Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲೀಗ್‌ ಹಂತದಲ್ಲಿ ಪಾಕ್‌ ಔಟ್: ಪಿಸಿಬಿ ಖಜಾನೆ ಖಾಲಿ ಖಾಲಿ

29 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿಯೊಂದು ಆಯೋಜಿಸಾಗುತ್ತಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಹಾಲಿ ಚಾಂಪಿಯನ್‌ ಪಟ್ಟವನ್ನು ಹೊತ್ತ ಪಾಕ್‌ ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್‌ ಬಾಯ್‌ ಹೇಳಿದಂತೆ ಆಗಿದೆ. ಪಾಕ್‌ ನಿರಾಶಾದಾಯಕ ಪ್ರದರ್ಶನ ಹಲವು ಸಮಸ್ಯೆಗಳನ್ನು ಹುಟ್ಟಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಂದರೆ ಪಿಸಿಬಿಗೆ ತನ್ನ ರಾಷ್ಟ್ರೀಯ ತಂಡಕ್ಕೆ ಪ್ರಾಯೋಜಕರನ್ನು ಹುಡುಕುವುದು ಈಗ ಕಠಿಣ ಸವಾಲಾಗಿ ಪರಿಣಮಿಸಿದೆ.

ಪಾಕಿಸ್ತಾನ ತಂಡದ ಪ್ರದರ್ಶನ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಸಂಕಷ್ಟವನ್ನು ದ್ವಿಗುಣ ಮಾಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ "ಎ" ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತಿದೆ. ಈ ಸಾಲು ಸಾಲು ಸೋಲುಗಳು ರಾಷ್ಟ್ರೀಯ ತಂಡಕ್ಕೆ ಪ್ರಾಯೋಜಕರನ್ನು ಹುಡುಕುವುದೇ ದೊಡ್ಡ ಸಮಸ್ಯೆ ಆಗಿದೆ. ಆಸ್ಟ್ರೇಲಿಯಾ-ಇಂಗ್ಲೆಂಡ್ ಪಂದ್ಯಕ್ಕಾಗಿ ಗಡಾಫಿ ಕ್ರೀಡಾಂಗಣದಲ್ಲಿ ರೋಚಕ ಪಂದ್ಯ ನಡೆಯಿತು. ಈ ಪಂದ್ಯವನ್ನು ನೋಡಲು ಅದ್ಭುತ ಜನಸಮೂಹ ನೋಡಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕಾರಿಗಳು ಆತ್ಮವಿಶ್ವಾಸದಿಂದ ತುಂಬಿದ್ದರು. ಆದರೆ ಪಾಕ್‌ನ ಸೋಲು ಪಿಸಿಬಿಯ ತಲೆ ನೋವು ಹೆಚ್ಚಿಸಿದೆ.

Pakistan Crashes Out of Champions Trophy 2025 PCB Faces Sponsorship Crisis

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನ ಪಂದ್ಯಗಳು ನಡೆಯುವಾಗಲೇ ಮೈದಾನ ಖಾಲಿ ಖಾಲಿ ಆಗಿದ್ದು, ವರದಿಯಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಕ್ರೀಡಾಂಗಣಗಳು ಖಾಲಿ ಇದ್ದವು. ಆತಿಥೇಯ ತಂಡದ ಆಟ ನಡೆಯುವಾಗಲೂ ಪಂದ್ಯಗಳು ಖಾಲಿ ಇದ್ದವು. ಈ ಸಮಸ್ಯೆ ನಿಜಕ್ಕೂ ಪಿಸಿಬಿಯ ಚಿಂತೆ ಹೆಚ್ಚಿಸಿದೆ. ಇನ್ನು ಪಾಕಿಸ್ತಾನ ಹಾಗೂ ಭಾರತದ ನಡುವಣ ಪಂದ್ಯದ ವೇಳೆ ಮೈದಾನ ಫೂಲ್‌ ಆಗಿತ್ತು. ಟೂರ್ನಿಯಲ್ಲಿ ಪಾಕ್‌ ಸೆಮಿಫೈನಲ್‌ ಹಂತ ಪ್ರವೇಶಿಸದೇ ಇದ್ದರೂ, ಪಿಸಿಬಿಗೆ ದೊಡ್ಡ ಆರ್ಥಿಕ ಸಮಸ್ಯೆ ಬೀಳುವುದಿಲ್ಲ ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಾಲು ಸಾಲು ಸೋಲುಗಳು ತಂಡದ 'ಬ್ರಾಂಡ್ ಮೌಲ್ಯ'ದ ಮೇಲೆ ಪರಿಣಾಮ ಬೀರಲಿದೆ.

ಐಸಿಸಿ ಆದಾಯದಲ್ಲಿ ಆತಿಥೇಯ ಶುಲ್ಕ, ಟಿಕೆಟ್ ಮಾರಾಟ ಸೇರಿದ ಹಣವನ್ನು ಪಿಸಿಬಿ ಪಡೆಯಲಿದೆ. ಆದರೆ ಈ ದೊಡ್ಡ ಪಂದ್ಯಾವಳಿಯಲ್ಲಿ ಜನರು ಆಸಕ್ತಿ ಕಳೆದುಕೊಳ್ಳುವುದು ಮತ್ತು ಪ್ರಸಾರಕರು ಅರ್ಧ ತುಂಬಿದ ಕ್ರೀಡಾಂಗಣಗಳನ್ನು ನೋಡಿದರೆ ನಿಶ್ಚಿತವಾಗಿಯೂ ಸಮಸ್ಯೆಗಳಿವೆ' ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Pakistan Crashes Out of Champions Trophy 2025 PCB Faces Sponsorship Crisis

ಹೇಗಿದೆ ಪಾಕ್‌ ಪ್ರದರ್ಶನ

ಪಾಕಿಸ್ತಾನ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ 2 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಸೋತಿದೆ. ಆಡಿದ ಮೊದಲ ಪಂದ್ಯದಲ್ಲಿ ಪಾಕ್‌ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋಲು ಕಂಡಿದ್ದ ಪಾಕಿಸ್ತಾನ, ಎರಡನೇ ಪಂದ್ಯದಲ್ಲಿ ಭಾರತ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಕಂಡಿದೆ.

Story first published: Tuesday, February 25, 2025, 17:05 [IST]
Other articles published on Feb 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+