ಭವಿಷ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲು ಈತನೇ ಸೂಕ್ತ ಎಂದ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ

ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌ನ ಪಂದ್ಯ ಇತ್ತೀಚಿನ ದಿನಗಳ ಅತ್ಯಂತ ರೋಚಕ ಪಂದ್ಯ ಎಂದು ಬಣ್ಣಿಸಲಾಗುತ್ತಿದೆ. ಅದರಲ್ಲೂ ಅಂತಿಮ ಎರಡು ಓವರ್‌ಗಳಲ್ಲಿ ಭಾರತ ಪಂದ್ಯವನ್ನು ತನ್ನತ್ತ ತಿರುಗಿಸಿದ ರೀತಿ ಹಾಗೂ ಕೊನೆಯ ಓವರ್‌ನಲ್ಲಿ ನಡೆದ ನಾಟಕೀಯ ತಿರುವುಗಳು ಈ ಪಂದ್ಯ ಅಭಿಮಾನಿಗಳಿಗೆ ಅತ್ಯಂತ ರೋಮಾಂಚನಕಾರಿ ಅನುಭವವನ್ನುಂಟು ಮಾಡಿರುವುದರಲ್ಲಿ ಅನುಮಾನವಿಲ್ಲ.
ಈ ಅದ್ಭುತ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಕಾರಣವಾಗಿದ್ದು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಜೊತೆಯಾಟ. ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಯಾದ ಈ ಜೋಡಿ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದ್ದಲ್ಲದೆ ಗೆಲುವಿಗೂ ಕಾರಣವಾಯಿತು. ಈ ಅಮೋಘ ಆಟದ ಬಗ್ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಕೊಹ್ಲಿ ಹಾಗೂ ಹಾರ್ದಿಕ್ ಪ್ರದರ್ಶನದ ಬಗ್ಗೆ ಸಾಕಷ್ಟು ವಿಶೇಷ ಪ್ರಶಂಸೆಗಳನ್ನು ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಕರ್ ಯೂನಿಸ್ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾದ ಭವಿಷ್ಯದ ನಾಯಕನ ಬಗ್ಗೆ ಮಾತನಾಡಿದ್ದಾರೆ.

ಹಾರ್ದಿಕ್ ಭಾರತದ ನಾಯಕನಾದರೆ ನನಗೆ ಅಚ್ಚರಿಯಾಗದು
ಪಾಕಿಸ್ತಾನ ತಂಡದ ಮಾಜಿ ನಾಯಕ ವಾಕರ್ ಯೂನಿಸ್ ಹಾರ್ದಿಕ್ ಪಾಂಡ್ಯ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಭವಿಷ್ಯದಲ್ಲಿ ಭಾರತ ತಂಡದ ನಾಯಕನಾದರೆ ನನಗೆ ಅಚ್ಚರಿಯಾಗದು ಎಂದಿದ್ದಾರೆ ವಾಕರ್ ಯೂನಿಸ್. ವಾಕರ್ ಯೂನಿಸ್ ಮಾತಿಗೆ ಮತ್ತೋರ್ವ ಪಾಕಿಸ್ತಾನದ ದಿಗ್ಗಜ ಆಟಗಾರ ವಾಸಿಂ ಅಕ್ರಮ್ ಕೂಡ ದನಿಗೂಡಿಸಿದ್ದು ಐಪಿಎಲ್‌ನಲ್ಲಿಯೂ ಹಾರ್ದಿಕ್ ಪಾಂಡ್ಯ ನಾಯಕನಾಗಿ ಅತ್ಯಂತ ಯಶಸ್ಸು ಸಾಧಿಸಿದ್ದು ಈಗ ಭಾರತ ತಂಡದಲ್ಲಿ ಒಂದು ಶಕ್ತಿಯಾಗಿದ್ದಾರೆ ಎಂದಿದ್ದಾರೆ.

ನಾಯಕನಿಗೆ ಸಲಹೆಗಳನ್ನು ನೀಡುತ್ತಿದ್ದಾರೆ ಎಂದ ಅಕ್ರಮ್
ವಾಕರ್ ಯೂನಿಸ್ ಮಾತಿಗೆ ವಾಸಿಂ ಅಕ್ರಮ್ ಬೆಂಬಲ ಸೂಚಿಸಿದ್ದಾರೆ. "ಮೊದಲಿಗೆ ಆತ ಐಪಿಎಲ್‌ನಲ್ಲಿ ನಾಯಕನಾಗಿ ಅಲ್ಲಿ ಗೆಲುವು ಸಾಧಿಸಿದರು. ಈಗ ಭಾರತ ತಂಡದಲ್ಲಿಯೇ ದೊಡ್ಡ ಶಕ್ತಿಯಾಗಿದ್ದು ನಾಯಕನಿಗೇ ಸಲಹೆಗಳನ್ನು ನೀಡುತ್ತಿದ್ದಾರೆ. ಆತ ಸಾಕಷ್ಟು ತಾಳ್ಮೆಯಿಂದಿದ್ದು ಸಾಕಷ್ಟು ವಿಚಾರಗಳನ್ನು ಕಲಿಯುತ್ತಿದ್ದಾರೆ" ಎಂದು ವಾಸಿಂ ಅಕ್ರಮ್ ಕೂಡ ಹೇಳಿಕೆ ನೀಡಿದ್ದಾರೆ.

ಗೆಲುವಿನ ಜೊತೆಯಾಟ ನೀಡಿದ ಹಾರ್ದಿಕ್
ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಹೃದಯಗೆಲ್ಲುವಲ್ಲಿ ಯಶಸ್ವಿಯಾಯಿತು. ಸುಲಭ ಸೋಲಿಗೆ ಒಳಗಾಗುವ ಆತಂಕದಲ್ಲಿದ್ದಾಗ ವಿರಾಟ್ ಕೊಹ್ಲಿಗೆ ಜೊತೆಯಾದ ಪಾಂಡ್ಯ ಅಮೋಘ ಜೊತೆಯಾಟದಲ್ಲೊಇ ಭಾಗಿಯಾದರು. ಕೊಹ್ಲಿ ಹಾಗೂ ಹಾರ್ದಿಕ್ ಜೋಡಿ ನಿರ್ಣಾಯಕ 113 ರನ್‌ಗಳ ಕೊತೆಯಾಟವನ್ನು ನೀಡಿದರು. ಅಂತಿಮ ಓವರ್‌ವರೆಗೂ ಹೋರಾಡಿದ ಪಾಂಡ್ಯ ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ್ದ ಅವರು ಮೂರು ವಿಕೆಟ್ ಕಿತ್ತು ಪೊಆಕ್ ದಾಂಡಿಗರಿಗೆ ಆಘಾತ ನೀಡಿದ್ದರು.

ಕಳೆದ ಐಪಿಎಲ್ ಬಳಿಕ ಸಂಪೂರ್ಣ ಬದಲಾದ ಪಾಂಡ್ಯ
ಕಳೆದ ವರ್ಷದ ವಿಶ್ವಕಪ್‌ನಲ್ಲಿ ಫಿಟ್ನೆಸ್ ಸಮಸ್ಯೆಗೆ ಒಳಗಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಬಳಿಕ ತಂಡದಿಂದ ಸುದೀರ್ಘ ಕಾಲ ಹೊರಬಿದ್ದಿದ್ದರು. ಬಳಿಕ ಐಪಿಎಲ್ ಮೂಲಕ ಕಮ್‌ಬ್ಯಾಕ್ ಮಾಡಿದ ಹಾರ್ದಿಕ್ ಐಪಿಎಲ್‌ನ ಹೊಸ ತಂಡವಾದ ಗುಜರಾತ್ ಟೈಟನ್ಸ್ ತಂಡದ ಚುಕ್ಕಾಣಿ ಹಿಡಿದರು. ಈ ಟೂರ್ನಿಯಲ್ಲಿ ನಾಯಕನಾಗಿ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿಯೂ ಜವಾಬ್ಧಾರಿ ತೆಗೆದುಕೊಂಡು ಅಮೋಘ ಪ್ರದರ್ಶನ ನೀಡಿದರು. ಸಮಯಕ್ಕೆ ತಕ್ಕನಾಗಿ ಪ್ರದರ್ಶನ ನೀಡುವ ಮೂಲಕ ತಾನು ಬ್ಯಾಟರ್ ಆಗಿ ಎಷ್ಟು ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದರು. ಈ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ ಅಮೋಘ ಫಾರ್ಮ್ ಮುಂದುವರಿಸಿಕೊಂಡು ಬಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications