PSL 2023: ನಿಮ್ಮ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆಯಬೇಕು: ಬಾಬರ್ ಬಳಿ ಆಸೆ ಹೇಳಿಕೊಂಡ ಹ್ಯಾರಿಸ್ ರೌಫ್

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಕಿಂಗ್ ಕೊಹ್ಲಿಯ ವಿಕೆಟ್ ಪಡೆಯುವ ಆಸೆ ವ್ಯಕ್ತಪಡಿಸಿದ್ದಾರೆ. 2022ರ ಟಿ20 ವಿಶ್ವಕಪ್ ಪಂದ್ಯದಲ್ಲಿ ರೌಫ್ ಬೌಲಿಂಗ್‌ನಲ್ಲಿ ಕೊಹ್ಲಿ ಎರಡು ಸಿಕ್ಸರ್ ಸಿಡಿಸಿ ಪಾಕಿಸ್ತಾನ ತಂಡಕ್ಕೆ ಮಾರಕವಾಗಿದ್ದರು.
ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಸದ್ಯ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್ ಗಳು ಎನಿಸಿಕೊಂಡಿದ್ದಾರೆ. ಯಾವುದೇ ಬೌಲರ್ ಆದರು ಇವರಿಬ್ಬರ ವಿಕೆಟ್ ಪಡೆಯುವುದನ್ನು ದೊಡ್ಡ ಸಾಧನೆ ಎಂದು ಭಾವಿಸುತ್ತಾರೆ. ಇಂತಹದ್ದೇ ಆಸೆಯನ್ನು ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ವ್ಯಕ್ತಪಡಿಸಿದ್ದಾರೆ.
ಹ್ಯಾರಿಸ್ ರೌಫ್‌ಗೆ ವಿರಾಟ್ ಕೊಹ್ಲಿ ಮಾತ್ರವಲ್ಲ ಪಾಕಿಸ್ತಾನ ತಂಡದ ನಾಯಕ ಬಾಬರ್ ವಿಕೆಟ್ ಪಡೆಯಬೇಕೆನ್ನುವ ಆಸೆ ಕೂಡ ಇದೆಯಂತೆ. ಸದ್ಯ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಹ್ಯಾರಿಸ್ ರೌಫ್ ಲಾಹೋರ್ ಖಲಂದರ್ಸ್ ಪರವಾಗಿ ಆಡುತ್ತಿದ್ದು, ಬಾಬರ್ ಅಜಂ ಇಸ್ಲಾಮಾಬಾದ್ ಯುನೈಟೆಡ್ ತಂಡದ ನಾಯಕರಾಗಿದ್ದಾರೆ.
ಪಿಎಸ್‌ಎಲ್ ಪಂದ್ಯದ ವೇಳೆ ಹ್ಯಾರಿಸ್ ರೌಫ್ ಮತ್ತು ಬಾಬರ್ ಅಜಂ ನಡುವೆ ನಡೆದ ಸಂಭಾಷಣೆಯ ವಿಡಿಯೋವನ್ನು ಲಾಹೋರ್ ಖಲಂದರ್ಸ್ ಪೋಸ್ಟ್ ಮಾಡಿದೆ. ಹ್ಯಾರಿಸ್ ರೌಫ್ ಬಾಬರ್ ಜೊತೆ ತಮಾಶೆಯಾಗಿ ಮಾತನಾಡುವುದನ್ನು ನೋಡಬಹುದಾಗಿದೆ.
ತನ್ನ ಆಸೆಯನ್ನು ವ್ಯಕ್ತಪಡಿಸಿದ ಹ್ಯಾರಿಸ್ ರೌಫ್
"ಏನೇ ಆಗಲಿ ನಾನು ನಿಮ್ಮ ವಿಕೆಟ್ ಪಡೆಯಬೇಕಾಗಿದೆ. ನೀವು ಮತ್ತು ಕೊಹ್ಲಿ ಮಾತ್ರ ನನ್ನ ಬೌಲಿಂಗ್‌ನಲ್ಲಿ ಔಟ್ ಆಗಿಲ್ಲ. ವಿಲಿಯಮ್ಸನ್ ಕೂಡ ಎರಡು ಬಾರಿ ಔಟ್ ಆಗುವುದರಿಂದ ತಪ್ಪಿಸಿಕೊಂಡಿದ್ದಾರೆ. ಮೂರು-ನಾಲ್ಕು ಆಟಗಾರರು ನನ್ನ ಮನಸ್ಸಿನಲ್ಲಿದ್ದಾರೆ. ಅವರ ವಿಕೆಟ್ ಪಡೆಯುವುದು ನನ್ನ ಗುರಿಯಾಗಿದೆ" ಎಂದು ಹೇಳಿದರು.
ನೀವು ಈಗಾಗಲೇ ಅಭ್ಯಾಸದ ಸಂದರ್ಭಗಳಲ್ಲಿ ನನ್ನ ವಿಕೆಟ್ ಪಡೆದುಕೊಂಡಿದ್ದೀರಾ. ಅದನ್ನು ಏಕೆ ಪರಿಗಣಿಸಬಾರದು? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರೌಫ್, "ಪಂದ್ಯದಲ್ಲಿ ನಿಮ್ಮ ವಿಕೆಟ್ ಪಡೆಯಬೇಕು" ಎಂದು ಹೇಳಿದರು. ಇದಕ್ಕೆ ಉತ್ತರವಾಗಿ ಬಾಬರ್, "ಅಲ್ಲಾಹನು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ" ಎಂದು ಹೇಳಿದರು.

ಏಷ್ಯಾಕಪ್, ವಿಶ್ವಕಪ್‌ನಲ್ಲಿ ಮುಖಾಮುಖಿ
ಭಾರತ ಮತ್ತು ಪಾಕಿಸ್ತಾನ ತಂಡಗಳು 2023ರಲ್ಲಿ ಕನಿಷ್ಠ ಎರಡು ಬಾರಿ ಮುಖಾಮುಖಿಯಾಗುವುದು ಖಚಿತವಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಏಷ್ಯಾಕಪ್ ನಡೆಯಲಿದ್ದು, ಅಕ್ಟೋಬರ್ ನವೆಂಬರ್ ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಎರಡೂ ತಂಡಗಳು ಈ ಪ್ರಮುಖ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ, ಈ ಸ್ಟಾರ್ ಆಟಗಾರರ ಪ್ರದರ್ಶನ ಮುಖ್ಯವಾಗಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications