For Quick Alerts
ALLOW NOTIFICATIONS  
For Daily Alerts
 

ಪಾಕ್‌ ತಂಡದಲ್ಲಿ ಮತ್ತೆ ನಾಯಕತ್ವದ ಬದಲಾವಣೆ: ಈ ವೇಗದ ಬೌಲರ್‌ಗೆ ಪಟ್ಟ

ಪಾಕಿಸ್ತಾನದ ನಾಯಕತ್ವದಲ್ಲಿ ಮತ್ತೊಮ್ಮೆ ಬದಲಾವಣೆ ಕಂಡಿದೆ. ಏಕದಿನ ಫಾರ್ಮೆಟ್‌ಗೆ ಪಾಕ್‌ ಮತ್ತೊಬ್ಬ ನಾಯಕನನ್ನು ಆಯ್ಕೆ ಮಾಡಿದೆ. ಇವರು ವಿಕೆಟ್‌ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ ಅವರ ಸ್ಥಾನವನ್ನು ತುಂಬಲಿದ್ದಾರೆ. ಈಗಾಗಲೇ ಪಾಕ್‌ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವ ವೇಗಿ ಶಾಹಿನ್ ಶಾ ಆಫ್ರಿದಿ ಅವರಿಗೆ ಈ ಬಾರಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪಟ್ಟವನ್ನು ಕಟ್ಟಿದೆ. ಈ ಮೂಲಕ ಪಾಕ್ ನಾಯಕತ್ವ ಮತ್ತೊಂದು ಬದಿಗೆ ಶಿಫ್ಟ್ ಆಗಿದೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಸೀಮಿತ ಓವರ್‌ಗಳ ಕೋಚ್‌ ಮೈಕ್ ಹಸನ್, ನಿರ್ದೇಶಕ ಅಕಿಬ್ ಜಾವೇದ್, ರಾಷ್ಟ್ರೀಯ ಆಯ್ಕೆ ಸಮಿತಿಯು ಈ ವೇಳೆ ಭಾಗವಹಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶಾಹೀನ್ ಶಾ ಆಫ್ರಿದಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ನವೆಂಬರ್ 4 ರಂದು ನಡೆಯಲಿದೆ.

Pakistan Captaincy Changes Again Pace Bowler Shaheen Afridi to Lead ODI Team

ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಪಾಕ್‌ ತಂಡದ ಶಾಹೀನ್ ಶಾ ಆಫ್ರಿದಿ ಅವರ ಮೇಲೆ ದೊಡ್ಡ ಜವಾಬ್ದಾರಿ ಹೊರಿಸಲಾಗಿದೆ. ಈ ವೇಳೆ ಇವರು ಪಾಕ್ ತಂಡವನ್ನು ಮತ್ತೆ ಗೆಲುವಿನ ಲಯಕ್ಕೆ ಮರಳಿ ತರುವ ಅನಿವಾರ್ಯತೆ ಇದೆ. ಅಲ್ಲದೆ ಸರಣಿ ಗೆದ್ದು ಅಭಿಮಾನಿಗಳ ವಿಶ್ವಾಸವನ್ನು ಮರಳಿ ಪಡೆಯಬೇಕಿದೆ.

2024ರ ಅಕ್ಟೋಬರ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಅವರು ಪಾಕ್ ತಂಡದ ಟಿ20 ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆ ಆಗಿದ್ದರು. ಇವರ ನಾಯಕತ್ವದಲ್ಲಿ ತಂಡ ಮಿಶ್ರ ಫಲಿತಾಂಶವನ್ನು ಕಂಡಿದೆ. ಇವರ ಮುಂದಾಳತ್ವದಲ್ಲಿ ಪಾಕ್‌ ಆಡಿದ 20 ಪಂದ್ಯಗಳಲ್ಲಿ 9ರಲ್ಲಿ ಗೆದ್ದು, 11ರಲ್ಲಿ ಸೋಲು ಕಂಡಿದೆ. ರಿಜ್ವಾನ್‌ ನಾಯಕತ್ವದಲ್ಲಿ ಪಾಕ್‌ ಟಿ20 ತಂಡ ಸತತ ಸೋಲುಗಳನ್ನು ಕಂಡು ಕಂಗೆಟ್ಟಿತ್ತು. ಈ ಸೋಲುಗಳಿಂದ ಕಂಗೆಟ್ಟ ಬಳಿಕ ರಿಜ್ವಾನ್ ಅವರನ್ನು ನಾಯಕತ್ವದಿಂದ ತೆಗೆದು ಹಾಕಿ, ಸಲ್ಮಾನ್ ಅಲಿ ಅಘಾ ಅವರಿಗೆ ಪಟ್ಟ ಕಟ್ಟಲಾಯಿತು. ಶಾಹೀನ್ ಶಾ ಆಫ್ರಿದಿ ಅವರ ನಾಯಕತ್ವದಲ್ಲಿ ತಂಡ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಏಕದಿನ ತಂಡದ ನಾಯಕ

ಶಾಹೀನ್ ಶಾ ಅಫ್ರಿದಿ ಅವರಿಗೆ ನಾಯಕತ್ವ ಇದು ಮೊದಲನೇ ಬಾರಿ ಏನು ನೀಡಿಲ್ಲ. ಇದಕ್ಕೂ ಮೊದಲು ಈ ಜವಾಬ್ದಾರಿಯನ್ನು ಇವರು ನ್ಯೂಜಿಲೆಂಡ್ ಪ್ರವಾಸದಲ್ಲಿ ಹೊಂದಿದ್ದರು. ಆದರೆ ಆಗ ಚುಟುಕು ಫಾರ್ಮೆಟ್‌ನಲ್ಲಿ ಇವರು ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಈ ವೇಳೆ ತಂಡ ನೀರಸ ಪ್ರದರ್ಶನ ನೀಡಿತ್ತು. ಆದಾದ ಬಳಿಕ ಇವರನ್ನು ನಾಯಕತ್ವದಿಂದ ತೆಗೆದು ಹಾಕಲಾಯಿತು. ಈಗ ಇವರು ಮತ್ತೆ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ. ಇವರು ಕಳೆದ ವರ್ಷ ಪಾಕ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

Story first published: Tuesday, October 21, 2025, 12:29 [IST]
Other articles published on Oct 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+