For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಆಲ್ ರೌಂಡರ್ ಶೊಯೇಬ್ ಮಲಿಕ್ ಕಾರು ಅಪಘಾತ

Pakistan all-rounder Shoaib Malik met with car accident

ಕರಾಚಿ: ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರ ಕಾರು ಭಾನುವಾರ (ಜನವರಿ 11) ಲಾಹೋರ್‌ನಲ್ಲಿ ಅಪಘಾತಕ್ಕೀಡಾಗಿದೆ. 2021ರ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ತಂಡಕ್ಕೆ ಸೇರ್ಪಡೆಯಾದ ಬಳಿಕ ಮಲಿಕ್ ಅವರು ಕ್ರಿಕೆಟ್‌ ಬೋರ್ಡ್‌ನ ರಾಷ್ಟ್ರೀಯ ಉನ್ನತ ಕಾರ್ಯಕ್ಷಮತೆ ಕೇಂದ್ರದಿಂದ ವಾಪಸ್ಸಾಗುತ್ತಿದ್ದಾಗ ಕಾರು ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಶೋಯೆಬ್ ಮಲಿಕ್ ಗಂಭೀರ ಗಾಯದಿಂದ ಪಾರಾಗಿದ್ದಾರೆ. ತಾನು ಸಂಪೂರ್ಣ ಚೆನ್ನಾಗಿದ್ದೇನೆ ಎಂದು ಅನುಭವಿ ಆಟಗಾರ ಮಲಿಕ್ ಹೇಳಿದ್ದಾರೆ. ಮಲಿಕ್ ಅವರು ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಅವರ ಪತಿ.

'ನಾನು ಸಂಪೂರ್ಣ ಚೆನ್ನಾಗಿದ್ದೇನೆ. ಇದೊಂದು ಸಂಭವನೀಯ ಅಪಘಾತ. ದೇವರು ಕಾಪಾಡಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ. ನಿಮ್ಮೆಲ್ಲಾ ಪ್ರೀತಿ ಮತ್ತು ಕಾಳಜಿಗೆ ನಾನು ಆಭಾರಿಯಾಗಿದ್ದೇನೆ,' ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ.

ವರದಿಯ ಪ್ರಕಾರ, ಪಾಕ್ ಮಾಜಿ ನಾಯಕ ಮಲಿಕ್ ವೇಗವಾಗಿ ಸ್ಪೋರ್ಟ್ಸ್ ಕಾರು ಓಡಿಸುತ್ತಿದ್ದರು. ಹೀಗಾಗಿ ಅವರಿಗೆ ನಿಯಂತ್ರಿಸಲಾಗದೆ ಕಾರು ಸ್ಕಿಡ್‌ ಆಗಿ ಬಿದ್ದಿತ್ತು. ಮಲಿಕ್ 35 ಟೆಸ್ಟ್ ಪಂದ್ಯಗಳಲ್ಲಿ 1898 ರನ್, 32 ವಿಕೆಟ್, 287 ಏಕದಿನ ಪಂದ್ಯಗಳಲ್ಲಿ 7534 ರನ್, 158 ವಿಕೆಟ್‌, 116 ಟಿ20ಐ ಪಂದ್ಯಗಳಲ್ಲಿ 2335 ರನ್, 28 ವಿಕೆಟ್ ಪಡೆದಿದ್ದಾರೆ.

Story first published: Monday, January 11, 2021, 11:58 [IST]
Other articles published on Jan 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+