Asia Cup 2022 : ತನ್ನದೇ ಪ್ರಮಾದಕ್ಕೆ ತಲೆ ಜಜ್ಜಿಕೊಂಡ ಪಾಕ್: ಭಾರತದ ಗೆಲುವಿಗೆ ಕಾರಣವಾಗಿದ್ದು ಈ 5 ಅಂಶಗಳು!

ಏಷ್ಯಾ ಕಪ್ 2022ರ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಭಾರತ ಹಾಗೂ ಪಾಕಿಸ್ತಾನ ತಮಡಗಳ ನಡುವಿನ ಕದನ ಅಭಿಮಾನಿಗಳು ಅದ್ಭುತ ಮನರಂಜನೆ ನೀಡಿದೆ. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಕಾರಣ ಅಂತಿಮ ಹಂತದವರೆಗೂ ರೋಚಕತೆ ಉಳಿಸಿಕೊಂಡಿದ್ದ ಪಂದ್ಯದಲ್ಲಿ ಭಾರತ ಅಂತಿಮ ಎರಡು ಎಸೆತಗಳು ಭಾಕಿಯಿರುವಂತೆ ಗೆದ್ದು ಬೀಗಿದೆ. ಈ ಮೂಲಕ ಭಾರತ ಕಳೆದ ವರ್ಷ ವಿಶ್ವಕಪ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿಂತಾಗಿದೆ.
ಇನ್ನು ಈ ಪಂದ್ಯದಲ್ಲಿ ಭಾರತದ ಪರವಾಗಿ ಆಲ್‌ರೌಂಡರ್ ಪ್ರದರ್ಶನ ನೀಡಿ ಪಂದ್ಯ ಗೆಲ್ಲುವಂತಾಗಲು ಪ್ರಮುಖ ಕಾರಣವಾಗಿದ್ದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಪಾಕಿಸ್ತಾನದ ವಿರುದ್ಧ ನೀಡಿದ ಅತ್ಯಂತ ಜವಾಬ್ಧಾರಿಯುತ ಪ್ರದರ್ಶನ ಭಾರತ ತಂಡವನ್ನು ಗೆಲ್ಲಿಸಿದೆ. ಆದರೆ ಹಾರ್ದಿಕ್ ಪಾಂಡ್ಯ ಮಾತ್ರವೇ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿಲ್ಲ. ಬೌಲಿಂಗ್‌ನಲ್ಲಿ ಮಾಡಿದ ಆ ಒಂದು ಪ್ರಮಾದ ಪಾಕಿಸ್ತಾನಕ್ಕೆ 19ನೇ ಓವರ್‌ನಲ್ಲಿ ದೊಡ್ಡ ಹಿನ್ನಡೆಯುಂಟು ಮಾಡಿತು. ಇನ್ನು ಪಾಕ್ ವಿರುದ್ಧದ ಈ ಸ್ಮರಣೀಯ ಗೆಲುವಿಗೆ ಕಾರಣವಾದ ಪ್ರಮುಖ ಐದು ಅಂಶಗಳನ್ನು ಇಲ್ಲಿ ನೋಡೋಣ.. ಮುಂದೆ ಓದಿ..

ಟಾಸ್ ಗೆಲುವು
ಭಾರತ ಟಾಸ್ ಗೆದ್ದುಕೊಂಡಿದ್ದು ಈ ಪಂದ್ಯದಲ್ಲಿ ಮೊದಲ ಹಂತದ ಮೇಲುಗೈಗೆ ಕಾರಣವಾಯಿತು. ಭಾರತ ಟಾಸ್ ಗೆದ್ದ ಕಾರಣದಿಂದಾಗಿ ಮೊದಲಿಗೆ ಬೌಲಿಂಗ್ ಮಾಡಲು ಹೆಚ್ಚು ಅನುಕೂಲವಾಯಿತು. ಅದರಲ್ಲೂ ವೇಗದ ಬೌಲರ್‌ಗಳಿಗೆ ಆರಂಭದಲ್ಲಿ ಉತ್ತಮ ನೆರವು ದೊರೆತ ಕಾರಣ ಅದನ್ನು ಭಾರತೀಯ ವೇಗಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡರು. ಇದರ ಪರಿಣಾಮವಾಗಿ ಪಾಕಿಸ್ತಾನ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತು. ಅದರಲ್ಲೂ ನಾಯಕ ಬಾಬರ್ ಅಜಂ, ಫಾಕರ್ ಅಜಂ ಅವರಂತಾ ಆಟಗಾರರು ಹೆಚ್ಚು ರನ್‌ಗಳ ಕೊಡುಗೆ ನೀಡಲು ಸಾಧ್ಯವಾಗದಿರುವುದು ತಂಡವನ್ನು ಆರಂಭದಲ್ಲಿಯೇ ಒತ್ತಡಕ್ಕೆ ಸಿಲುಕಿಸಿತು. ಇದರ ಕಾರಣದಿಂದಾಗಿಯೇ ಪಾಕ್ ದಾಮಡಿಗರು ಹೆಚ್ಚು ಮೊತ್ತವನ್ನು ಗಳಿಸಲು ವಿಫಲವಾಗಿ ಬೇಗನೆ ವಿಕೆಟ್ ಒಪ್ಪಿಸಿದರು.

ಬೌಲಿಂಗ್‌ನಲ್ಲಿ ಭುವಿ ಅಬ್ಬರದಾಟ
ಪಾಕಿಸ್ತಾನದ ವಿರುದ್ಧದ ಈ ಪಂದ್ಯದಲ್ಲಿ ಭಾರತದ ಪರವಾಗಿ ಭುವೇಶ್ವರ್ ಕುಮಾರ್ ತಮ್ಮ ಅನುಭವವನ್ನು ಅದ್ಭುತವಾಗಿ ಬಳಸಿಕೊಂಡರು. ಆರಂಭದಲ್ಲಿಯೇ ಬಾಬರ್ ಅಜಂ ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮೇಲುಗೈ ಒದಗಿಸಿದ್ದರು. ನಂತರ ಆಸಿಫ್ ಅಲಿಗೆ ಫೆವಿಲಿಯನ್ ಹಾದಿ ತೋರಿಸಿದ ಭುವಿ ನಂತರ ಶದಬ್ ಖಾನ್ ಹಾಗೂ ನಸೀಮ್ ಶಾಅವರನ್ನು ಸತತ ಎರಡು ಎಸೆತಗಳಲ್ಲಿ ಫೆವಿಲಿಯನ್‌ಗೆ ಅಟ್ಟಿದರು. ಈ ಮೂಲಕ ನಾಲ್ಕು ಓವರ್‌ಗಳ ತಮ್ಮ ಕೋಟಾದಲ್ಲಿ ಭುವನೇಶ್ವರ್ ಕುಮಾರ್ ಪಾಕಿಸ್ತಾನದ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಅವರು ನೀಡಿದ್ದು ಕೇವಲ 26 ರನ್. ಇದು ಪಾಕಿಸ್ತಾನದ ವಿರುದ್ಧ ಭಾರತೀಯ ಬೌಲರ್‌ನ ಅತ್ಯುತ್ತಮ ಸಾಧನೆಯೂ ಹೌದು.

3. ಕೊಹ್ಲಿ, ಜಡೇಜಾ ಸೂಪರ್ ಬ್ಯಾಟಿಂಗ್
ಮಾಜಿ ನಾಯಕ ವಿರಾಟ್ ಕೊಹ್ಲಿ ಸುಮಾರು ಒಂದು ತಿಂಗಳ ನಂತರ ಕಮ್‌ಬ್ಯಾಕ್ ಮಾಡಿ ಪಾಕ್ ವಿರುದ್ಧ ಉತ್ತಮ ಮೊತ್ತದ ಕೊಡುಗೆ ನೀಡಿದ್ದಾರೆ. ಆರಂಭದಲ್ಲಿ ಸಿಕ್ಕ ಜೀವದಾನವನ್ನು ಕೊಹ್ಲಿ ಉತ್ತಮವಾಗಿ ಬಳಸಿಕೊಂಡರು. ಇಲ್ಲವಾಗಿದ್ದರೆ ಆ ಹಂತದಲ್ಲಿಯೇ ಭಾರತ ಹೆಚ್ಚಿನ ಒತ್ತಡಕ್ಕೆ ಸಿಲುಕುವ ಅಪಾಯವಿತ್ತು. ಆದರೆ ಮತ್ತೊಂದು ವಿಕೆಟ್ ಶೀಘ್ರವಾಗಿ ಕಳೆದುಕೊಳ್ಳದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಭಾರತದ ಇನ್ನಿಂಗ್ಸ್‌ಗೆ ಉತ್ತಮ ಅಡಿಪಾಯ ದೊರೆಯಿತು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರವೀಂದ್ರ ಜಡೇಜಾ ಕೂಡ ಈ ಹಂತದಲ್ಲಿ ಅದ್ಭುತ ಹೋರಾಟವನ್ನು ಪ್ರದರ್ಶಿಸಿ ಪಾಕಿಸ್ತಾನದ ಬೌಲರ್‌ಗಳಿಗೆ ಸವಾಲಾದರು. ಈ ಮೂಲಕ ಅಗ್ರ ಕ್ರಮಾಂಕದಲ್ಲಿ ನಡೆಸಿದ ಪ್ರಯೋಗಕ್ಕೂ ಫಲ ದೊರೆತಿದೆ. ಜಡೇಜಾ ಬ್ಯಾಟ್‌ನಿಂದಲೂ ಭಾರತಕ್ಕೆ ಅಮೂಲ್ಯ ರನ್ ಹರಿದು ಬಂದಿರುವುದು ತಮಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 35 ರನ್‌ಗಳನ್ನು ಗಳಿಸಿದರೆ ಜಡೇಜಾ 29 ಎಸೆತಗಳಲ್ಲಿ 35 ರನ್‌ಗಳಿಸಿದ್ದಾರೆ.

4. ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಟ
ಈ ಪಂದ್ಯದಲ್ಲಿ ಭಾರತ ಗೆಲುವಿನಲ್ಲಿ ಅತ್ಯಂತ ದೊಡ್ಡ ಪಾತ್ರವಹಿಸಿದ್ದು ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡರ್ ಪ್ರದರ್ಶನ. ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಹಾರ್ದಿಕ್ ಪಾಕಿಸ್ತಾನದ ಪ್ರಮುಖ ಮೂರು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ನಂತರ ಒತ್ತಡದ ಸಂದರ್ಭದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಕೇವಲ 17 ಎಸೆತಗಳಲ್ಲಿ 33 ರನ್‌ಗಳನ್ನು ಗಳಿಸುವ ಮೂಲಕ ಭಾರತ ತಂಡದ ಗೆಲುವಿಗೆ ಕಾರಣವಾದರು. ಅಂತಿಮ ಓವರ್‌ನ ನಾಲ್ಕನೇ ಎಸೆತವವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಭಾರತ ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.

5. ಪಾಕ್‌ಗೆ ದುಬಾರಿಯಾದ ಸ್ಲೋ ಓವರ್‌ರೇಟ್!
ಇನ್ನು ಈ ಪಂದ್ಯದಲ್ಲಿ ಭಾರತಕ್ಕೆ ಮೇಲುಗೈ ದೊರೆಯಲು ಕಾರಣವಾದ ಮತ್ತೊಂದು ಪ್ರಮುಖ ಸಂಗತಿಯೆಂದರೆ ಪಾಕಿಸ್ತಾನ ಮಾಡಿದ ಆ ಒಂದು ಪ್ರಮುಖ ಎಡವಟ್ಟು. ನಿಧಾನಗತಿಯ ಬೌಲಿಂಗ್ ನಡೆಸಿದರೆ ಐಸಿಸಿಯ ಹೊಸ ನಿಯಮಗಳ ಪ್ರಕಾರ ವೃತ್ತದ ಹೊರಗೆ ನಾಲ್ಕು ಫೀಲ್ಡರ್‌ಗಳನ್ನು ಮಾತ್ರವೇ ನಿಲ್ಲಿಸಬೇಕಾಗುತ್ತದೆ. ಈ ಪಂದ್ಯದಲ್ಲಿ ಪಾಕಿಸ್ತಾನ ನಿಧಾನಗತಿಯ ಬೌಲಿಂಗ್ ನಡೆಸಿದ ಕಾರಣದಿಂದಾಗಿ ಇದಕ್ಕೆ ಬೆಲೆ ತೆರಬೇಕಾಯಿತು. ವೃತ್ತದ ಹೊರಗೆ ಕೇವಲ ನಾಲ್ವರು ಫೀಲ್ಡರ್‌ಗಳಿದ್ದ ಕಾರಣ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಒಂದು ಹಂತದ ಲಾಭವೂ ದೊರೆಯಿತು. ಈ ಫೀಲ್ಡಿಂಗ್ ನಿಯಮವನ್ನು ಉತ್ತಮವಾಗಿ ಬಳಸಿಕೊಂಡ ಕಾರಣದಿಂದಾಗಿ ಹ್ಯಾರಿಸ್ ರೌಫ್ ಎಸೆದ 19ನೇ ಓವರ್‌ನಲ್ಲಿ ಹಾರ್ದಿಕ್ ಪಾಮಡ್ಯ ಮೂರು ಬೌಂಡರಿಗಳನ್ನು ಬಾರಿಸಿದರು. ಇದು ಅಂತಿಮ ಓವರ್‌ನಲ್ಲಿ ಭಾರತದ ಒತ್ತಡವನ್ನು ಕಡಿಮೆ ಮಾಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications