WI vs PAK T20: ಸರಣಿಯಲ್ಲಿ ಮತ್ತೊಂದು ಸರಣಿ ಕೈ ಚೆಲ್ಲಿದ ಮಾಜಿ ಚಾಂಪಿಯನ್
ವೆಸ್ಟ್ ಇಂಡೀಸ್ ತವರಿನಲ್ಲಿ ಮತ್ತೊಂದು ಸರಣಿ ಸೋಲು ಕಂಡಿದೆ. ಎರಡನೇ ಪಂದ್ಯದಲ್ಲಿ ಪಾಕ್ ವಿರುದ್ಧ ಗೆದ್ದು ಭರವಸೆ ಮುಡಿಸಿದ್ದ ವಿಂಡೀಸ್, ಮೂರನೇ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲವಾಗಿದೆ. ಈ ಮೂಲಕ ಪ್ರವಾಸಿ ಪಾಕ್ ಮೂರನೇ ಪಂದ್ಯವನ್ನು 13 ರನ್‌ಗಳಿಂದ ಗೆದ್ದು ಮೂರು ಪಂದ್ಯಗಳ ಟಿ20 ಸರಣಿಯನ್ನು ತನ್ನ ವಶಕ್ಕೆ ಮಾಡಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಪಾಕ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ ಹಾಗೂ ಸೈಮ್ ಅಯೂಬ್ ಅಮೋಗ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ನಾಯಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಮಾಡಿತು. ಈ ಜೋಡಿ ಮೊದಲ ವಿಕೆಟ್‌ಗೆ 16.2 ಓವರ್‌ಗಳಲ್ಲಿ 138 ರನ್ ಸೇರಿಸಿತು.

ಆರಂಭಿಕರ ಭರ್ಜರಿ ಆಟ
ಆರಂಭಿಕ ಸಾಹಿಬ್‌ಜಾದಾ ಫರ್ಹಾನ್ 53 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 74 ರನ್ ಸಿಡಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ ಸೈಮ್ ಅಯೂಬ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 66 ರನ್ ಬಾರಿಸಿದರು. ಉಳಿದಂತೆ ಹಸನ್ ನವಾಜ್ (15), ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್ (2), ಖುಷ್ದಿಲ್ ಷಾ (11), ಫಹೀಮ್ ಅಶ್ರಫ್ (10) ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಪರಿಣಾಮ ಪಾಕ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 189 ರನ್ ಸೇರಿಸಿತು.
ವಿಂಡೀಸ್ ತಂಡದ ಆರಂಭ ಸಹ ಭರ್ಜರಿಯಾಗಿತ್ತು. ಆರಂಭಿಕರಾದ ಜ್ಯುವೆಲ್ ಆಂಡ್ರ್ಯೂ (24) ಹಾಗೂ ಅಲಿಕ್ ಅಥನಾಜೆ ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 4.2 ಓವರ್‌ಗಳಲ್ಲಿ 42 ರನ್ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ಶಾಯ್ ಹೋಪ್ (7) ರನ್ ಬಾರಿಸಲೇ ಇಲ್ಲ. ಆರಂಭಿಕ ಅಲಿಕ್ ಅಥನಾಜೆ ಸ್ಥಿರ ಪ್ರದರ್ಶನ ನೀಡಿದರು. ಇವರು 40 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 60 ರನ್ ಬಾರಿಸಿ ಔಟ್ ಆದರು.
ವಿಂಡೀಸ್ ತಂಡದ ಶೆರ್ಫೇನ್ ರುದರ್ಫೋರ್ಡ್ ಉತ್ತಮ ಬ್ಯಾಟಿಂಗ್ ನಡೆಸಿದರು. ಆದರೆ ಇವರಿಗೆ ಯಾವೊಬ್ಬ ಬ್ಯಾಟರ್ ಉತ್ತಮ ಸಾಥ್ ನೀಡಲಿಲ್ಲ. ಶೆರ್ಫೇನ್ ರುದರ್ಫೋರ್ಡ್ 35 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿ ರಿಟೈಡ್ ಹರ್ಟ್ ಆದ್ರು. ಅಂತಿಮವಾಗಿ ವಿಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಸೇರಿಸಿತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಾಹಿಬ್‌ಜಾದಾ ಪಂದ್ಯ ಶ್ರೇಷ್ಠ, ಮೊಹಮ್ಮದ್ ನವಾಜ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications