ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ಯಾರೆನ್ ಸ್ಯಮಿಗೆ ಪಾಕಿಸ್ತಾನ ಪೌರತ್ವ!

ಇಸ್ಲಮಾಬಾದ್, ಫೆಬ್ರವರಿ 22: ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ಯಾರೆನ್ ಸ್ಯಮಿ ಪಾಕಿಸ್ತಾನದ ಪೌರತ್ವ ಪಡೆಯುವುದರಲ್ಲಿದ್ದಾರೆ. ಮಾರ್ಚ್ 23ರಂದು ಪಾಕ್ ಅಧ್ಯಕ್ಷ ಆರಿಫ್ ಅಲ್ವಿ, ಸ್ಯಮಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ನಿಶಾನ್ ಇ ಪಾಕಿಸ್ತಾನ್' ಮತ್ತು ಗೌರವ ಪೌರತ್ವವನ್ನು ನೀಡಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಈ ವಿಚಾರವನ್ನು ಶನಿವಾರ (ಫೆಬ್ರವರಿ 22) ಬಹಿರಂಗಪಡಿಸಿದೆ.
ಫೆಬ್ರವರಿ 22ರಂದು ಪಿಸಿಬಿ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಬಗ್ಗೆ ಟ್ವೀಟ್ ಮಾಡಿದರು ಪಿಸಿಬಿ, 'ಕ್ರಿಕೆಟ್ ಕ್ಷೇತ್ರದಲ್ಲಿನ ಅಮೂಲ್ಯ ಕೊಡುಗೆಗಾಗಿ ಸ್ಯಮಿಗೆ ಪಾಕಿಸ್ತಾನದಲ್ಲಿ ಪೌರತ್ವ ನೀಡುತ್ತಿರುವುದನ್ನು ಪಿಸಿಬಿಯ ಮಾಧ್ಯಮ ವಿಭಾಗ ಘೋಷಿಸುತ್ತಿದೆ,' ಎಂದು ಬರೆದುಕೊಳ್ಳಲಾಗಿದೆ.
'ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಮಾರ್ಚ್ 23ರಂದು ಡ್ಯಾರೆನ್ ಸ್ಯಮಿಗೆ ಕ್ರಿಕೆಟ್ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಗೌರವ ಪೌರತ್ವವನ್ನು ನೀಡಲಿದ್ದಾರೆ,' ಎಂದು ಟ್ವೀಟ್‌ನ ಮತ್ತೊಂದು ಸಾಲಿನಲ್ಲಿ ವಿವರಿಸಲಾಗಿದೆ.
36ರ ಹರೆಯದ ಆಲ್ ರೌಂಡರ್ ಸ್ಯಮಿ, ಸದ್ಯ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಪೇಶ್ವರ್ ಝಲ್ಮಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ವೆಸ್ಟ್ ಇಂಡೀಸ್ ಪರ ಸ್ಯಮಿ, 38 ಟೆಸ್ಟ್ ಪಂದ್ಯಗಳಲ್ಲಿ 1323 ರನ್, 84 ವಿಕೆಟ್, 126 ಏಕದಿನ ಪಂದ್ಯಗಳಲ್ಲಿ 1871 ರನ್, 81 ವಿಕೆಟ್, 68 ಟಿ20ಐ ಪಂದ್ಯಗಳಲ್ಲಿ 587 ರನ್, 44 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications