AUS vs PAK: ಭಾರತಕ್ಕೂ ಮುನ್ನ ಆಸ್ಟ್ರೇಲಿಯಾ ಮಣಿಸಿದ ಪಾಕ್
ಭರವಸೆಯ ಆಟಗಾರ ಹ್ಯಾರಿಸ್ ರೌಫ್ (29ಕ್ಕೆ 5) ಹಾಗೂ ಆರಂಭಿಕ ಬ್ಯಾಟರ್ ಸಯಿಮ್ ಅಯುಬ್ (82 ರನ್) ಭರ್ಜರಿ ಆಟದ ಫಲದಿಂದ ಪಾಕಿಸ್ತಾನ 9 ವಿಕೆಟ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಮೊದಲ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದು ಕೊಂಡಿತ್ತು. ಎರಡನೇ ಏಕದಿನ ಪಂದ್ಯ ಪಾಕ್ ಪಾಲಾಗಿದ್ದು, ಮೂರನೇ ಏಕದಿನ ಪಂದ್ಯ ಕುತೂಹಲ ಮೂಡಿಸಿದೆ. ಪಾಕಿಸ್ತಾನ ಆಲ್‌ರೌಂಡರ್ ಪ್ರದರ್ಶನ ನೀಡಿದ ಫಲವಾಗಿ ಜಯ ಸಂದಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿಯನ್ನು ಹಿಂಬಾಲಿಸಿದ ಪಾಕ್ 26.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 169 ರನ್ ಸೇರಿಸಿ ಜಯ ಸಾಧಿಸಿತು. ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಹ್ಯಾರಿಸ್ ರೌಫ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂದಿತು.

ಕಳಪೆ ಆರಂಭ
ಆಸ್ಟ್ರೇಲಿಯಾ ಪರ ಕಣಕ್ಕೆ ಇಳಿದಿ ಮ್ಯಾಥ್ಯು ಶಾರ್ಟ್ (19) ಹಾಗೂ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ 21 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಎರಡನೇ ವಿಕೆಟ್‌ಗೂ ಸ್ಟೀವನ್ ಸ್ಮಿತ್ ಹಾಗೂ ಶಾರ್ಟ್ ಡೊಡ್ಡ ಜೊತೆಯಾಟದ ಕಾಣಿಕೆ ನೀಡಲಿಲ್ಲ.
ಮೂರನೇ ವಿಕೆಟ್‌ಗೆ ಸ್ಟೀವನ್ ಸ್ಮಿತ್ ಹಾಗೂ ಜೋಶ್ ಇಂಗ್ಲಿಷ್ (18) ಜೋಡಿ ಮಾತ್ರ ಕೊಂಚ ಪಾಕ್ ಬೌಲರ್‌ಗಳನ್ನು ಕಾಡಿತು. ಈ ಜೋಡಿ 44 ಎಸೆತಗಳಲ್ಲಿ 34 ರನ್ ಸಿಡಿಸಿತು. ಮಾರ್ನಸ್ ಲಂಬುಶೇನ್ ಜವಾಬ್ದಾರಿ ಮರೆತರು. ಬಳಿಕ ಬಂದ ಬ್ಯಾಟರ್‌ಗಳು ಡಬಲ್ ಡಿಜಿಟ್ ಮುಟ್ಟಿದರೂ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆಸೀಸ್ ಪರ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ 35 ರನ್ ಬಾರಿಸಿದರು.
ಹ್ಯಾರಿಸ್ ಪಂತ್
ಪಾಕ್ ಪರ ವೇಗಿ ಹ್ಯಾರೀಸ್ ರೌಫ್ 29 ರನ್ ನೀಡಿ 5 ವಿಕೆಟ್ ಪಡೆದರು. ಉಳಿದಂತೆ ವೇಗಿ ಶಾಹಿನ್ ಶಾ ಆಫ್ರಿದಿ 26 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ನಸೀಮ್ ಶಾ, ಮೊಹಮ್ಮದ್ ಎಚ್. ತಲಾ ಒಂದು ವಿಕೆಟ್ ಪಡೆದರು.

ಭರ್ಜರಿ ಆರಂಭ
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಪಾಕ್ ಆರಂಭ ಭರ್ಜರಿಯಾಗಿತ್ತು. ಸಾಯಿಮ್ ಅಯುಬ್ ಹಾಗೂ ಅಬ್ದುಲ್ ಶಫೀಕ್ ಜೊತೆಗೂಡಿ ತಂಡಕ್ಕೆ ಶತಕದ ಜೊತೆಯಾಟದ ಕಾಣಿಕೆ ನೀಡಿದರು. ಸಾಯಿಮ್ 71 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 82 ರನ್ ಬಾರಿಸಿ ಔಟ್ ಆದರು. ಇನ್ನೋರ್ವ ಆರಂಭಿಕ ಅಬ್ದುಲ್ಲ ಶಫೀಕ್ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 64 ರನ್ ಸಿಡಿಸಿದರು. ಭರವಸೆಯ ಆಟಗಾರ ಬಾಬರ್ ಅಜಮ್ ಅಜೇಯ 15 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
ರಿಜ್ವಾನ್ ದಾಖಲೆ
ಮೊಹಮ್ಮದ್ ರಿಜ್ವಾನ್ ಏಕದಿನ ಪಂದ್ಯದಲ್ಲಿ ಆರು ಕ್ಯಾಚ್‌ಗಳನ್ನು ಪಡೆದ ಪಾಕಿಸ್ತಾನದ ಎರಡನೇ ವಿಕೆಟ್ ಕೀಪರ್ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2015ರಲ್ಲಿ ಸರ್ಫರಾಜ್ ಅಹ್ಮದ್ ವಿಕೆಟ್ ಕೀಪರ್ ಆಗಿ 6 ಕ್ಯಾಚ್ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications