Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Fawad Alam: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪಾಕಿಸ್ತಾನ ಬ್ಯಾಟರ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಫವಾದ್ ಆಲಂ ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದರು ಮತ್ತು ಈಗ ಯುಎಸ್‌ಎನಲ್ಲಿ ಮೈನರ್ ಲೀಗ್ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗಿದ್ದಾರೆ.

ಗಮನಾರ್ಹವಾಗಿ, ಇತ್ತೀಚೆಗೆ ಮುಕ್ತಾಯಗೊಂಡ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ)ಗೆ ಆಧಾರವಾಗಿರುವ ಪಂದ್ಯಾವಳಿಯಲ್ಲಿ ಚಿಕಾಗೊ ಕಿಂಗ್ಸ್‌ಮೆನ್ ತಂಡಕ್ಕೆ ಹೊರಗಿನ ಬ್ಯಾಟರ್ ಫವಾದ್ ಆಲಂ "ಸ್ಥಳೀಯ' ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

Pakistan Cricketer Fawad Alam Has Announced His Retirement From International Cricket

2007ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ವೇಳೆ ಫವಾದ್ ಆಲಂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲಿಂದೀಚೆಗೆ, ಪಾಕಿಸ್ತಾನ ತಂಡಕ್ಕಾಗಿ ಅವರು ಅಡಿದ 38 ಏಕದಿನ ಪಂದ್ಯಗಳಲ್ಲಿ 966 ರನ್, 24 ಟಿ20 ಪಂದ್ಯಗಳಲ್ಲಿ 194 ರನ್ ಮತ್ತು 19 ಟೆಸ್ಟ್‌ ಪಂದ್ಯಗಳಲ್ಲಿ 1011 ರನ್‌ಗಳನ್ನು ಗಳಿಸಿದ್ದಾರೆ.

ರಾಷ್ಟ್ರೀಯ ತಂಡದೊಂದಿಗಿನ ಫವಾದ್ ಆಲಂ ಅವರ ಕ್ರಿಕೆಟ್ ವೃತ್ತಿಜೀವನವು ಏಕದಿನ ಪಂದ್ಯಗಳಲ್ಲಿ ಆರು ಅರ್ಧಶತಕಗಳು ಮತ್ತು ಒಂದು ಶತಕವನ್ನು ಒಳಗೊಂಡಿದೆ. ಅಲ್ಲೆ ಎರಡು ಅರ್ಧಶತಕಗಳು ಮತ್ತು ಐದು ಶತಕಗಳನ್ನು ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಬಂದಿವೆ.

ಅವಕಾಶಗಳ ಕೊರತೆ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ತಂಡದಲ್ಲಿ ಬದಲಾವಣೆಯ ಅಗತ್ಯತೆಯಿಂದಾಗಿ, ಫವಾದ್ ಆಲಂ ಅವರು ಅವಕಾಶಗಳನ್ನು ಪಡೆಯಲು ವಿಫಲರಾದರು ಹಾಗೂ ಹೆಚ್ಚಾಗಿ ಸೈಡ್‌ಲೈನ್‌ಗೆ ತಳ್ಳಲ್ಪಟ್ಟರು. ಫವಾದ್ ಆಲಂ ಕೊನೆಯದಾಗಿ 2022ರಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡದ ಪರ ಆಡಿದ್ದರು.

Pakistan Cricketer Fawad Alam Has Announced His Retirement From International Cricket

ಫವಾದ್ ಆಲಂ ತನ್ನ ಅಂತಿಮ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 24 ಮತ್ತು 1 ರನ್‌ಗಳ ಅಲ್ಪ ಸ್ಕೋರ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದು ಅವರನ್ನು ರಾಷ್ಟ್ರೀಯ ತಂಡದಿಂದ ಕಡೆಗಣಿಸಲು ಕಾರಣವಾಯಿತು.

ಸಮಿ ಅಸ್ಲಾಮ್, ಹಮ್ಮದ್ ಅಜಮ್, ಸೈಫ್ ಬದರ್ ಮತ್ತು ಮೊಹಮ್ಮದ್ ಮೊಹ್ಸಿನ್ ಕೂಡ ಮೈನರ್ ಲೀಗ್ ಕ್ರಿಕೆಟ್‌ಗೆ ಸೇರ್ಪಡೆಗೊಂಡಿರುವುದರಿಂದ ಫವಾದ್ ಆಲಂ ತನ್ನ ನೆಲೆಯನ್ನು ಯುಎಸ್‌ಎಗೆ ಸ್ಥಳಾಂತರಿಸಿದ ಏಕೈಕ ಪಾಕಿಸ್ತಾನ ಕ್ರಿಕೆಟಿಗನಲ್ಲ ಎನ್ನಬಹುದು.

ಮೈನರ್ ಲೀಗ್ ಕ್ರಿಕೆಟ್ ಕುರಿತು ಹೇಳುವುದಾದರೆ, ಫವಾದ್ ಆಲಂನ ತಂಡ ಚಿಕಾಗೋ ಕಿಂಗ್ಸ್‌ಮೆನ್ ಸೆಂಟ್ರಲ್ ಡಿವಿಷನ್‌ನ ಒಂದು ಭಾಗವಾಗಿದೆ, ಇದರಲ್ಲಿ ಕ್ರಾಸ್-ಟೌನ್ ಪ್ರತಿಸ್ಪರ್ಧಿ ಚಿಕಾಗೋ ಟೈಗರ್ಸ್ ಕೂಡ ಸೇರಿದ್ದಾರೆ. ಸ್ಪರ್ಧೆಯ 2023ರ ಕ್ರೀಡಾಋತುವು ಆಗಸ್ಟ್ 5ರಂದು ಆರಂಭವಾಗಿದ್ದು, ಏಳು ವಾರಗಳ ಅವಧಿಯಲ್ಲಿ 150 ಪಂದ್ಯಗಳು ನಡೆಯಲಿವೆ.

ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯಲಿರುವ 19 ಪಂದ್ಯಗಳು ಸೇರಿದಂತೆ 26 ತಂಡಗಳು 17 ಸ್ಥಳಗಳಲ್ಲಿ ಆಡಲಿವೆ. 2022ರಲ್ಲಿ ನಡೆದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಅಟ್ಲಾಂಟಾ ಫೈರ್ ತಂಡವನ್ನು ಸೋಲಿಸಿದ ಸಿಯಾಟಲ್ ಥಂಡರ್ಬೋಲ್ಟ್ಸ್ ಹಾಲಿ ಚಾಂಪಿಯನ್ ಆಗಿದೆ.

Story first published: Tuesday, August 8, 2023, 16:42 [IST]
Other articles published on Aug 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+