ಮಿಸ್ಬಾ ಉಲ್ ಹಕ್ ವರ್ಷದ ಸಾಧನೆ ಪರಿಶೀಲಿಸಲಿದೆ ಪಾಕಿಸ್ತಾನ

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆದಾರ ಜವಾಬ್ದಾರಿಯಲ್ಲಿರುವ ಮಿಸ್ಬಾ ಉಲ್ ಹಕ್ ಅವರ ವರ್ಷದ ಸಾಧನೆಯನ್ನು ಪಿಸಿಬಿ ಶೀಘ್ರ ಪರಿಶೀಲಿಸಲಿದೆ. ಜಿಂಬಾಬ್ವೆ ವಿರುದ್ಧದ ತವರಿನ ಸರಣಿಗೂ ಮುನ್ನವೆ ಮಿಸ್ಬಾ ಸಾಧನೆ ಪರಿಶೀಲನೆಗೆ ಒಳಪಡಲಿದೆ.
ಮಿಸ್ಬಾ ಉಲ್ ಹಕ್ ಅವರ ಸಾಧನೆಯ ಬಗ್ಗೆ ಅವರ ಜೊತೆಯೇ ತಾನು ಮತ್ತು ಅಧ್ಯಕ್ಷ ಎಹ್ಸಾನ್ ಮನಿ ಶೀಘ್ರ ಮಾತುಕತೆ ನಡೆಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸಿಂ ಖಾನ್ ಮಾಧ್ಯಮದ ಜೊತೆ ಹೇಳಿದ್ದಾರೆ.
'ನಾವು ಜಿಂಬಾಬ್ವೆ ವಿರುದ್ಧದ ಮುಂಬರುವ ಹೋಮ್ ಸರಣಿಗಾಗಿ ಮಿಸ್ಬಾ ಅವರ ಮುಂದಿನ ಯೋಜನೆಗಳ ಬಗ್ಗೆ ಕೇಳುತ್ತೇವೆ. ಯುವ ಆಟಗಾರರನ್ನು ಆಡಿಸಲು ಅವರು ಏನು ಯೋಜನೆ ಹಾಕಿಕೊಂಡಿದ್ದಾರೆ ಎಂದು ಅವರ ಬಳಿ ನಾವು ಕೇಳಿ ತಿಳಿದುಕೊಳ್ಳಲಿದ್ದೇವೆ,' ಎಂದು ಖಾನ್ ಹೇಳಿದ್ದಾರೆ.
ಬೋರ್ಡ್‌ನ ಹೊಸ ನೀತಿ-ನಿಯಮಾವಳಿಯ ಪ್ರಕಾರ ಬೋರ್ಡ್‌ನ ಯಾವುದೇ ಕೆಲಸಗಾರ ಎರಡೆರಡು ಜವಾಬ್ದಾರಿಯನ್ನು ಹೊರುವಂತಿಲ್ಲ ಎಂಬುದನ್ನೂ ಮಿಸ್ಬಾ ಅವರನ್ನು ಭೇಟಿಯಾಗಲಿರುವ ಪಿಸಿಬಿ ಅಧಿಕಾರಿಗಳು ಮಿಸ್ಬಾಗೆ ಸ್ಪಷ್ಟವಾಗಿ ಮನದಟ್ಟು ಮಾಡಲಿದ್ದಾರೆ ಎಂಬ ಮಾಹಿತಿಯೂ ಬಲ್ಲ ಮೂಲದಿಂದ ಲಭ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications