ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪಾಕಿಸ್ತಾನ ಆಟಗಾರ ಅಝರ್ ಅಲಿ

ಕರಾಚಿ, ನವೆಂಬರ್ 1: ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಆಟಗಾರ ಅಝರ್ ಅಲಿ ಅವರು ಗುರುವಾರ (ನವೆಂಬರ್ 1) ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ಕಡೆ ತಾನು ಗಮನ ಹರಿಸುವುದಾಗಿ ಅಝರ್ ಹೇಳಿಕೊಂಡಿದ್ದಾರೆ.
33ರ ಹರೆಯದ ಅಝರ್, ತಾನು ಟೆಸ್ಟ್ ಕ್ರಿಕೆಟ್ ನತ್ತ ಗಮನ ಹರಿಸುವ ಸಲುವಾಗಿ ಏಕದಿನಕ್ಕೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದೆ. ಅಲ್ಲದೆ ಏಕದಿನದಿಂದ ದೂರ ಸರಿಯಲು ಇದು ಸಕಾಲ ಅಂತ ನನಗನ್ನಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ನನ್ನ ನಿರ್ಧಾರ ಘೋಷಿಸುತ್ತಿರುವುದರ ಬಗ್ಗೆ ನಾನು ತಂಡದ ಆಯ್ಕೆ ಸಮಿತಿಯವರು, ನಾಯಕ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ತಿಳಿಸಿದ್ದೇನೆ. ಸಾಕಷ್ಟು ಯೋಚಿಸಿದ ಬಳಿಕವೂ ನಾನೀ ನಿರ್ಧವನ್ನು ತಾಳಿದ್ದೇನೆ' ಎಂದು ಲಾಹೋರ್ ನಲ್ಲಿ ಮಾತಿಗೆ ಸಿಕ್ಕ ಅಝರ್ ಸುದ್ದಿಗಾರರಲ್ಲಿ ಹೇಳಿದರು.
ಈ ವರ್ಷಾರಂಭದಲ್ಲಿ ಅಂದರೆ ಜನವರಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಲಿ ಕಡೆಯಬಾರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದರು. ಒಟ್ಟು 53 ಏಕದಿನ ಪಂದ್ಯಗಳನ್ನಾಡಿರುವ ಅಝರ್, 36.90ರ ಸರಾಸರಿಯಲ್ಲಿ 74.45 ಸ್ಟ್ರೈಕ್ ರೇಟ್ ನೊಂದಿಗೆ 1,845 ರನ್ ಸಾಧನೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications