಾಯಿತು. ನಾಲ್ಕನೇ ಶತಕ ಬಾರಿಸುವ ತವಕದಲ್ಲಿದ್ದ ಪಾಕ್ ನಾಯಕ 77 ರನ್ ಗಳಿಸಿ ಔಟಾದರು.

ಬಾಬರ್ ಅಜಮ್ ಜೊತೆಗಿನ ತಪ್ಪು ತಿಳುವಳಿಕೆಯಿಂದ ಅಂತಿಮವಾಗಿ 72 ರನ್ ಗಳಿಸಿ ರನ್ ಔಟ್ ಆದ ಇಮಾಮ್-ಉಲ್-ಹಕ್ ಏಕದಿನ ಪಂದ್ಯಗಳಲ್ಲಿ ಸತತವಾಗಿ 56, 103, 106, 89, 65 ಮತ್ತು 72 ರನ್‌ಗಳನ್ನು ಗಳಿಸಿದ್ದಾರೆ.

Pak vs WI: Babar Azam And Imam-ul-Haq Duo Scored of 6th Consecutive half-Century In ODIs

ಬಾಬರ್ ಅಜಮ್ ಮತ್ತು ಇಮಾಮ್-ಉಲ್-ಹಕ್ ಇಬ್ಬರೂ ಮಾರ್ಕ್ ವಾ, ಗಾರ್ಡನ್ ಗ್ರೀನಿಡ್ಜ್, ಆಂಡ್ರ್ಯೂ ಜೋನ್ಸ್, ಮೊಹಮ್ಮದ್ ಯೂಸುಫ್, ಕ್ರಿಸ್ ಗೇಲ್, ಶಾಯ್ ಹೋಪ್, ಪಾಲ್ ಸ್ಟಿರ್ಲಿಂಗ್, ರಾಸ್ ಟೇಲರ್ ಮತ್ತು ಕೇನ್ ವಿಲಿಯಮ್ಸನ್ ಅವರಂತಹ ಬ್ಯಾಟರ್‌ಗಳ ಪಟ್ಟಿಯಲ್ಲಿ ಸತತ 6ನೇ ಬಾರಿಗೆ 50 ಪ್ಲಸ್ ಸ್ಕೋರ್‌ಗಳೊಂದಿಗೆ ಏಕದಿನ ಪಂದ್ಯಗಳಲ್ಲಿ ದಾಖಲೆ ಮಾಡಿದ್ದಾರೆ.

ಪಾಕಿಸ್ತಾನದ ಬ್ಯಾಟಿಂಗ್ ದಂತಕಥೆ ಜಾವೇದ್ ಮಿಯಾಂದಾದ್ ಏಕದಿನ ಪಂದ್ಯಗಳಲ್ಲಿ ಸತತ 9 ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರು 1987 ರಲ್ಲಿ ಸತತ 9 ಬಾರಿ 50-ಪ್ಲಸ್ ರನ್ ಹೊಂದಿದ್ದಾರೆ.

ಒಂದು ಓವರ್ ಥ್ರೋ !! ಅದರಿಂದ ಆಗಿದ್ದು ಏನು ಗೊತ್ತಾ!! | Oneindia Kannada

ಬಾಬರ್ ಆಜಮ್ ಅವರ ವೃತ್ತಿಜೀವನದ ಉತ್ತುಂಗ ಫಾರ್ಮ್‌ನಲ್ಲಿ ಮತ್ತು ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಜಾವೇದ್ ಮಿಯಾಂದಾದ್ ಅವರಂತೆ ಎತ್ತರಕ್ಕೆ ಏರುತ್ತಾರೆ ಎಂದು ಹಲವರು ನಿರೀಕ್ಷಿಸಿದ್ದಾರೆ.

Story first published: Friday, June 10, 2022, 23:14 [IST]
Other articles published on Jun 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+