Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್‌: ಪಾಕಿಸ್ತಾನ ತಂಡ ಸೇರಲಿರುವ ಯಾಸಿರ್‌ ಶಾ

Pakistan call up Yasir with Shadab laid low by virus

ಕರಾಚಿ, ಏಪ್ರಿಲ್‌ 21: ಲೆಗ್‌ ಸ್ಪಿನ್ನರ್‌ ಶದಾಬ್‌ ಖಾನ್‌ ಅನಾರೋಗ್ಯದ ಕಾರಣ ಮುಂಬರುವ ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಅನುಭವಿ ಲೆಗ್‌ ಸ್ಪಿನ್ನರ್‌ ಯಾಸಿರ್‌ ಶಾ ಪಾಕಿಸ್ತಾನ ತಂಡ ಸೇರಿಕೊಳ್ಳಲಿದ್ದಾರೆ.

ಅನಾರೋಗ್ಯದಿಂದ ಚೇತರಿಸಲು ಶದಾಬ್‌ 4 ವಾರ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಅವರ ಸ್ಥಾನದಲ್ಲಿಇಂಗ್ಲೆಂಡ್‌ ವಿರುದ್ಧದ ಏಕೈಕ ಟಿ20 ಮತ್ತು 5 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಯಾಸಿರ್‌ ಶಾ ಆಡಲಿದ್ದಾರೆ. ಟಿ20 ಪಂದ್ಯ ಮೇ 5ರಂದು ಕಾರ್ಡಿಫ್‌ನಲ್ಲಿ ನಡೆಯಲಿದ್ದು, ನಂತರ ಏಕದಿನ ಸರಣಿ ಆರಂಭವಾಗಲಿದೆ.

ಅಂದಹಾಗೆ ಯಾಸಿರ್‌ ಶಾ ಅವರನ್ನು ವಿಶ್ವಕಪ್‌ಗೆ ಪ್ರಕಟಿಸಲಾದ ಪಾಕಿಸ್ತಾನ ತಂಡದಲ್ಲಿ ಸೇರಿಸಿರಲಾಗಿಲ್ಲ. ಇದೀಗ ಲೆಗ್‌ ಸ್ಪಿನ್ನರ್‌ ಕೊರತೆಯಲ್ಲಿ ಅವರಿಗೆ ಅವಕಾಶ ನೀಡಲಾಗಿದೆ. ಪಾಕಿಸ್ತಾನ ತಂಡ ತನ್ನ ವಿಶ್ವಕಪ್‌ ತಂಡದಲ್ಲಿ ಮೇ 23ರವರೆಗೆ ಬದಲಾವಣೆ ತಂದುಕೊಳ್ಳ ಬಹುದಾಗಿದೆ.

ಇನ್ನು ಅನುಭವಿ ವೇಗಿ ಮೊಹಮ್ಮದ್‌ ಆಮಿರ್‌ ಅವರನ್ನು ವಿಶ್ವಕಪ್‌ಗೆ ಪ್ರಕಟಿಸಲಾದ ಪಾಕಿಸ್ತಾನದ ಪ್ರಾಥಮಿಕ ತಂಡದಿಂದ ಕೈ ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿತ್ತು.

ವಿಶ್ವಕಪ್‌ಗೆ ಪಾಕ್‌ ಪ್ರಕಟಿಸಿದ್ದ ಪ್ರಥಮಿಕ ತಂಡ ಇಂತಿದೆ: ಸರ್ಫರಾಜ್‌ ಅಹ್ಮದ್‌ (ನಾಯಕ/ವಿಕೆಟ್‌ಕೀಪರ್‌), ಫಖರ್‌ ಝಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಅಝಾಮ್‌, ಶಹದಾಬ್‌ ಖಾನ್‌, ಶೊಯೇಬ್‌ ಮಲಿಕ್‌, ಫಯೀಮ್‌ ಅಶ್ರಫ್‌, ಶಹೀನ್‌ ಶಾ ಅಫ್ರಿದಿ, ಹಸನ್‌ ಅಲಿ, ಅಬಿದ್‌ ಅಲಿ, ಮೊಹಮ್ಮದ್‌ ಹಫೀಜ್‌, ಜನೇದ್‌ ಖಾನ್‌, ಮೊಹಮ್ಮದ್‌ ಹಸ್ನಾಯ್‌, ಹ್ಯಾರಿಸ್‌ ಸೊಹೇಲ್‌.

Story first published: Sunday, April 21, 2019, 17:39 [IST]
Other articles published on Apr 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+