Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೋತ ಪಾಕಿಸ್ತಾನಕ್ಕೆ ಈಗ ಭಾರತವೇ ಗತಿ: ಟೀಮ್ ಇಂಡಿಯಾ ಗೆಲುವಿಗಾಗಿ ಬಾಬರ್ ಪಡೆಯ ಪ್ರಾರ್ಥನೆ!!

ಕನ್ನಡಿಗ ಕೆಎಲ್ ರಾಹುಲ್ ಹಾಗೂ ದಾಖಲೆ ವೀರ ವಿರಾಟ್ ಕೊಹ್ಲಿಯ ಅಮೋಘ ಶತಕ ಹಾಗೂ ಕುಲ್‌ದೀಪ್ ಯಾದವ್ ಐದು ವಿಕೆಟ್‌ಗಳ ಗೊಂಚಲು ಪಾಕಿಸ್ತಾನ ತಂಡಕ್ಕೆ ಭಾರೀ ಅಂತರದ ಸೋಲಿನ ರುಚಿ ತೋರಿಸಿದೆ. ಬ್ಯಾಟಿಂಗ್‌ನಲ್ಲಿ ಆರ್ಭಟಿಸಿದ ಟೀಮ್ ಇಂಡಿಯಾ ನಂತರ ಬೌಲಿಂಗ್‌ನಲ್ಲಿಯೂ ಪಾಕಿಸ್ತಾನಕ್ಕೆ ಸಣ್ಣ ಅವಕಾಶವನ್ನೂ ನೀಡದ ಕಾರಣ 228 ರನ್‌ಗಳ ಬೃಹತ್ ಅಂತರದ ಸೋಲನ್ನು ಕಂಡಿದೆ ಪಾಕಿಸ್ತಾನ.

ಈ ಗೆಲುವಿನೊಂದಿಗೆ ಭಾರತ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಸದ್ಯ ಉತ್ತಮ ಸ್ಥಿತಿಯಲ್ಲಿದೆ. ಭಾರತ ತಂಡಕ್ಕೆ ಇನ್ನು ಎರಡು ಪಂದ್ಯಗಳು ಬಾಕಿಯಿದ್ದು ಕನಿಷ್ಠ ಒಂದು ಪಂದ್ಯ ಗೆದ್ದರೂ ಭಾರತದ ಫೈನಲ್ ಟಿಕೆಟ್ ಬಹುತೇಕ ಖಚಿತಗೊಳ್ಳಲಿದೆ. ಆದರೆ ಪಾಕಿಸ್ತಾನದ ತಂಡದ ಸ್ಥಿತಿ ಭಿನ್ನವಾಗಿದ್ದು ಒಂದು ಪಂದ್ಯ ಮಾತ್ರವೇ ಪಾಕ್ ತಂಡದ ಮುಂದಿರುವ ಕಾರಣ ಭಾರೀ ಬಾಬರ್ ಪಡೆ ಸಂಕಷ್ಟದಲ್ಲಿದೆ.

Pakistan Prays for Indias Victory Against Sri Lanka to Secure Their Place in the Asia Cup Final

ಭಾರತದ ಗೆಲುವಿಗೆ ಪಾಕ್ ಪ್ರಾರ್ಥನೆ!!

ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಮರುದಿನವೇ ಭಾರತ ಸೂಪರ್ 4 ಹಂತದ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಭಾರತ ಹಾಗೂ ಶ್ರೀಲಂಕಾ ತಂಡಕ್ಕೆ ಇರುವಷ್ಟೇ ಪಾಕಿಸ್ಥಾನ ತಂಡಕ್ಕೂ ಮಹತ್ವದ್ದಾಗಿರಲಿದೆ. ಯಾಕೆಂದರೆ ಪಾಕಿಸ್ತಾನ ತಂಡ ಸೂಪರ್ 4 ಹಂತದಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಮುಗಿಸಿದ್ದು ಬಾಂಗ್ಲಾದೇಶ ತಂಡದ ವಿರುದ್ಧ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇನ್ನು ಪಾಕ್ ತಂಡಕ್ಕೆ ಉಳಿದಿರುವುದು ಕೇವಲ ಒಂದು ಪಂದ್ಯ ಮಾತ್ರ. ಅದು ಶ್ರೀಲಂಕಾ ತಂಡದ ವಿರುದ್ಧ.

ಸದ್ಯ ಪಾಕಿಸ್ತಾನ ತಂಡ ಅಂಕಪಟ್ಟಿಯಲ್ಲಿ ಶ್ರೀಲಂಕಾ ತಂಡಕ್ಕಿಂತಲೂ ಕೆಳಗಿದೆ. ಅಂದರೆ ಮೂರನೇ ಸ್ಥಾನದಲ್ಲಿದೆ. ಫೈನಲ್‌ಗೆ ಪ್ರವೇಶಿಸಬೇಕಾದರೆ ಲಂಕಾ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರುವುದು ಅಗತ್ಯ. ಹೀಗಾಗಿ ಭಾರತದ ವಿರುದ್ಧ ಶ್ರೀಲಂಕಾ ತಂಡ ಮುಖಾಮುಖಿಯಾದಾಗ ಲಂಕಾ ಸೋಲು ಅನುಭವಿಸಿದರೆ ಅದು ಕೂಡ ಎರಡೇ ಅಂಕದಲ್ಲಿ ಉಳಿದುಕೊಳ್ಳಲಿದೆ. ಆಗ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಎರಡು ತಂಡಗಳಿಗೂ ಫೈನಲ್‌ಗೇರಲು ನಿರ್ಣಾಯಕ ಎನಿಸಲಿದೆ.

ಭಾರತಕ್ಕೆ ಉತ್ತಮ ಅವಕಾಶ

ಇತ್ತ ಮತ್ತೊಂದೆಡೆ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೂ ಮತ್ತೊಂದು ಪಂದ್ಯವನ್ನು ಹೊಂದಿದೆ. ಆಗ ಭಾರತಕ್ಕೆ ಎದುರಾಳಿಯಾಗಿರುವುದು ಬಾಂಗ್ಲಾದೇಶ. ಶ್ರೀಲಂಕಾ ಅಥವಾ ಬಾಂಗ್ಲಾದೇಶ ಈ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಸಾಧಿಸಿದರೂ ಭಾರತ ಫೈನಲ್‌ಗೆ ಪ್ರವೇಶಿಸುವುದು ಬಹುತೇಕ ನಿಶ್ಚಿತ. ಭಾರತದ ಅದ್ಭುತ ನೆಟ್‌ರನ್‌ರೇಟ್ ಕೂಡ ಇದಕ್ಕೆ ಕಾರಣ.

ಲಂಕಾ ವಿರುದ್ಧ ಭಾರತ ಗೆದ್ದರೆ?

ಶ್ರೀಲಂಕಾ ವಿರುದ್ಧ ಭಾರತ ತಂಡ ಗೆದ್ದರೆ ಆಗ ಭಾರತ ತಂಡದ ಅಂಕ 4 ಆಗಲಿದ್ದು ಶ್ರೀಲಂಕಾ ಎರಡು ಪಂದ್ಯಗಳನ್ನು ಆಡಿ 2 ಅಂಕ ಮಾತ್ರವೇ ಹೊಂದಿರಲಿದೆ. ಅಂದರೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಎರಡು ತಂಡಗಳು ಕೂಡ ಎರಡು ಪಂದ್ಯಗಳ ಅಂತ್ಯದಲ್ಲಿ 2 ಅಂಕಗಳನ್ನು ಹೊಂದಿ ಸಮಸ್ಥಾನದಲ್ಲಿ ಇರಲಿದೆ. ಆದರೆ ಲಂಕಾದ ನೆಟ್‌ರನ್‌ರೇಟ್ ಪಾಕ್ ತಂಡಕ್ಕಿಂತ ಭಾರೀ ಹೆಚ್ಚಿರುವ ಕಾರಣ ಅದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿಯೇ ಮುಂದುವರಿಯಲಿದೆ. ಶ್ರೀಲಂಕಾ ತಂಡವನ್ನು ಮುಂದಿನ ಪಂದ್ಯದಲ್ಲಿ ಎದುರಿಸಿದಾಗ ಗೆದ್ದು ಫೈನಲ್‌ಗೆ ಪ್ರವೇಶಿಸುವ ಅವಕಾಶ ದೊರೆಯಲಿದೆ.

ಭಾರತ ಸೋತರೆ ಪಾಕ್‌ಗೆ ಕಷ್ಟ

ಆದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೆ ಭಾರತದ ಅಂಕ 2ರಲ್ಲಿಯೇ ಉಳಿದುಕೊಳ್ಳಲಿದೆ. ಶ್ರೀಲಂಕಾ 4 ಅಂಕಗಳನ್ನು ಪಡೆದು ಮೊದಲ ಸ್ಥಾನಕ್ಕೇರಲಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿ ತನ್ನ ಅಂಕವನ್ನು 4ಕ್ಕೆ ಏರಿಸಿಕೊಂಡರೂ ಕೂಡ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿಯಾಗಲಿರುವುದು ಬಾಂಗ್ಲಾದೇಶ. ಹಾಗಾಗಿ ಆ ಪಂದ್ಯದಲ್ಲಿ ಭಾರತದ ಸೋಲಲಿದೆ ಎನ್ನುವುದನ್ನು ಪಾಕಿಸ್ತಾನ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಭಾರತ ಶ್ರೀಲಂಕಾ ನಡುವಿನ ಸೆಣೆಸಾಟದಲ್ಲಿ ಭಾರತ ಗೆಲ್ಲಲಿ ಎಂದು ನಿರೀಕ್ಷಿಸುವುದು ಪಾಕಿಸ್ತಾನ ಬಯಸಲಿದೆ.

ಹೀಗಾಗಿ ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯ ಹಾಗೂ ಶ್ರೀಲಂಕಾ ಹಾಗೂ ಪಾಕಿಸ್ತಾನದ ವಿರುದ್ಧದ ಬಹಳ ನಿರ್ಣಾಯಕವಾಗಿರಲಿದೆ. ಇತ್ತ ಬಾಂಗ್ಲಾದೇಶ ತಂಡ ಈಗಾಗಲೇ ಎರಡು ಪಂದ್ಯಗಳನ್ನು ಸೋತಿರುವ ಕಾರಣ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆಯೇ ಆಗಿದೆ.

Story first published: Tuesday, September 12, 2023, 12:45 [IST]
Other articles published on Sep 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+