ವಿಶ್ವಕಪ್‌ಗೆ ಪಾಕಿಸ್ತಾನದ ಈ ಲೆಗ್ ಸ್ಪಿನ್ನರ್ ಸಂಪೂರ್ಣ ಫಿಟ್

ಲಾಹೋರ್, ಮೇ 15: ಅನಾರೋಗ್ಯದ ಸಮಸ್ಯೆ ಎದುರಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಲೆಗ್ ಸ್ಪಿನ್ನರ್ ಶದಾಬ್ ಖಾನ್, ಮೇ 3ರಂದು ಆರಂಭವಾಗಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಡಲು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
ಪ್ರಸಕ್ತ ಚಾಲ್ತಿಯಲ್ಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುವ ಮುನ್ನ ವೈರಲ್ ಫೀವರ್‌ಗೆ ತುತ್ತಾಗಿದ್ದ ಶದಾಬ್, ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿಯುವಂತಾಗಿತ್ತು.
ವಿಶ್ವಕಪ್‌ನಲ್ಲಿ ಭಾರತದ ಭವಿಷ್ಯ ನುಡಿದ ಮೊಹಮ್ಮದ್ ಅಝರುದ್ದೀನ್!
"ಇತ್ತೀಚಿನ ರಕ್ತದ ಮಾದರಿ ಪರೀಕ್ಷೆಯಲ್ಲಿ ಶದಾಬ್ ಅವರಲ್ಲಿ ಯಾವುದೇ ವೈರಲ್ ಸೋಂಕಿನ ಗುಣಲಕ್ಷ್ಣಗಳು ಕಂಡುಬಂದಿಲ್ಲ,'' ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. ಶದಾಬ್ ಅವರ ರಕ್ತದಲ್ಲಿ ಹೆಪಟೈಟಿಸ್ 'ಸಿ' ವೈರಸ್ ಕಂಡುಬಂದಿತ್ತು.
"ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದು ಪಾಕಿಸ್ತಾನ ತಂಡವನ್ನು ಆಡುವುದು ನೋಡುತ್ತಾ ಕುಳಿತುಕೊಳ್ಳುವುದು ಕಷ್ಟ. ಒಬ್ಬ ವೃತ್ತಿಪರ ಕ್ರಿಕೆಟ್ ಆಟಗಾರನಾಗಿ, ತಂಡದ ಯಶಸ್ಸಿನಲ್ಲಿ ಭಾಗಿಯಾಗುವ ತುಡಿತವಿರುತ್ತದೆ. 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ ಬಳಿಕ, ಜಾಗತಿಕ ಮಟ್ಟದ ಟೂರ್ನಿಗಳ ಮಹತ್ವ ಹಾಗೂ ಸೊಬಗನ್ನು ಚೆನ್ನಾಗಿ ಅರಿತಿದ್ದೇನೆ,'' ಎಂದು ಅನಾರೋಗ್ಯದಿಂದ ಚೇತರಿಸಿ ತಂಡ ಸೇರಿಕೊಳ್ಳಲು ಎದುರು ನೋಡುತ್ತಿರುವ ಶದಾಬ್ ಖಾನ್ ಹೇಳಿದ್ದಾರೆ.
"ವಿಶ್ವಕಪ್‌ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಅತ್ಯುತ್ತಮ ಪ್ರದರ್ಶನ ನೀಡಲು ನನ್ನ ಸಂಪೂರ್ಣ ಶ್ರಮ ವಹಿಸಲಿದ್ದೇನೆ,'' ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಇದೇ ವೇಳೆ ಶದಾಬ್ ತಂಡಕ್ಕೆ ಮರಳುವ ಕುರಿತಾಗಿ ಮಾತನಾಡಿರುವ ಪಾಕ್ ತಂಡದ ಕೋಚ್ ಮಿಕಿ ಆರ್ಥರ್, "ಶದಾಬ್ ತಮ್ಮ ಶ್ರೇಷ್ಠ ಲಯಕ್ಕೆ ಮರಳಲು ಕೊಂಚ ಸಮಯ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಅರಿತಿದ್ದೇವೆ. ಅವರು ತಂಡಕ್ಕೆ ವಿಶ್ವಕಪ್‌ನಲ್ಲಿ ಬೇಕಿರುವ ಸಮತೋಲನವನ್ನು ತಂದುಕೊಡುತ್ತಾರೆ. ಮೇ 31ರಂದು ಪಾಕಿಸ್ತಾನ ಮೊದಲ ಪಂದ್ಯವನ್ನಾಡಲಿದ್ದು, ಇನ್ನು 2 ವಾರ ಕಾಲ ತಮ್ಮ ಲಯ ಕಂಡುಕೊಳ್ಳಲು ಶದಾಬ್‌ಗೆ ಉತ್ತಮ ಅವಕಾಶವಿದೆ,'' ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಆಥಿತ್ಯದಲ್ಲಿ ಮೇ 30ರಂದು ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಲಿದ್ದು, ಮೇ 31ರಂದು ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಮೊದಲ ಪಂದ್ಯವನ್ನಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications