ರನ್‌ಔಟ್ ಆಗಿದ್ದು ನನ್ನ ತಪ್ಪಿನಿಂದಲೇ ಎಂದ ದ್ವಿಶತಕ ವಂಚಿತ ಫಖರ್ ಜಮಾನ್

ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಸರಣಿಯಲ್ಲಿ ಪಾಕ್ ಕ್ರಿಕೆಟಿಗ ಫಖರ್ ಜಮಾನ್ ಕೇವಲ 7 ರನ್‌ನಿಂಧ ದ್ವಿಶತಕ ಬಾರಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ ಫಖರ್ ರನ್‌ಔಟ್ ಆರ ರೀತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು ಕ್ವಿಂಟನ್ ಡಿ ಕಾಕ್ ಕ್ರೀಡಾಸ್ಪೂರ್ತಿ ಹಾಗೂ ಆಟದ ನಿಯಮಗಳಿಗೆ ವಿರುದ್ಧವಾಗಿ ರನ್‌ಔಟ್ ಮಾಡಿದರಾ ಎಂಬ ಚರ್ಚೆಗಳು ನಡೆಯುತ್ತಿದೆ. ಆದರೆ ಈ ಚರ್ಚೆಗೆ ಸ್ವತಃ ಫಖರ್ ಜಮಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಬ್ಯಾಟ್ಸ್‌ಮನ್ ಫಖರ್ ಜಮಾನ್ ಈ ವಿವಾದಕ್ಕೆ ಪ್ರತಿಕ್ರಿಯಿಸಿ ಈ ರನ್‌ಔಟ್‌ಗೆ ನಾನೇ ಕಾರಣ. ಕ್ವಿಂಟನ್ ಡಿಕಾಕ್ ಅಲ್ಲಿ ತಪ್ಪೆಸಗಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. "ನಾನು ನನ್ನ ತಪ್ಪಿನಿಂದಲೇ ಔಟ್ ಆಗಿದ್ದೇನೆ. ಇದರಲ್ಲಿ ಯಾವುದೇ ಅನುಮಾನಗಳಿಲ್ಲ. ರವೂಫ್ ತೊಂದರೆಗೆ ಸಿಲುಕಿದ್ದಾರೆ ಎಂದು ನಾನು ನಾನ್‌ಸ್ಟ್ರೈಕ್‌ನತ್ತ ಗಮನಹರಿಸಿದೆ. ಆ ಕಾರಣದಿಂದ ರನ್‌ಔಟ್ ಆಗಿದ್ದೇನೆ. ಆದರೆ ಕ್ವಿಂಟನ್ ಡಿಕಾಕ್ ಇಲ್ಲಿ ತಪ್ಪೆಸಗಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ" ಎಂದು ರವೂಫ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications