ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ನಡೆಯುವ ವಿಶ್ವಕಪ್ ಬಹಿಷ್ಕರಿಸುವ ಧಮ್ ಪಾಕಿಸ್ತಾನಕ್ಕಿಲ್ಲ: ಪಾಕ್ ಮಾಜಿ ಕ್ರಿಕೆಟಿಗ

Pakistan Cricket Board Doesnt Have Guts To Boycott ICC Tournament Says Former Spinner Danish Kaneria

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ ಪಂದ್ಯಾವಳಿಗೆ ಬಿಸಿಸಿಐ ಭಾರತ ಹಿರಿಯರ ತಂಡವನ್ನು ಕಳುಹಿಸದಿದ್ದರೆ, ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾ ಎಚ್ಚರಿಕೆ ನೀಡಿದ್ದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷರ ಈ ಹೇಳಿಕೆಗೆ ಸ್ವತಃ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ವ್ಯಂಗ್ಯವಾಡಿದ್ದಾರೆ.

IND vs NZ: 3ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ; ಸರಣಿ ಸೋಲಿನ ಭೀತಿಯಲ್ಲಿ ಭಾರತ!IND vs NZ: 3ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ; ಸರಣಿ ಸೋಲಿನ ಭೀತಿಯಲ್ಲಿ ಭಾರತ!

ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಕಾರ್ಯಕಾರಿ ಮಂಡಳಿಯ ನಿರ್ಧಾರದ ಪ್ರಕಾರ, ಮುಂದಿನ ವರ್ಷ ಏಷ್ಯಾ ಕಪ್‌ನ ಮುಂದಿನ ಆವೃತ್ತಿಯನ್ನು ಪಾಕಿಸ್ತಾನ ಆಯೋಜಿಸಲು ನಿರ್ಧರಿಸಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಭಾರತ ತಂಡವು ಏಷ್ಯಾ ಕಪ್ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಡಲು ಆದ್ಯತೆ ನೀಡುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿರುವುದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಕ್ರೋಶಕ್ಕೆ ಕಾರಣವಾಗಿದೆ.

ಪಾಕಿಸ್ತಾನಕ್ಕೆ ನಷ್ಟವಾಗುತ್ತದೆ ಹೊರತು, ಭಾರತಕ್ಕಲ್ಲ

ಪಾಕಿಸ್ತಾನಕ್ಕೆ ನಷ್ಟವಾಗುತ್ತದೆ ಹೊರತು, ಭಾರತಕ್ಕಲ್ಲ

ಐಸಿಸಿ ಟೂರ್ನಿಯನ್ನು ಬಹಿಷ್ಕರಿಸುವ ಧೈರ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಿಲ್ಲ ಎಂದು ದಾನೀಶ್ ಕನೇರಿಯಾ ಹೇಳಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ ಅದು ಪಾಕಿಸ್ತಾನಕ್ಕೆ ನಷ್ಟವಾಗುತ್ತದೆ ಹೊರತು, ಭಾರತಕ್ಕಲ್ಲ. ಏಕೆಂದರೆ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುತ್ತದೆಯೇ ಅಥವಾ ಭಾಗವಹಿಸುವುದಿಲ್ಲ ಎಂಬುದನ್ನು ಬಿಸಿಸಿಐ ಚಿಂತಿಸುವುದಿಲ್ಲ ಎಂದಿದ್ದಾರೆ.

"ಐಸಿಸಿ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವಷ್ಟು ಧೈರ್ಯ ಪಿಸಿಬಿಗೆ ಇಲ್ಲ. ಮತ್ತೊಂದೆಡೆ, ಪಾಕಿಸ್ತಾನ ಬರದಿದ್ದರೂ ಭಾರತ ಯೋಚಿಸುವುದಿಲ್ಲ. ಹೆಚ್ಚಿನ ಆದಾಯವನ್ನು ಗಳಿಸುವ ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದಾರೆ. ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಹಠ ಹಿಡಿದರೆ ಪಾಕಿಸ್ತಾನದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ಗೆ ಹಾನಿ ಮಾಡುತ್ತದೆ

ಪಾಕಿಸ್ತಾನ ಕ್ರಿಕೆಟ್‌ಗೆ ಹಾನಿ ಮಾಡುತ್ತದೆ

"ಪಾಕಿಸ್ತಾನ ಅಂತಿಮವಾಗಿ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲಿದೆ. ಐಸಿಸಿಯಿಂದ ಒತ್ತಡವಿದ್ದ ಕಾರಣ ತಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಪಿಸಿಬಿ ಅಧಿಕಾರಿಗಳು ಹೇಳುತ್ತಾರೆ. ಅವರು ಐಸಿಸಿ ಟೂರ್ನಿಯನ್ನು ಬಹಿಷ್ಕರಿಸುವ ಬಗ್ಗೆ ಪದೇ ಪದೇ ಮಾತನಾಡಿದರೆ ಅದು ಪಾಕಿಸ್ತಾನ ಕ್ರಿಕೆಟ್‌ಗೆ ಹಾನಿ ಮಾಡುತ್ತದೆ," ಎಂದು ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ಅಭಿಪ್ರಾಯಪಟ್ಟರು.

2023ರ ಏಷ್ಯಾ ಕಪ್‌ಗೆ ಇನ್ನೂ ಸಾಕಷ್ಟು ಸಮಯವಿರುವುದರಿಂದ ಹಾಗೂ ಪಾಕಿಸ್ತಾನದ ಪ್ರಸ್ತುತ ಸ್ಥಿತಿಯಿಂದಾಗಿ ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ದಾನೀಶ್ ಕನೇರಿಯಾ ಅವರು ರಮೀಜ್ ರಾಜಾಗೆ ಸಲಹೆ ನೀಡಿದರು. ಇದೇ ವೇಳೆ ಅಂತಹ ಹೇಳಿಕೆಯು ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಾವಳಿಯನ್ನು ಬಹಿಷ್ಕರಿಸಲು ಕಾರಣವಾಗಬಹುದು ಎಂದಿದ್ದಾರೆ.

ರಮೀಜ್ ರಾಜಾ ಎಚ್ಚರಿಕೆಗೆ ಅನುರಾಗ್ ಠಾಕೂರ್ ತಿರುಗೇಟು

ರಮೀಜ್ ರಾಜಾ ಎಚ್ಚರಿಕೆಗೆ ಅನುರಾಗ್ ಠಾಕೂರ್ ತಿರುಗೇಟು

ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ, ಭಾರತದಲ್ಲಿ ನಡೆಯುವ 2023ರ ವಿಶ್ವಕಪ್‌ಗೆ ಪಾಕಿಸ್ತಾನ ಹೋಗುವುದಿಲ್ಲ ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರ ಎಚ್ಚರಿಕೆಗೆ ಕೇಂದ್ರ ಕ್ರೀಡಾ ಅನುರಾಗ್ ಠಾಕೂರ್ ಖಡಕ್ ತಿರುಗೇಟು ನೀಡಿದ್ದಾರೆ.

ರಮೀಜ್ ರಾಜಾ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾ ಸಚಿವರು, "ಸರಿಯಾದ ಸಮಯಕ್ಕಾಗಿ ಕಾಯಿರಿ, ಭಾರತ ಕ್ರೀಡಾ ಜಗತ್ತಿನಲ್ಲಿ ಪ್ರಮುಖ ಶಕ್ತಿಯಾಗಿದ್ದು, ಯಾವುದೇ ದೇಶವು ಭಾರತವನ್ನು ಕಡೆಗಣಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.

Story first published: Tuesday, November 29, 2022, 16:39 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X