ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಕ್ರಿಕೆಟ್ ತಂಡದ ಕರ್ಮಕಾಂಡದ ಬಗ್ಗೆ ವೇಗಿ ಜುನೈದ್ ಖಾನ್ ಕಿಡಿ

Pakistan players should be close with captain and management to get favours in team: Junaid Khan

ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಜುನೈದ್ ಖಾನ್ ತಂಡದ ವಿಚಾರವಾಗಿ ಆಘಾತಕಾರಿ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಂಡದ ಆಟಗಾರರು ತಮ್ಮ ವೃತ್ತಿ ಜೀವನದ ಭವಿಷ್ಯದ ವಿಚಾರವಾಗಿ ಆತಂಕದಲ್ಲಿದ್ದಾರೆ ಹಾಗೂ ಅಸ್ಥಿರತೆಯನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಜುನೈದ್ ಖಾನ್ ಆರೋಪಿಸಿರುವಂತೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ ನಾಯಕನಿಗೆ ಹಾಗೂ ತಂಡದ ಮ್ಯಾನೇಜ್‌ಮೆಂಟ್‌ಗೆ ಆತ್ಮೀಯವಾಗಿರಬೇಕು. ಇಲ್ಲವಾದಲ್ಲಿ ಅವಕಾಶಗಳು ದೊರೆಯುವುದಿಲ್ಲ ಎಂದು ಹೇಳಿದ್ದಾರೆ.

ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್

"ನೀವು ತಂಡದ ನಾಯಕ ಹಾಗೂ ಮ್ಯಾನೇಜ್‌ಮೆಂಟ್‌ನವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ನಿಮ್ಮನ್ನು ಚೆನ್ನಾಗಿ ಪರಿಗಣಿಸಲಾಗುತ್ತದೆ. ಇದರ ಆಧಾರದಲ್ಲಿ ನಿಮಗೆ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ದೊರೆಯುತ್ತದೆ" ಎಂದು ಜುನೈದ್ ಖಾನ್ ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನಿಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ನೀವು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲವಾದರೆ ತಂಡದಲ್ಲಿ ಸ್ಥಿರವಾಗಿ ಸ್ಥಾನವನ್ನು ಹೊಂದುವುದಿಲ್ಲ" ಎಂದಿದ್ದಾರೆ ಜುನೈದ್ ಖಾನ್.

"ನಾನು ತಂಡದ ಮೂರು ಮಾದರಿಯಲ್ಲಿಯೂ ರಾಷ್ಟ್ರೀಯ ತಂಡದ ಭಾಗವಾಗಿದ್ದೆ. ಆ ಸಂದರ್ಭದಲ್ಲಿ ನಾನು ವಿಶ್ರಾಂತಿಗಾಗಿ ಬೇಡಿಕೆಯಿಟ್ಟಿದ್ದೆ. ಆದರೆ ನನಗೆ ವಿಶ್ರಾಂತಿಯನ್ನು ನೀಡಿರಲಿಲ್ಲ. ಆದರೆ ನಾನು ಉತ್ತಮ ಫಾರ್ಮ್‌ನಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ಇಷ್ಟ ಕಷ್ಟಗಳಿಗೆ ಬೇಕಾದಂತೆ ತಂಡದಿಂದ ಹೊರಗಿಡಲಾಯಿತು. ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೆ. ಆದರೆ ನನಗೆ ಸರಿಯಾಗಿ ಅವಕಾಶವನ್ನೇ ನೀಡಲಿಲ್ಲ" ಎಂದು ಜುನೈದ್ ಖಾನ್ ಬೇಸರವನ್ನು ಹೊರಹಾಕಿದ್ದಾರೆ.

31ರ ಹರೆಯದ ಜುನೈದ್ ಖಾನ್ ಪಾಕಿಸ್ತಾನದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 190 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. 22 ಟೆಸ್ಟ್, 76 ಏಕದಿನ ಹಾಗೂ 8 ಟಿ20 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. ಆದರೆ 2019ರ ಮೇ ತಿಂಗಳ ಬಳಿಕ ಜುನೈದ್ ಖಾನ್‌ಗೆ ಅವಕಾಶ ದೊರೆತಿಲ್ಲ.

Story first published: Wednesday, May 5, 2021, 18:12 [IST]
Other articles published on May 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X