ಟಿ20ಐನಲ್ಲಿ ದಾಖಲೆಯ ಶತಕ ಚಚ್ಚಿದ ಪಾಕ್‌ನ ಮೊಹಮ್ಮದ್ ರಿಝ್ವಾನ್

ಲಾಹೋರ್: ಪಾಕಿಸ್ತಾನ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಲಾಹೋರ್‌ನ ಗದಾಫಿ ಸ್ಟೇಡಿಯಂನಲ್ಲಿ ಫೆಬ್ರವರಿ 11ರ ಗುರುವಾರ ಮೊದಲನೇ ಟಿ20ಐ ಪಂದ್ಯ ಆಡಿತ್ತು. ಮೂರು ಪಂದ್ಯಗಳ ಟಿ20 ಸರಣಿಯ ಆರಂಭಿಕ ಪಂದ್ಯವಿದು. ಈ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಸ್ಪೋಟಕ ಶತಕ ಬಾರಿಸಿದ್ದಾರೆ. ರಿಝ್ವಾನ್ ಅಜೇಯ ಆಟದ ನೆರವಿನಿಂದ ಪಂದ್ಯದಲ್ಲಿ ಪಾಕಿಸ್ತಾನ 3 ರನ್‌ಗಳ ರೋಚಕ ಜಯ ಗಳಿಸಿದೆ.
ಈ ಪಂದ್ಯದಲ್ಲಿ ಮೊಹಮ್ಮದ್ ರಿಝ್ವಾನ್ ಕೇವಲ 64 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸಿದ್ದಾರೆ. 6 ಫೋರ್ಸ್, 7 ಸಿಕ್ಸರ್‌ಗಳು ರಿಜ್ವಾನ್ ಬ್ಯಾಟ್‌ನಿಂದ ಸಿಡಿವೆ. ಪಂದ್ಯದಲ್ಲಿ ರಿಝ್ವಾನ್ ಒಬ್ಬರೇ ಪಾಕ್ ಪರ ಹೋರಾಡಿದ್ದು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಪಾಕ್ 20 ಓವರ್‌ಗೆ 6 ವಿಕೆಟ್ ಕಳೆದು 169 ರನ್ ಬಾರಿಸಿದ್ದರೆ, ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗೆ 6 ವಿಕೆಟ್ ಕಳೆದು 166 ರನ್ ಬಾರಿಸಿ ಶರಣಾಗಿದೆ.

ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳು
(ಟಿ20ಐನಲ್ಲಿ ಪಾಕಿಸ್ತಾನ ತಂಡದ ಪರ ಅಜೇಯರಾಗಿ ಅತೀ ಹೆಚ್ಚು ರನ್ ಗಳಿಸಿದ ಟಾಪ್ 3 ಬ್ಯಾಟ್ಸ್‌ಮನ್‌ಗಳು)
* ಅಹ್ಮದ್ ಶೆಹಝಾದ್, ಅಜೇಯ 111 ರನ್, ಬಾಂಗ್ಲಾದೇಶ ವಿರುದ್ಧ, ಧಾಕಾ, 2014
* ಮೊಹಮ್ಮದ್ ರಿಝ್ವಾನ್, ಅಜೇಯ 104 ರನ್, ದಕ್ಷಿಣ ಆಫ್ರಿಕಾ ವಿರುದ್ಧ, ಲಾಹೋರ್, 2021
* ಮೊಹಮ್ಮದ್ ಹಫೀಝ್, ಅಜೇಯ 99 ರನ್, ನ್ಯೂಜಿಲೆಂಡ್ ವಿರುದ್ಧ, ಹ್ಯಾಮಿಲ್ಟನ್, 2020

ಟಿ20ಐನಲ್ಲಿ ಶತಕ ಚಚ್ಚಿದ ಕೀಪರ್‌ಗಳು
(ಟಿ20ಐ ಕ್ರಿಕೆಟ್ ಮಾದರಿಯಲ್ಲಿ ಶತಕ ಚಚ್ಚಿದ ಕೀಪರ್‌ಗಳ ಪಟ್ಟಿ)
* ಬ್ರೆಂಡನ್ ಮೆಕಲಮ್, ನ್ಯೂಜಿಲೆಂಡ್, 123 ರನ್, ಬಾಂಗ್ಲಾದೇಶ ವಿರುದ್ಧ, ಪಲ್ಲೆಕೆಲೆ, 2012
* ಮೊಹಮ್ಮದ್ ಶಹಝಾದ್, ಅಫ್ಘಾನಿಸ್ತಾನ, 118* ರನ್, ಜಿಂಬಾಬ್ವೆ ವಿರುದ್ಧ, ಶಾರ್ಜಾ, 2016
* ಮೊರ್ನೆ ವ್ಯಾನ್ ವೈಕ್, ದಕ್ಷಿಣ ಆಫ್ರಿಕಾ, 114* ರನ್, ವೆಸ್ಟ್ ಇಂಡೀಸ್ ವಿರುದ್ಧ, ಡರ್ಬನ್, 2015
* ಎಲ್‌ಎ ಡಂಬರ್, ಸರ್ಬಿಯಾ, 104* ರನ್, ಬಲ್ಗೇರಿಯಾ ವಿರುದ್ಧ, ಕೋರ್ಫು, 2019
* ಮೊಹಮ್ಮದ್ ರಿಝ್ವಾನ್, ಪಾಕಿಸ್ತಾನ, 104* ರನ್, ದಕ್ಷಿಣ ಆಫ್ರಿಕಾ ವಿರುದ್ಧ, 2021

ಟಿ20ಐನಲ್ಲಿ ಅತ್ಯಧಿಕ ಶೇ. ಬ್ಯಾಟಿಂಗ್
(ಟಿ20ಐ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಇನ್ನಿಂಗ್ಸ್ ಒಂದರಲ್ಲಿ ಅತ್ಯಧಿಕ ಬ್ಯಾಟಿಂಗ್ ಶೇ. ತೋರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ)
* ಮೊಹಮ್ಮದ್ ರಿಝ್ವಾನ್, 104* ರನ್, 169/6 ಟೋಟಲ್, 61.54 %, ದಕ್ಷಿಣ ಆಫ್ರಿಕಾ ವಿರುದ್ಧ, ಲಾಹೋರ್, 2021
* ಮೊಹಮ್ಮದ್ ಹಫೀಝ್, 99* ರನ್, 163/6 ಟೋಟಲ್, 60.73 %, ನ್ಯೂಜಿಲೆಂಡ್ ವಿರುದ್ಧ, ಹ್ಯಾಮಿಲ್ಟನ್, 2020
* ಅಹ್ಮದ್ ಶಹಝಾದ್, 111* ರನ್, 190/5 ಟೋಟಲ್, 58.42 %, ಬಾಂಗ್ಲಾದೇಶ ವಿರುದ್ಧ, ಧಾಕಾ, 2014
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications