ಬಾಂಗ್ಲಾ ವಿರುದ್ಧದ ಟಿ20ಗೆ ಪಾಕ್ ತಂಡ ಪ್ರಕಟ: ಹಫೀಜ್, ಮಲಿಕ್‌ಗೆ ಸ್ಥಾನ

ಇಸ್ಲಮಾಬಾದ್, ಜನವರಿ 16: ಬಾಂಗ್ಲಾದೇಶ ವಿರುದ್ಧದ ಟಿ20ಐ ಸರಣಿಗಾಗಿ ಪಾಕಿಸ್ತಾನ, 15 ಜನರ ತಂಡ ಪ್ರಕಟಿಸಿದೆ. ಪ್ರಕಟಿತ ತಂಡದಲ್ಲಿ ಮೊಹಮ್ಮದ್ ಹಫೀಜ್ ಮತ್ತು ಶೋಯೆಬ್ ಮಲ್ಲಿಕ್ ಸ್ಥಾನ ಪಡೆದುಕೊಂಡಿದ್ದಾರೆ. ವೇಗಿ ಶಾಹೀನ್ ಅಫ್ರಿದಿ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಹಫೀಜ್, ಮಲ್ಲಿಕ್, ಅಫ್ರಿದಿ ಜೊತೆಗೆ ಅನ್‌ಕ್ಯಾಪ್ಡ್ ಅಹ್ಸಾನ್ ಅಲಿ, ಅಮದ್ ಬಟ್, ಹ್ಯಾರಿಸ್ ರವೂಫ್ ಅವರನ್ನೂ ತಂಡದಲ್ಲಿ ಹೆಸರಿಸಲಾಗಿದೆ. ಬಾಂಗ್ಲಾ-ಪಾಕ್ 3 ಪಂದ್ಯಗಳ ಟಿ20 ಸರಣಿ, ಜನವರಿ 24, 25 ಮತ್ತು 27ರಂದು ಲಾಹೋರ್‌ನಲ್ಲಿ ನಡೆಯಲಿದೆ. ಟಿ20 ಬಳಿಕ ಇತ್ತಂಡಗಳ ಮಧ್ಯೆ ಒಂದು ಟೆಸ್ಟ್, ಒಂದು ಏಕದಿನ ಪಂದ್ಯ ನಡೆಯಲಿದೆ.
ಕಳೆದ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20ಗಾಗಿ ಪಾಕ್ ತಂಡ 16 ಜನರ ತಂಡ ಪ್ರಕಟಿಸಿತ್ತು. ಈ ಸರಣಿಯಲ್ಲಿ ಆಸ್ಟ್ರೇಲಿಯಾ 2-0ಯ ಗೆಲುವನ್ನಾಚರಿಸಿತ್ತು. ಬಾಂಗ್ಲಾ ವಿರುದ್ಧದ ಟಿ20ಗೆ ಆಯ್ಕೆಯಾಗದ ಇನ್ನಿತರ ಆಡಗಾರರೆಂದರೆ ಆಸಿಫ್ ಅಲಿ, ಫಖರ್ ಜಮಾನ್, ಹ್ಯಾರಿಸ್ ಸೊಹೈಲ್, ಇಮಾಮ್ ಉಲ್ ಹಕ್, ಮೊಹಮ್ಮದ್ ಅಮೀರ್ ಮತ್ತು ವಹಾಬ್ ರಿಯಾಜ್.
ಬಾಂಗ್ಲಾ ವಿರುದ್ಧದ ಟಿ20ಗೆ ಪಾಕ್ ತಂಡ: ಬಾಬರ್ ಅಜಮ್ (ನಾಯಕ), ಅಹ್ಸಾನ್ ಅಲಿ, ಅಮದ್ ಬಟ್, ಹ್ಯಾರಿಸ್ ರವೂಫ್, ಇಫ್ತಿಖರ್ ಅಹ್ಮದ್, ಇಮಾದ್ ವಾಸಿಮ್, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೂಸಾ ಖಾನ್, ಶದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಶೋಯೆಬ್ ಮಲ್ಲಿಕ್, ಉಸ್ಮಾನ್ ಕಾದಿರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications