For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಕ್ರಿಕೆಟಿಗರು ಈ ಡೋಸ್ ತೆಗೆದುಕೊಂಡು ಮೈದಾನಕ್ಕಿಳಿಯುತ್ತಾರೆ!

Pakistan

ವಿಶ್ವದಾದ್ಯಂತ ಕೋವಿಡ್-19 ಮೂರನೇ ಅಲೆ ವಕ್ಕರಿಸಿದ್ದು, ರೂಪಾಂತರ ವೈರಸ್ ಒಮಿಕ್ರಾನ್ ಇನ್ನಿಲ್ಲದಂತೆ ಕಾಡುತ್ತದೆ. ಈ ಕೊರೊನಾ ಕಾಟ ಪಾಕಿಸ್ತಾನವನ್ನೂ ಬಿಟ್ಟಿಲ್ಲ, ದಿನೇ ದಿನೇ ಸಾಂಕ್ರಾಮಿಕ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಪಾಕಿಸ್ತಾನ ಕ್ರಿಕೆಟಿಗರು ಬೂಸ್ಟರ್ ಡೋಸ್ ಮೊರೆ ಹೋಗಿದ್ದಾರೆ.

ಪಾಕಿಸ್ತಾನದ ರಾಷ್ಟ್ರೀಯ ಆಟಗಾರರು, ಸಿಬ್ಬಂದಿ ಹಾಗೂ ನ್ಯಾಷನಲ್ ಹೈ ಪರ್ಫಾಮೆನ್ಸ ಸೆಂಟರ್ (ಎನ್‌ಎಚ್‌ಪಿಸಿ) ಸ್ಟಾಫ್ ಫೈಜರ್ ಬೂಸ್ಟರ್ ಡೋಸ್ ಹಾಕಿಸಿಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮತ್ತು ಓಪನರ್ ಇಮಾಮ್ ಉಲ್‌ ಹಕ್‌ ಎರಡು ದಿನಗಳ ಮುಂಚೆಯೇ ಬೂಸ್ಟರ್ ಡೋಸ್ ಪಡೆದಿದ್ದು, ಉಸ್ಮಾನ್ ಖಾದಿರ್, ಫಹೀಮ್ ಅಶ್ರಮ್, ಅಜರ್ ಅಲಿ, ನಸೀಮ್ ಶಾ ಮತ್ತು ಶಾಹಿನ್ ಅಫ್ರಿದಿ ಶುಕ್ರವಾರ ಲಸಿಕೆ ಪಡೆದಿದ್ದಾರೆ.

ಈಗಾಗಲೇ ಪಾಕಿಸ್ತಾನ ತಂಡದ ಆಟಗಾರರು ಎರಡು ಬಾರಿ ಲಸಿಕೆ ಪಡೆದಿದ್ದರು. ಇದೀಗ ಫೈಜರ್ ಮೂರನೇ ಡೋಸ್ ಪಡೆದಿದ್ದಾರೆ. ಕಳೆದ ವರ್ಷ ಅಕ್ಟೋಬರ್ 14 ರಿಂದ ಮೊದಲ ಬಾರಿಗೆ ಪಾಕಿಸ್ತಾನದ ಕೋವಿಡ್-19 ಪಾಸಿಟಿವ್ ಅನುಪಾತವು ಒಂದೇ ದಿನದಲ್ಲಿ 2% ಮೀರಿದೆ. ಗುರುವಾರ (ಜನವರಿ 6) ಬೆಳಿಗ್ಗೆ ಬಿಡುಗಡೆಗೊಂಡ ಅಂಕಿ ಅಂಶಗಳ ಪ್ರಕಾರ 24 ಗಂಟೆಗಳಲ್ಲಿ 1,085 ಹೊಸ ಪ್ರಕರಣಗಳು ದಾಖಲಾಗಿವೆ.

ಪಾಕಿಸ್ತಾನ ಮಹಿಳೆ ಕ್ರಿಕೆಟಿಗರಿಗೂ ಬೂಸ್ಟರ್‌ ಡೋಸ್
ಪಾಕಿಸ್ತಾನ ಮಹಿಳಾ ಕ್ರಿಕೆಟಿಗರು ಸಹ ಬೂಸ್ಟರ್ ಡೋಸ್ ಪಡೆದಿದ್ದು, ಇತರ ನಗರಗಳಲ್ಲಿ ವಾಸಿಸುವ ಕ್ರಿಕೆಟಿಗರಿಗೆ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಯು ಶುಕ್ರವಾರ ಸಂಜೆಯ ವೇಳೆಗೆ ಮುಕ್ತಾಯಗೊಳ್ಳಲಿದೆ. ಮಹಿಳಾ ಕ್ರಿಕೆಟಿಗರು ಮತ್ತು ಅವರ ಸಹಾಯಕ ಸಿಬ್ಬಂದಿ ಈಗಾಗಲೇ ಬೂಸ್ಟರ್ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ.

ಇದರ ನಡುವೆ ಪಾಕಿಸ್ತಾನ ಪುರುಷರ ತಂಡವು 2021ನೇ ವರ್ಷವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದು, ಬಾಬರ್ ಅಜಮ್ ನೇತೃತ್ವದಲ್ಲಿ ವಿಶ್ವದಾಖಲೆಯ 20 ಟಿ20 ಪಂದ್ಯ ಗೆದ್ದಿದೆ. ಆದ್ರೂ ಟಿ20 ವಿಶ್ವಕಪ್ ಸೆಮಿಫೈನಲ್ ಆಸ್ಟ್ರೇಲಿಯಾ ವಿರುದ್ಧ ಐದು ವಿಕೆಟ್‌ಗಳ ಸೋಲನ್ನ ಕಂಡಿತು.

Story first published: Saturday, January 8, 2022, 10:06 [IST]
Other articles published on Jan 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+