ದಾಖಲೆ ಶತಕದ ಖುಷಿಯಲ್ಲೇ ನಿವೃತ್ತಿ ಘೋಷಿಸಿದ ಶೋಯಿಬ್
ಶಾರ್ಜಾ, ನ.04: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಶತಕ ಸಿಡಿಸಿರುವ ಶೋಯಿಬ್ ಮಲಿಕ್ ಅವರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
'ಇಂಗ್ಲೆಂಡ್ ವಿರುದ್ಧದ ಶಾರ್ಜಾ ಟೆಸ್ಟ್ ನನ್ನ ಕಡೆಯ ಪಂದ್ಯವಾಗಲಿದೆ' ಎಂದು ಪಾಕಿಸ್ತಾನದ ಆಲ್ರೌಂಡರ್ ಆಟಗಾರ ಶೋಯಿಬ್ ಮಲಿಕ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದ ಬಳಿಕ ಶೋಯಿಬ್ ಮಲಿಕ್, ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದು ವಿಶೇಷವಾಗಿತ್ತು. ಶಾರ್ಜಾ ಪಂದ್ಯವೇ ವೃತ್ತಿ ಜೀವನದ ಕಡೆಯ ಟೆಸ್ಟ್ ಪಂದ್ಯವಾಗಲಿದೆ. [ಸಾನಿಯಾ ಸ್ಫೂರ್ತಿಯಿಂದ ಶತಕ ಬಾರಿಸಿದ ಶೊಯೆಬ್]

ಸುಮಾರು ಐದು ವರ್ಷಗಳ ಬಳಿಕ ಮತ್ತೆ ಟೆಸ್ಟ್ ತಂಡಕ್ಕೆ ಮರಳಿದ್ದ ಶೋಯಿಬ್ ಮಲಿಕ್ ಅವರು, ಅಬುಧಾಬಿಯಲ್ಲಿ ಇಂಗ್ಲೆಂಡ್ ವಿರುದ್ಧ 245ರನ್ ಗಳಿಸಿದ್ದರು. ಇದು ಅವರ ಟೆಸ್ಟ್ ವೃತ್ತಿಜೀವನದ ಗರಿಷ್ಠ ಮೊತ್ತವಾಗಿದೆ.
35 ಟೆಸ್ಟ್ ಪಂದ್ಯಗಳನ್ನಾಡಿ 1898 ರನ್, 3 ಶತಕ, 8 ಅರ್ಧಶತಕ, 25 ವಿಕೆಟ್ ಗಳಿಸಿರುವ ಶೋಯಿಬ್ ಮಲಿಕ್ ಅವರು ಟೆಸ್ಟ್ ತಂಡಕ್ಕೆ ಮರಳಿ ಉತ್ತಮ ಪ್ರದರ್ಶನ ನೀಡಲು ತನ್ನ ಪತಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೇ ಸ್ಫೂರ್ತಿ ಎಂದಿದ್ದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ಸಿಗಬೇಕು. ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸದ್ಯಕ್ಕೆ ನಾನು 2019ರ ವಿಶ್ವಕಪ್ ಗೆ ಅಣಿಯಾಗುತ್ತೇನೆ ಎಂದು ಶೋಯಿಬ್ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications