For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ಈ ಇಬ್ಬರು ಆಟಗಾರರಂತೆ ನಮ್ಮಲ್ಲಿ ಯಾರೂ ಇಲ್ಲ ಎಂದು ಮುಂದೆ ಭಾರತೀಯರು ಹೇಳಲಿದ್ದಾರೆ"

Pakistan Former skipper Rashid Latif praises Rizwan and Babar for remarkable consistency

ಪಾಕಿಸ್ತಾನ ಕ್ರಿಕೆಟ್ ತಂಡ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಟಿ20 ಮಾದರಿಯಲ್ಲಿ ಉತ್ತಮ ಯಶಸ್ಸು ಕಾಣುತ್ತಿದೆ. ಅದರಲ್ಲೂ ಕಳೆದ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮಣಿಸಿದ ಬಳಿಕ ಭಾರೀ ಆತ್ಮವಿಶ್ವಾಸದಲ್ಲಿದೆ ಪಾಕ್ ತಂಡ. ಇದೀಗ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿಯೂ ಪಾಕ್ ತಂಡ 3-0 ಅಂತರದಿಂದ ಪ್ರವಾಸಿ ತಂಡವನ್ನು ವೈಟ್‌ವಾಶ್ ಮಾಡುವಲ್ಲಿ ಯಶಸ್ವಿಯಾಗಿದೆ. ಪಾಖಿಸ್ತಾನ ತಂಡದ ಈ ಯಶಸ್ಸನ್ನು ನೋಡಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಭಾರತೀಯ ತಂಡದ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ!

ಈ ವರ್ಷದುದ್ದಕ್ಕೂ ಪಾಕಿಸ್ತಾನ ತಂಡದ ಇಬ್ಬರು ಆಟಗಾರರಾದ ಮೊಹಮ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಂ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಇಬ್ಬರು ಆಟಗಾರರಿಂದಲೂ ಅತ್ಯಂತ ಸ್ಥರ ಪ್ರದರ್ಶನ ಬರುತ್ತಿದೆ. ಈ ಇಬ್ಬರು ಕೂಡ ಹಲವು ವೈಯಕ್ತಿಕ ಹಾಗೂ ಜೊತೆಯಾಟದ ದಾಖಲೆಗಳನ್ನು ಮುರಿದಿದ್ದಾರೆ. ಈ ಇಬ್ಬರು ಆಟಗಾರರ ಪ್ರದರ್ಶನವನ್ನು ಉಲ್ಲೇಖಿಸಿ ಭಾರತೀಯ ಅಭಿಮಾನಿಗಳತ್ತ ಪಾಕ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಸವಾಲೆಸೆದಿದ್ದಾರೆ.

"ಈ ಹಿಂದೆ ನಾವೆಲ್ಲಾ ಟಿ20 ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅವರಂತಾ ಆಟಗಾರರು ನಮ್ಮಲ್ಲಿಲ್ಲ ಎಂದು ಹೇಳುತ್ತಿದ್ದೆವು. ಆದೆ ಕೆಲ ಸಮಯಗಳ ನಂತರ ಭಾರತೀಯರು ಕೂಡ ನಾವು ರಿಜ್ವಾನ್ ಮತ್ತು ಬಾಬರ್ ಅಜಂ ಅವರಂತಾ ಆಟಗಾರರನ್ನು ಹೊಂದಿಲ್ಲ ಎಂದು ಹೇಳಲಿದ್ದಾರೆ" ಎಂದು ರಶೀದ್ ಲತೀಫ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವೆಸ್‌ಟ ಇಮಡಿಸ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರರ ಪ್ರದರ್ಶನದ ಬಳಿಕ ಈ ಮಾತನ್ನು ರಶೀದ್ ಲತೀಫ್ ಹೇಳಿದ್ದಾರೆ.

ಕಳೆದ 12 ತಿಂಗಳ ಅವಧಿಯಲ್ಲಿ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಂ ಜೋಡಿ ಸಾಕಷ್ಟು ಅದ್ಭುತ ಜೊತೆಯಾಟವನ್ನು ನೀಡಿದ್ದಾರೆ. ಅದದರಲ್ಲೂ ಭಾರತದ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಈ ಆಟಗಾರರ ಜೊತೆಯಾಟ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವುದರಲ್ಲಿ ಅನುಮಾನವಿಲ್ಲ. ಈ ಪಂದ್ಯದಲ್ಲಿ ಈ ಆರಂಭಿಕ ಜೋಡಿ ಅಜೇಯ 152 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಪಾಕಿಸ್ತಾನ ಭಾರತದ ವಿರುದ್ಧ ವಿಶ್ವಕಪ್‌ನಲ್ಲಿ ಪ್ರಪ್ರಥಮ ಗೆಲುವು ಸಾಧಿಸಿತು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 900ಕ್ಕೂ ಅಧಿಕ ರನ್‌ಗಳಿಸಿದ ಮೊದಲ ಇಬ್ಬರು ಆಟಗಾರರು ಎಂಬ ಹೆಗ್ಗಳಿಕೆಯನ್ನು ಈ ಇಬ್ಬರು ಆಟಗಾರರು ಪಡೆದುಕೊಂಡಿದ್ದಾರೆ. ರಿಜ್ವಾನ್ 26 ಇನ್ನಿಂಗ್ಸ್‌ಗಳಲ್ಲಿ 73.66 ಸರಾಸರಿಯಲ್ಲಿ 1326 ರನ್‌ಗಳಿಸಿದ್ದಾರೆ. ಇದರಲ್ಲಿ 12 ಅರ್ಧ ಶತಕ ಹಾಗೂ ಒಂದು ಶತಕ ಸೇರಿದೆ. ಇನ್ನು ಬಾಬರ್ ಅಜಂ ಕೂಡ 26 ಇನ್ನಿಂಗ್ಸ್‌ಗಳನ್ನು ಆಡಿದ್ದು 939 ರನ್‌ಗಳಿಸಿದ್ದಾರೆ. 37.56ರ ಸರಾಸರಿಯಲ್ಲಿ 127.58ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ ಬಾಬರ್ ಅಜಂ.

ಇನ್ನು ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಒಂದು ವರ್ಷದಲ್ಲಿ ಅತಿ ಹೆಚ್ಚು 150+ ರನ್‌ಗಳ ಜೊತೆಯಾಟವನ್ನು ನೀಡಿದ ಜೋಡಿ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಇಬ್ಬರು ಆಟಗಾರರ ಜೋಡಿ ಈ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು 150+ ರನ್‌ಗಳ ಜೊತೆಯಾಟವನ್ನು ನೀಡಿದೆ. ಇತ್ತೀಚೆಗೆ ಅಂತ್ಯವಾದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ 15.1 ಓವರ್‌ಗಳಲ್ಲಿ 158 ರನ್‌ಗಳ ಜೊತೆಯಾಟವನ್ನು ನೀಡಿದ್ದರು. ಈ ಮೂಲಕ ಪಾಕಿಸ್ತಾನ ಈ ಸರಣಿಯಲ್ಲಿ 3-0 ಅಂತರದಿಂದ ಗೆಲ್ಲು ಕಾರಣವಾಗಿದ್ದರು.

Story first published: Sunday, December 19, 2021, 13:00 [IST]
Other articles published on Dec 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+