Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2023ರ ಏಷ್ಯಾ ಕಪ್ ತಂಡದಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ ಹೊರಹಾಕಿದ ಪಾಕಿಸ್ತಾನ ಬೌಲರ್

ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ನಡೆಯುವ ಮುಂಬರುವ 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಬಾಬರ್ ಅಜಂ ನಾಯಕತ್ವದ 18 ಸದಸ್ಯರ ಪಾಕಿಸ್ತಾನ ತಂಡವನ್ನು ಬುಧವಾರ, ಆಗಸ್ಟ್ 9ರಂದು ಪ್ರಕಟಿಸಲಾಗಿದೆ.

ಇನ್ನು ಏಷ್ಯಾ ಕಪ್‌ಗಾಗಿ ಪಾಕಿಸ್ತಾನ ತಂಡಕ್ಕೆ ಆಯ್ಕೆ ಮಾಡದಿರುವ ಬಗ್ಗೆ ವೇಗಿ ಶಹನವಾಜ್ ದಹಾನಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ದಹಾನಿ ಮತ್ತು ಶಾನ್ ಮಸೂದ್ ಏಷ್ಯಾ ಕಪ್ ಪಂದ್ಯಾವಳಿಗೆ ಆಯ್ಕೆಯಾಗಲಿಲ್ಲ. ಆದರೆ, ಆಲ್‌ರೌಂಡರ್ ಫಹೀಮ್ ಅಶ್ರಫ್ ಸುಮಾರು ಎರಡು ವರ್ಷಗಳ ನಂತರ ಪಾಕಿಸ್ತಾನ ತಂಡಕ್ಕೆ ಮರಳಿದ್ದಾರೆ.

ಏಷ್ಯಾ ಕಪ್ ತಂಡದಿಂದ ಹೊರಗುಳಿದಿದ್ದಕ್ಕೆ ಆಕ್ರೋಶಗೊಂಡಿರುವ ಶಹನವಾಜ್ ದಹಾನಿ ಅವರು ಪಾಕಿಸ್ತಾನದ ಮಾಜಿ ನಾಯಕ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ರಶೀದ್ ಲತೀಫ್ ಅವರನ್ನು ಟೀಕಿಸಿದರು. ಅವರು ಪಾಕಿಸ್ತಾನಿ ವೇಗದ ಬೌಲರ್‌ಗಳ ಪಟ್ಟಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಆ ಪಟ್ಟಿಯಲ್ಲಿ ಶಹನವಾಜ್ ದಹಾನಿಯ ಅಂಕಿಅಂಶಗಳು ಇರಲಿಲ್ಲ.

pakistan-bowler-shahnawaz-dahani

"ದಹಾನಿ ಪಾಕಿಸ್ತಾನಿ ವೇಗಿ ಅಲ್ಲ ಎಂದು ತೋರುತ್ತಿದೆ??," ಎಂದು ರಶೀದ್ ಲತೀಫ್ ಅವರ ಪೋಸ್ಟ್‌ಗೆ ಶಹನವಾಜ್ ದಹಾನಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಗಮನಾರ್ಹವಾಗಿ, ಶಹನವಾಜ್ ದಹಾನಿ 31 ಲಿಸ್ಟ್ ಎ ಪಂದ್ಯಗಳಲ್ಲಿ 56 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಆಟಗಾರರ ಪೈಕಿ ಶಾಹೀನ್ ಅಫ್ರಿದಿ (75 ವಿಕೆಟ್) ಮತ್ತು ಫಹೀಮ್ ಅಶ್ರಫ್ (92 ವಿಕೆಟ್) ಮಾತ್ರ ಅವರಿಗಿಂತ ಹೆಚ್ಚು ವಿಕೆಟ್ ಕಬಳಿಸಿದ್ದಾರೆ.

ಶಹನವಾಜ್ ದಹಾನಿ ಅವರು ತಮ್ಮನ್ನು ಕೈಬಿಟ್ಟ ಬಗ್ಗೆ ಕ್ರೀಡಾ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರೂ ಪ್ರಶ್ನೆಗಳನ್ನು ಎತ್ತಲು ಅಥವಾ ತಂಡದಲ್ಲಿ ತನ್ನ ಸೇರ್ಪಡೆಯನ್ನು ಬೆಂಬಲಿಸುವ ಅಂಕಿಅಂಶಗಳನ್ನು ಗಮನಕ್ಕೆ ತರಲು ಧೈರ್ಯ ಮಾಡಿಲ್ಲ ಎಂದು ಹೇಳಿದರು.

"ಒಬ್ಬ ಪತ್ರಕರ್ತ ಅಥವಾ ಕ್ರಿಕೆಟ್ ವಿಶ್ಲೇಷಕ ಕೂಡ ಪ್ರಶ್ನೆಗಳನ್ನು ಕೇಳಲು ಅಥವಾ ಈ ಅಂಕಿಅಂಶಗಳನ್ನು ಆಯ್ಕೆಗಾರರಿಗೆ ತೋರಿಸಲು ಧೈರ್ಯ ಮಾಡಲಿಲ್ಲ," ಎಂದು ಶಹನವಾಜ್ ದಹಾನಿ ಟ್ವಿಟ್ಟರ್‌ನ (ಎಕ್ಸ್‌) ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಆದರೆ, ಶಹನವಾಜ್ ದಹಾನಿ ಪೋಸ್ಟ್ ವೈರಲ್ ಆದ ಬಳಿಕ ತಮ್ಮ ಟ್ವೀಟ್‌ಗಳನ್ನು ಅಳಿಸಿದ್ದಾರೆ. ಈ ವೇಗಿಯ ಆಕ್ರೋಶಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ದಂಡ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬುಧವಾರ, ರಾಷ್ಟ್ರೀಯ ಪುರುಷರ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಅವರು ಎಸಿಸಿ ಪುರುಷರ ಏಷ್ಯಾ ಕಪ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಗೆ ತಂಡಗಳನ್ನು ಪ್ರಕಟಿಸಿದರು.

18 ಆಟಗಾರರ ಪಾಕಿಸ್ತಾನ ತಂಡವು ಶ್ರೀಲಂಕಾದಲ್ಲಿ ಆಗಸ್ಟ್ 22ರಿಂದ 26ರವರೆಗೆ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿ ಆಡಲಿದೆ. ನಂತರ 2023ರ ಏಷ್ಯಾ ಕಪ್‌ನಲ್ಲಿ ಆಗಸ್ಟ್ 30ರಂದು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡವು ನೇಪಾಳ ತಂಡವನ್ನು ಎದುರಿಸಲಿದೆ. ಏಷ್ಯಾ ಕಪ್‌ಗಾಗಿ ಪಾಕಿಸ್ತಾನ 17 ಆಟಗಾರರನ್ನು ಆಯ್ಕೆ ಮಾಡಿದೆ.

2023ರ ಏಷ್ಯಾ ಕಪ್‌ಗಾಗಿ ಪಾಕಿಸ್ತಾನ ತಂಡ:

ಬಾಬರ್ ಅಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹಿರ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ.

Story first published: Friday, August 11, 2023, 19:28 [IST]
Other articles published on Aug 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+