For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ವೈಟ್‌ವಾಶ್: ಹೀನಾಯ ಸೋಲನ್ನು ಸಮರ್ಥಿಸಲು ಪಾಕಿಸ್ತಾನಕ್ಕೆ ಕಾರಣಗಳೇ ಇಲ್ಲ!

Pakistans failure to win a single ODI match against England: raised many questions about the team

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಕೂಡ ಪಾಕಿಸ್ತಾನ ಕಳೆದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ ವೈಟ್‌ವಾಶ್ ಅವಮಾನಕ್ಕೆ ತುತ್ತಾಗಿದೆ. ಇಂಗ್ಲೆಂಡ್‌ ತವರು ನೆಲದಲ್ಲಿ ಈ ಪಂದ್ಯ ನಡೆಯುತ್ತಿದೆಯಾದರೂ ಇಲ್ಲಿ ಗಮನಿಸಬೇಕಾದ ಅಂಶ ಇಂಗ್ಲೆಂಡ್ ತನ್ನ ಪ್ರಥಮ ಆಯ್ಕೆಯ ತಂಡವನ್ನು ಆಡಲು ಇಳಿಸಿಲ್ಲ. ಹಾಗಿದ್ದರೂ ಪಾಕಿಸ್ತಾನ ಸರಣಿಯನ್ನು ಆಘಾತಕಾರಿ ರೀತಿಯಲ್ಲಿ ಸೋಲು ಕಂಡಿದ್ದು ಇಂಗ್ಲೆಂಡ್ ತಂಡದ ಬಲಿಷ್ಠ ಸಾಮರ್ಥ್ಯ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ದೌರ್ಬಲ್ಯತೆಯನ್ನು ಎತ್ತಿ ತೋರಿಸಿದೆ.

ಪಾಕಿಸ್ತಾನ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ಕೂಡ ಇಂಗ್ಲೆಂಡ್ ಭರ್ಜರಿಯಾಗಿ ಗೆದ್ದು ಬೀಗಿದೆ. ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲವಾಗಿದ್ದ ಪಾಕಿಸ್ತಾನ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿತ್ತು. ಪಾಕ್ ನಾಯಕ ಬಾಬರ್ ಅಜಂ 158 ರನ್‌ ಹಾಗೂ ರಿಜ್ವಾನ್ 74 ರನ್‌ ಮತ್ತು ಇಮಾಮ್ ಉಲ್ ಹಕ್ 56 ರನ್‌ಗಳ ಕೊಡುಗೆಯಿಂದಾಗಿ ಪಾಕಿಸ್ತಾನ 331 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತ್ತು.

332 ರನ್‌ಗಳ ಈ ಬೃಹತ್ ಮೊತ್ತವನ್ನು ಆರಂಭಿಕ ಆಘಾತದ ಮಧ್ಯೆಯೂ ಸಮರ್ಥವಾಗಿ ಬೆನ್ನಟ್ಟಿ ಬೀಗಿತ್ತು ಇಂಗ್ಲೆಂಡ್. ಜೇಮ್ಸ್ ವಿನ್ಸ್ 102 ರನ್‌ಗಳ ಕೊಡುಗೆ ಹಾಗೂ ಲೂಯೀಸ್ ಗ್ರೇಗರಿ ನೀಡಿದ 77 ರನ್‌ಗಳ ಆಟ ಇಂಗ್ಲೆಂಡ್ ತಂಡವನ್ನು ಗೆಲ್ಲುವಂತೆ ಮಾಡಿತ್ತು. ಈ ದೊಡ್ಡ ಮೊತ್ತವನ್ನು ಇಂಗ್ಲೆಂಡ್ ಇನ್ನೂ ಎರಡು ಓವರ್‌ಗಳು ಬಾಕಿಯಿರುವಂತೆಯೇ ಮೂರು ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತ್ತು. ಈ ಮೂಲಕ ಮೂರು ಪಂದ್ಯಗಳಲ್ಲಿ ಕೂಡ ಇಂಗ್ಲೆಂಡ್ ಗೆದ್ದು ಬೀಗಿತ್ತು.

ಈ ಸರಣಿ ಸೋಲಿನಿಂದಾಗಿ ಪಾಕಿಸ್ತಾನ ತಂಡದ ಬಗ್ಗೆ ಅಲ್ಲಿನ ಮಾಜಿ ಆಟಗಾರರೇ ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದಾರೆ. ಹಿಂದೆಂದಿಗಿಂತಲೂ ಪಾಕಿಸ್ತಾನ ಅತ್ಯಂತ ದುರ್ಬಲ ತಂಡವಾಗಿದೆ ಎಂಬ ಟೀಕೆಯನ್ನು ಸ್ವತಃ ಪಾಕ್ ಕ್ರಿಕೆಟ್ ಪ್ರೇಮಿಗಳೇ ವ್ಯಕ್ತಪಡಿಸುತ್ತಿದ್ದಾರೆ. ಎಂಥಾ ಎದುರಾಳಿಯ ವಿರುದ್ಧವೂ ಸಾಕಷ್ಟು ಪ್ರತಿರೋಧವನ್ನು ಒಡ್ಡುತ್ತಿದ್ದ ಪಾಕಿಸ್ತಾನ ತಂಡ ಇಂಗ್ಲೆಂಡ್‌ನ ದ್ವಿತೀಯ ದರ್ಜೆಯ ತಂಡದ ವಿರುದ್ಧವೂ ಕನಿಷ್ಠ ಒಂದೂ ಗೆಲುವು ಸಾಧಿಸಲು ಸಾಧ್ಯವಾಗದಿರುವ ಬಗ್ಗೆ ಈಗ ಸಾಕಷ್ಟ ವಿಮರ್ಶೆಗಳು ನಡೆಯುತ್ತಿದೆ.

ಪಾಕಿಸ್ತಾನ ಸರಣಿಗೆ ಆರಂಭಕ್ಕೆ ಇನ್ನೇನು ಎರಡು ದಿನಗಳಿರುವಾಗ ಇಂಗ್ಲೆಂಡ್ ತಂಡದಲ್ಲಿ ಕೊರೊನಾವೈರಸ್ ಸ್ಪೋಟವಾಗಿತ್ತು. ಮೂವರು ಆಟಗಾರರ ಸಹಿತ ಒಟ್ಟು ಏಳು ಜನರು ಕೊರೊನಾವೈರಸ್‌ಗೆ ತುತ್ತಾಗಿದ್ದರು. ಹಾಗಿದ್ದರೂ ಇಂಗ್ಲೆಂಡ್ ಈ ಸರಣಿಯಲ್ಲಿ ಮೊದಲಿಗೆ ಆಯ್ಕೆಯಾಗದೇ ಇದ್ದ ಬೆನ್ ಸ್ಟೋಕ್ಸ್ ನೇತೃತ್ವದ ಹೊಸ ತಂಡವನ್ನು ಪಾಕ್ ವಿರುದ್ಧ ಕಣಕ್ಕಿಳಿಸಿತ್ತು. ಈ ಪ್ರಯೋಗದಲ್ಲಿ ಇಂಗ್ಲೆಂಡ್ ಭರ್ಜರಿಯಾಗಿ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್ ತನ್ನಲ್ಲಿರುವ ಯುವ ಕ್ರಿಕೆಟ್ ಸಂಪನ್ಮೂಲದ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದೆ.

Story first published: Wednesday, July 14, 2021, 15:17 [IST]
Other articles published on Jul 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+