ಇನ್ನೇನು ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ವಿಶ್ವಕಪ್‌ಗೆ ಪ್ರಕಟಗೊಂಡ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಇನ್ನು ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿರುವ ತಂಡಗಳು ಈಗಾಗಲೇ ಸಮರಾಭ್ಯಾಸ ನಡೆಸಿವೆ. ಈ ಬಾರಿಯ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಸಹ ಪ್ರಕಟಿಸಲಾಗಿದೆ. ಆದರೆ ತಂಡ ಟಿ20 ವಿಶ್ವಕಪ್‌ನಲ್ಲಿ ಆಡುತ್ತದೋ ಇಲ್ಲವೋ ಎನ್ನುವ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ.
ಬಾಂಗ್ಲಾದೇಶ ತಂಡವನ್ನು ಐಸಿಸಿ ಟಿ20 ವಿಶ್ವಕಪ್‌ನಿಂದ ಹೊರಗಿಡುತ್ತಿದ್ದಂತೆ, ಪಾಕಿಸ್ತಾನ ಭಾಗವಹಿಸುವಿಕೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಪ್ರಧಾನಿ ಶೆಹಬಾಜ್ ಷರೀಫ್ ಅವರೊದಿಗೆ ಸಭೆ ನಡೆಸಿದರು. ಈ ವೇಳೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತದೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ ಎಂದು ಭಾವಿಸಿದ್ದರು. ಆದರೆ ಪಾಕಿಸ್ತಾನ ಭಾಗವಹಿಸುವಿಕೆಯ ಬಗ್ಗೆ ತೀರ್ಮಾನವನ್ನು ಮುಂದಿನ ಶನಿವಾರದೊಳಗೆ ತೆಗೆದುಕೊಳ್ಳಲಾಗುವುದು ನಖ್ವಿ ತಿಳಿಸಿದ್ದಾರೆ.

ಐಸಿಸಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿರುತ್ತದೆ. ಈ ಒಪ್ಪಂದದ ಅಡಿಯಲ್ಲಿ ಪಿಸಿಬಿ ಸಹ ಐಸಿಸಿ ಜೊತೆ ಸದಸ್ಯರ ಭಾಗವಹಿಸುವಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಕಾನೂನು ಬದ್ಧವಾದ ದಾಖಲೆ. ಇದರ ಅಡಿಯಲ್ಲಿ ಯಾವುದೇ ಟೂರ್ನಿ, ನಿರ್ಧಿಷ್ಟ ಪಂದ್ಯದಿಂದ ತಂಡ ಹಿಂದೆ ಸರಿದಲ್ಲಿ ಕಠಿಣ ಶಿಕ್ಷೆಗೆ ಬಳಗಗಾಬೇಕುತ್ತದೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಆಡದೇ ಇದ್ದಲ್ಲಿ ಬ್ರಾಡ್‌ಕಾಸ್ಟರ್‌ರಿಂದ ಕಾನೂನು ಹೋರಾಟವನ್ನು ಎದುರಿಸಬೇಕಾಗುತ್ತದೆ. ರೆವ್‌ಸ್ಫೋರ್ಟ್ಸ್ (RevSportz) ವರದಿಯಂತೆ ಈ ಪಂದ್ಯದ ಜಾಹೀರಾತುದಾರರು, ಬ್ರ್ಯಾಂಡಿಂಗ್, ಪ್ರಾಯೋಜಕತ್ವದಿಂದ ಸುಮಾರು 38 ಮಿಲಿಯನ್ ಡಾಲರ್ ಆದಾಯ ಗಳಿಸುತ್ತದೆ ಎಂದು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗದೆ. ಒಂದು ವೇಳೆ ಪಿಸಿಬಿ ಈ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದರೆ, ಭಾರೀ ಮೊತ್ತದ ಪರಿಹಾರ ಬೇಡಿಕೆಯನ್ನು ಎದುರಿಸಲಿದೆ. ಅಲ್ಲದೆ ಕಾನೂನು ಹೋರಾಟಕ್ಕೂ ಸಿದ್ಧವಾಗಬೇಕಾಗುತ್ತದೆ.
ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವುದಾ ಎಂಬ ಪ್ರಶ್ನೆಗೆ ಶುಕ್ರವಾರ, ಮುಂದಿನ ಸೋಮವಾರದೊಳಗೆ ಉತ್ತರ ಸಿಗಲಿದೆ. ಪಾಕಿಸ್ತಾನ ಹಾಗೂ ಭಾರತ ನಡುವಣ ಹದಗೆಟ್ಟ ಸಂಬಂಧದಿಂದಾಬಿ ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿಲ್ಲು. ಎರಡೂ ರಾಷ್ಟ್ರಗಳು ಈಗ ಬರೀ ಎಸಿಸಿ, ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ. ಆದಾಗ್ಯೂ ಐಸಿಸಿ, ಬಿಸಿಸಿಐ ಹಾಗೂ ಪಿಸಿಬಿ ನಡುವಣ ಒಂದು ಒಂಪಂದವಾಗಿದೆ. ಈ ವೇಳೆ ಉಭಯ ತಂಡಗಳ ನಡುವಣ ಕಾದಾಟವನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಪಾಕಿಸ್ತಾನ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪ್ರಯಾಣ ಬೆಳೆಸಿರಲಿಲ್ಲ. ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಅಂತೆಯ ಭಾರತ ಏಷ್ಯಾಕಪ್ ಟಿ20 ಟೂರ್ನಿಯನ್ನು ಆಯೋಜಿಸಿತ್ತು. ಆದರೆ ಎಲ್ಲ ಪಂದ್ಗಗಳನ್ನು ಸಹ ತಟಸ್ಥ ಸ್ಥಳದಲ್ಲಿ ನಡೆಸಲಾಯಿತು.