Pak vs WI, ಏಕದಿನ ಪಂದ್ಯ: ನಾಯಕನಾಗಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಬಾಬರ್ ಅಜಂ

ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭವಾಗಿದ್ದು ಮೊದಲ ಏಕದಿನ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಭರ್ಜರಿ ಶತಕ ಬಾರಿಸಿದ್ದು ನಾಯಕನಾಗಿ ಭಾರತದ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ವೇಗವಾಗಿ 1000 ರನ್‌ಗಳನ್ನು ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ಬಾಬರ್ ಅಜಂ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಮುಲ್ತಾನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ ಬಾಬರ್ ಅಜಂ.
ವಿರಾಟ್ ಕೊಹ್ಲಿ ಭಾರತದ ನಾಯಕನಾಗಿ ಈ ಸಾಧನೆಯನ್ನು 2017ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಮಾಡಿದ್ದರು. ಈ ಮೈಲಿಗಲ್ಲು ದಾಟಲು ಕೊಹ್ಲಿ 17 ಇನ್ನಿಂಗ್ಸ್ ಬಳಸಿಕೊಂಡಿದ್ದರು. ವೆಸ್ಟ್ ಇಮಡೀಸ್ ವಿರುದ್ಧಧ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಈ ಸಾಧನೆ ಮಾಡಲು ಪಾಕ್ ನಾಯಕನಿಗೆ 98 ರನ್‌ಗಳ ಅವಶ್ಯಕತೆಯಿತ್ತು. ಇನ್ನೂ ನಾಲ್ಕು ಇನ್ನಿಂಗ್ಸ್‌ಗಳು ಬಾಕಿಯಿತ್ತು. ಆದರೆ ಬಾಬರ್ ಅಜಂ ಮೊದಲ ಪಂದ್ಯದಲ್ಲಿಯೇ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಾಯಕನಾಗಿ ಬಾಬರ್ ಭರ್ಜರಿ ಆಟ
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಏಕದಿನ ನಾಯಕನಾಗಿ 13 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕನಾಗಿ 91.36ರ ಸರಾಸರಿಯಲ್ಲಿ 27ರ ಹರೆಯದ ಆಟಗಾರ ಬ್ಯಾಟ್ ಬೀಸಿದ್ದು 103.71ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ನಾಯಕನಾಗಿ ಆರು ಶತಕ ಹಾಗೂ ಮೂರು ಅರ್ಧ ಶತಕ ದಾಖಲಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ
ಲಾಹೋರ್ ಮೂಲದ ಬಾಬರ್ ಅಜಂ ಸದ್ಯ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಆಟಗಾರ ಎನಿಸಿದ್ದಾರೆ. 87 ಏಕದಿನ ಪಂದ್ಯಗಳಲ್ಲಿ 4364 ರನ್‌ಗಳಿಸಿದರು ಬಾಬರ್ 59.78ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 17 ಶತಕ ಹಾಗೂ 18 ಅರ್ಧ ಶತಕಗಳು ಈ ಪಾಕಿಸ್ತಾನದ ಆಟಗಾರನ ಹೆಸರಿನಲ್ಲಿದೆ.

ಉತ್ತಮ ಮೊತ್ತ ಗಳಿಸಿದ ವೆಸ್ಟ್ ಇಂಡೀಸ್
ಇನ್ನು ಮುಲ್ತಾನ್‌ನಲ್ಲಿ ನಡೆದ ಮೊದಲ ಏಕದೊನ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಭರ್ಜಿ ಬ್ಯಾಟಿಂಗ್ ನಡೆಸಿತು. ಆರಂಭಿಕ ಆಟಗಾರ ಶಾಯ್ ಹೋಪ್ ಅವರ ಭರ್ಜರಿ ಶತಕ ಹಾಗೂ ಶಮ್ರಾ ಬ್ರೂಕ್ ಅವರ ಅರ್ಧ ಶತಕದ ನೆರವಿನಿಂದ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್ 305 ರನ್‌ಗಳಿಸಿತು.

ಮಿಂಚಿದ ಪಾಕ್ ಬ್ಯಾಟರ್‌ಗಳು
ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಮೊದಲ ವಿಕೆಟ್ ಶೀಘ್ರವಾಗಿ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ಎರಡನೇ ವಿಕೆಟ್‌ಗೆ ಇಮಾಮ್ ಉಲ್ ಹಕ್ ಹಾಗೂ ಬಾಬರ್ ಅಜಂ ಶತಕದ ಜೊತೆಯಾಟವಾಡಿದರು. ನಂತರ ಬಂದ ಮೊಹಮ್ಮದ್ ರಿಜ್ವಾನ್ ಕೂಡ ಅರ್ಧ ಶತಕ ಸಿಡಿಸಿದರು. ಬಳಿಕ ಅಂತಿಮ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ಕುಶ್ದಿಲ್ ಶಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನೂ ನಾಲ್ಕು ಎಸೆತಗಳು ಬಾಕಿಯಿರುವಂತೆ ಪಾಕಿಸ್ತಾನ ಈ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications