Wahab Riaz Retirement: ಏಷ್ಯಾಕಪ್, ವಿಶ್ವಕಪ್ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಪಾಕ್ ಬೌಲರ್
ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ವಹಾಬ್ ರಿಯಾಜ್ ಅವರು ಬುಧವಾರ, ಆಗಸ್ಟ್ 16ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಕೆಲವೇ ದಿನಗಳಲ್ಲಿ 2023ರ ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗುವ ಮೊದಲೇ 38 ವರ್ಷದ ಎಡಗೈ ವೇಗಿ ಅತ್ಯುನ್ನತ ಮಟ್ಟದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದರು. ಆದರೆ, ವಹಾಬ್ ರಿಯಾಜ್ ಅವರು ವಿಶ್ವದಾದ್ಯಂತ ಫ್ರಾಂಚೈಸ್ ಆಧಾರಿತ ಕ್ರಿಕೆಟ್ ಲೀಗ್ ಆಡವುದನ್ನು ಮುಂದುವರಿಸುತ್ತಾರೆ.

ವಹಾಬ್ ರಿಯಾಜ್ ಪಾಕಿಸ್ತಾನ ತಂಡದ ಪರ 27 ಟೆಸ್ಟ್, 91 ಏಕದಿನ ಮತ್ತು 36 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 237 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.
ವಹಾಬ್ ರಿಯಾಜ್ ಅವರು ಕೊನೆಯ ಬಾರಿಗೆ ಡಿಸೆಂಬರ್ 2020ರಲ್ಲಿ ಪಾಕಿಸ್ತಾನ ತಂಡದ ಪರ ಕಾಣಿಸಿಕೊಂಡಿದ್ದರು. ಆದಾಗ್ಯೂ, ಹಿರಿಯ ವೇಗಿ ಈ ವರ್ಷದ ಮಾರ್ಚ್‌ನಲ್ಲಿ ಇತ್ತೀಚೆಗೆ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ನಲ್ಲಿ ಆಡಿದ್ದರು.
"ಅಂತಾರಾಷ್ಟ್ರೀಯ ಪಿಚ್‌ನಿಂದ ಹೊರ ನಡೆಯುತ್ತಿದ್ದೇನೆ. ನಂಬಲಾಗದ ಪ್ರಯಾಣದ ನಂತರ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಪಿಸಿಬಿ, ನನ್ನ ಕುಟುಂಬ, ಕೋಚ್‌ಗಳು, ಮಾರ್ಗದರ್ಶಕರು, ತಂಡದ ಸಹ ಆಟಗಾರರು, ಅಭಿಮಾನಿಗಳು ಮತ್ತು ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಫ್ರಾಂಚೈಸಿ ಕ್ರಿಕೆಟ್ ಜಗತ್ತಿನಲ್ಲಿ ರೋಮಾಂಚನಕಾರಿ ಸಮಯ ಕಳೆಯುತ್ತೇನೆ," ವಹಾಬ್ ರಿಯಾಜ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

"ಕಳೆದ ಎರಡು ವರ್ಷಗಳಿಂದ ನನ್ನ ನಿವೃತ್ತಿ ಯೋಜನೆಗಳ ಬಗ್ಗೆ ಯೋಚಿಸುತ್ತಿದೆ. 2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನನ್ನ ಗುರಿಯಾಗಿದೆ ಮತ್ತು ನನ್ನ ದೇಶ ಮತ್ತು ರಾಷ್ಟ್ರೀಯ ತಂಡಕ್ಕೆ ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ಸೇವೆ ಸಲ್ಲಿಸಿದ್ದೇನೆ, ನಾನು ಈಗ ಹೆಚ್ಚು ಆರಾಮದಾಯಕವಾಗಿದ್ದೇನೆ," ಎಂದು ವಹಾಬ್ ರಿಯಾಜ್ ಬುಧವಾರ ಅಂತಾರಾಷ್ಟ್ರೀಯ ನಿವೃತ್ತಿಯ ನಂತರ ತಿಳಿಸಿದರು.
"ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುವುದು ಒಂದು ಗೌರವದ ವಿಷಯವಾಗಿದೆ. ಈ ಅಧ್ಯಾಯಕ್ಕೆ ನಾನು ವಿದಾಯ ಹೇಳುತ್ತಿದ್ದು, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ನಾನು ರೋಮಾಂಚನಗೊಂಡಿದ್ದೇನೆ. ಅಲ್ಲಿ ನಾನು ಕೆಲವು ವಿಶ್ವದ ಅತ್ಯುತ್ತಮ ಪ್ರತಿಭೆಗಳ ವಿರುದ್ಧ ಆಡುವಾಗ ಪ್ರೇಕ್ಷಕರಿಗೆ ಮನರಂಜನೆ ಮತ್ತು ಸ್ಫೂರ್ತಿ ನೀಡುವ ಭರವಸೆ ಇದೆ," ಎಂದು ಬರೆದುಕೊಂಡಿದ್ದಾರೆ.
ವಹಾಬ್ ರಿಯಾಜ್ ಸಾಮಾನ್ಯವಾಗಿ ಸುಮಾರು 145 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು ಮತ್ತು 2015ರ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 154.5 ಕಿಮೀ ವೇಗವನ್ನು ತಲುಪಿದ್ದರು.
ಆದರೂ, ವಹಾಬ್ ರಿಯಾಜ್ ಅವರ ಲೆಕ್ಕಾಚಾರವು ಪಾಕಿಸ್ತಾನ ತಂಡದ ಗೆಲುವಿಗೆ ಕಾರಣವಾಗಲಿಲ್ಲ. ಪಂದ್ಯಾವಳಿಯಲ್ಲಿ ಸೋತ ನಂತರ ಅವರು ವಿಷಾದ ವ್ಯಕ್ತಪಡಿಸಿದರು. ಇದರ ಹೊರತಾಗಿಯೂ, 2015ರ ವಿಶ್ವಕಪ್‌ನಲ್ಲಿ ರಿಯಾಜ್‌ರ ಪ್ರದರ್ಶನವು ಅಸಾಧಾರಣ ವೇಗದ ಬೌಲರ್ ಎಂಬ ಖ್ಯಾತಿ ತಂದುಕೊಟ್ಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications