Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪಾಕ್‌ನ ಆಲ್‌ರೌಂಡರ್ ಮೊಹಮ್ಮದ್ ಹಫೀಜ್

Mohammad Hafeez

ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ತಮ್ಮ 18 ವರ್ಷಗಳ ಕ್ರಿಕೆಟ್ ಕೆರಿಯರ್‌ಗೆ ಗುಡ್‌ಬೈ ಹೇಳಿದ್ದಾರೆ. ಇದರ ಹೊರತಾಗಿ ಅವರು ಟಿ20 ಲೀಗ್‌ಗಳಲ್ಲಿ ಆಡಲು ಲಭ್ಯರಿದ್ದಾರೆ.

ಜಿಂಬಾಬ್ವೆ ವಿರುದ್ಧ 2003ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಹಫೀಜ್, ಕಳೆದ ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ರು. ಈ ಮೊದಲೇ ಅವರು 2020ರ ಟಿ20 ವಿಶ್ವಕಪ್ ತಮ್ಮ ಕೊನೆಯ ಟಿ20 ಟೂರ್ನಿಯಾಗಲಿದೆ ಎಂದು ಘೋಷಿಸಿದ್ರು. ಆದ್ರೆ ಕೋವಿಡ್-19 ಕಾರಣಗಳಿಂದಾಗಿ ವಿಶ್ವಕಪ್ ಮುಂದೂಡಲ್ಪಟ್ಟ ಪರಿಣಾಮ ಪಾಕಿಸ್ತಾನ ಪರ ಆಡುವುದನ್ನ ಮುಂದುವರಿಸಿದ್ರು.

ಮೊಹಮ್ಮದ್ ಹಫೀಜ್ 55 ಟೆಸ್ಟ್ ಪಂದ್ಯ, 218 ಏಕದಿನ ಪಂದ್ಯಗಳು ಮತ್ತು 119 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಒಟ್ಟಾರೆ 12,780 ರನ್ ಕಲೆಹಾಕಿದ್ದು, 253 ವಿಕೆಟ್ ಉರುಳಿಸಿದ್ದಾರೆ.

"ಇಂದು ನಾನು ಹೆಮ್ಮೆ ಮತ್ತು ತೃಪ್ತಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತೇನೆ. ವಾಸ್ತವವಾಗಿ, ನಾನು ಆರಂಭದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನದನ್ನು ಗಳಿಸಿದ್ದೇನೆ ಮತ್ತು ಸಾಧಿಸಿದ್ದೇನೆ. ಇದಕ್ಕಾಗಿ, ನನ್ನ ವೃತ್ತಿಜೀವನದಲ್ಲಿ ನನಗೆ ಸಹಾಯ ಮಾಡಿದ ನನ್ನ ಎಲ್ಲಾ ಸಹ ಕ್ರಿಕೆಟಿಗರು, ನಾಯಕರು, ಸಹಾಯಕ ಸಿಬ್ಬಂದಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನಾನು ಕೃತಜ್ಞನಾಗಿದ್ದೇನೆ'' ಎಂದು ಹಫೀಜ್ ಹೇಳಿದ್ದಾರೆ.

ಇದಕ್ಕೂ ಮೊದಲು, ಹಫೀಜ್ ಡಿಸೆಂಬರ್ 2018 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. 2019ರ ವಿಶ್ವಕಪ್ ನಂತರ ಲಾರ್ಡ್ಸ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಕೊನೆಯ ಪಂದ್ಯದೊಂದಿಗೆ ಅವರನ್ನು ಏಕದಿನ ಪಂದ್ಯಗಳಿಂದ ಹೊರಗಿಡಲಾಯಿತು.

41 ವರ್ಷದ ಹಫೀಜ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರೂ ಹಫೀಜ್ ಟಿ20 ಲೀಗ್ ಗಳಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಪಿಎಸ್​​ಎಲ್​ನ ಲಾಹೋರ್ ಖಲಂದರ್ ತಂಡದಲ್ಲಿ ಅವರು ಮುಂದಿನ ಲೀಗ್ ಆಡಲಿದ್ದಾರೆ.

ತ್ರಿವಳಿ ಆಟಗಾರರ ಹಣೆ ಬರಹ ಬಿಚ್ಚಿಟ್ಟ ದ್ರಾವಿಡ್ | Oneindia Kannada

Story first published: Monday, January 3, 2022, 14:24 [IST]
Other articles published on Jan 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+