ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಪಾಕಿಸ್ತಾನ ಆಟಗಾರ ಬಾಬರ್ ಅಝಮ್

ನವದೆಹಲಿ, ನವೆಂಬರ್ 5: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರ್ಮಿಸಿದ್ದ ವೇಗದ 1,000 ರನ್ ದಾಖಲೆಯನ್ನು ಪಾಕಿಸ್ತಾನ ಆಟಗಾರ ಬಾಬರ್ ಅಝಮ್ ಸರಿಗಟ್ಟಿದ್ದಾರೆ. ಭಾನುವಾರ (ನವೆಂಬರ್ 4) ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಈ ಸಾಧನೆ ಮೆರೆದರು. ಸದ್ಯ ಐಸಿಸಿ ಟಿ20 ರ್ಯಾಂಕಿಂಗ್ ನಲ್ಲಿ ಬಾಬರ್ ನಂ.1 ಸ್ಥಾನದಲ್ಲಿದ್ದಾರೆ.
ದುಬೈಯ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಾಕಿಸ್ತಾನ vs ನ್ಯೂಜಿಲ್ಯಾಂಡ್ 3ನೇ ಟಿ20 ಪಂದ್ಯದಲ್ಲಿ ಬಾಬರ್ ಅಝಮ್ 58 ಎಸೆತಗಳಿಗೆ 79 ರನ್ ಬಾರಿಸುವ ಮೂಲಕ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದರು. ಈ ಪಂದ್ಯದಲ್ಲಿ ಪಾಕ್ 47 ರನ್ ಗೆಲುವನ್ನಾಚರಿಸಿತು.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನ 27 ಇನ್ನಿಂಗ್ಸ್ ಗಳಲ್ಲಿ 1,000 ರನ್ ಸಾಧನೆ ಮಾಡಿದ್ದರೆ, ಬಾಬರ್ 26 ಇನ್ನಿಂಗ್ಸ್ ಗಳಲ್ಲೇ 1,000 ರನ್ ಪೂರೈಸಿದ ಮೈಲಿಗಲ್ಲು ಸ್ಥಾಪಿಸಿದರು. ಈ ಯಾದಿಯಲ್ಲಿ ಆಸ್ಟ್ರೇಲಿಯಾ ಆಟಗಾರ ಆ್ಯರನ್ ಫಿಂಚ್ (29 ಇನ್ನಿಂಗ್ಸ್), ಸೌತ್ ಆಫ್ರಿಕಾ ಆಟಗಾರ ಫಾ ಡು ಪ್ಲೆಸಿಸ್ (32 ಇನ್ನಿಂಗ್ಸ್) ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನದಲ್ಲಿದ್ದಾರೆ.
ಇದೇ ಪಂದ್ಯದಲ್ಲಿ ಪಾಕ್ ಮತ್ತೊಬ್ಬ ಆಟಗಾರ ಮೊಹಮ್ಮದ್ ಹಫೀಜ್ 34 ಎಸೆತಗಳಿಗೆ 53 ರನ್ ಬಾರಿಸಿದರು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕ್ 20 ಓವರ್ ಗೆ 3 ವಿಕೆಟ್ ಕಳೆದು 166 ರನ್ ಪೇರಿಸಿತ್ತು. ನ್ಯೂಜಿಲ್ಯಾಂಡ್ 16.5 ಓವರ್ ಗೆ ಎಲ್ಲಾ ವಿಕೆಟ್ ಕಳೆದು 119 ರನ್ ಪೇರಿಸಿ ಪಾಕ್ ಗೆ ತಲೆ ಬಾಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications