For Quick Alerts
ALLOW NOTIFICATIONS  
For Daily Alerts
 

SA vs PAK: ರಿಜ್ವಾನ್‌ ನಾಯಕತ್ವದಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳಿದ ಪಾಕ್: ವಿದೇಶದಲ್ಲಿ ಅಮೋಘ ಸಾಧನೆ

ಅನುಭವಿ ಆಟಗಾರ ಬಾಬರ್ ಅಜಮ್ ಹಾಗೂ ನಾಯಕ ಮೊಹಮ್ಮದ್ ರಿಜ್ವಾನ್ ಅವರ ಸೊಗಸಾದ ಬ್ಯಾಟಿಂಗ್‌ ನೆರವಿನಿಂದ ಪಾಕಿಸ್ತಾನ, ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 81 ರನ್‌ಗಳಿಂದ ಮಣಿಸಿ, ಇನ್ನು ಒಂದು ಏಕದಿನ ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು ವಶಕ್ಕೆ ಪಡೆದಿದೆ. ಈ ಮೂಲಕ ಮೊಹಮ್ಮದ್‌ ರಿಜ್ವಾನ್‌ ನಾಯಕತ್ವದಲ್ಲಿ ಪಾಕ್‌ ವಿದೇಶದಲ್ಲಿ ಸತತ ಮೂರನೇ ಏಕದಿನ ಸರಣಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಮತ್ತೆ ಪಾಕ್‌ ತಂಡ ತನ್ನ ಟ್ರ್ಯಾಕ್‌ಗೆ ಬರುತ್ತಿರುವಂತೆ ಕಾಣುತ್ತಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 49.5 ಓವರ್‌ಗಳಲ್ಲಿ 329 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 43.1 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್ ಆಯಿತು.

Pakistan Seals ODI Series Win Over South Africa Rizwan s Third Straight Triumph

ಉತ್ತಮ ಜೊತೆಯಾಟ

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಅಬ್ದುಲ್ ಶಫೀಕ್‌ ಸೊನ್ನೆ ಸುತ್ತಿದರು. ಆರಂಭಿಕ ಸೈಯಮ್ ಅಯೂಬ್‌ (25) ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಮೂರನೇ ವಿಕೆಟ್‌ಗೆ ಬಾಬರ್‌ ಅಜಮ್ ಹಾಗೂ ನಾಯಕ ಮೊಹಮ್ಮದ್ ರಿಜ್ವಾನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 142 ಎಸೆತಗಳಲ್ಲಿ 115 ರನ್‌ ಸಿಡಿಸಿ ತಂಡಕ್ಕೆ ಆಧಾರವಾಯಿತು. ಬಾಬರ್‌ ಅಜಮ್ 95 ಎಸೆತಗಳಲ್ಲಿ 73 ರನ್‌ ಸಿಡಿಸಿದರೆ, ರಿಜ್ವಾನ್‌ 7 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 80 ರನ್‌ಗಳಿಸಿ ಔಟ್ ಆದರು.

ಐದನೇ ವಿಕೆಟ್‌ಗೆ ಸಲ್ಮಾನ್ ಅಘಾ ಹಾಗೂ ಕಮ್ರಾನ್ ಗುಲಾಮ್ ಜೋಡಿ 37 ಎಸೆತಗಳಲ್ಲಿ 50 ರನ್‌ ಸೇರಿಸಿತು. ಕಮ್ರಾನ್ ಗುಲಾಮ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರು 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ 63 ರನ್‌ ಸಿಡಿಸಿದರು.

Pakistan Seals ODI Series Win Over South Africa Rizwan s Third Straight Triumph

ದಕ್ಷಿಣ ಆಫ್ರಿಕಾದ ಪರ 18 ವರ್ಷದ ಯುವ ಆಟಗಾರ ಕ್ವೆನಾ ಮಫಕಾ ಅಮೋಘ ದಾಳಿ ನಡೆಸಿ 4 ವಿಕೆಟ್‌ ಪಡೆದರು. ಉಳಿದಂತೆ ಮಾರ್ಕೊ ಜಾನ್ಸನ್‌ 3 ವಿಕೆಟ್‌ ಕಬಳಿಸಿದರು.

ಕ್ಲಾಸೇನ್‌ ಏಕಾಂಗಿ ಹೋರಾಟ

ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಹೆನ್ರಿಕ್‌ ಕ್ಲಾಸೇನ್‌ ಅಬ್ಬರಿಸಿದರು. ಇವರನ್ನು ಬಿಟ್ಟರೆ ಉಳಿದಯ ಯಾವ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲೇ ಇಲ್ಲ. ಐದನೇ ವಿಕೆಟ್‌ಗೆ ಡೇವಿಡ್ ಮಿಲ್ಲರ್ ಹಾಗೂ ಕ್ಲಾಸೇನ್‌ ಜೋಡಿ 72 ಎಸೆತಗಳಲ್ಲಿ 72 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಹೆನ್ರಿ ಕ್ಲಾಸೇನ್‌ 74 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ 97 ರನ್‌ ಬಾರಿಸಿ ಔಟ್ ಆದರು.

ಪಾಕ್ ಪರ ಶಾಹೀನ್ ಶಾ ಆಫ್ರಿದಿ 4, ನಸೀಮ್ ಶಾ 3 ವಿಕೆಟ್‌ ಪಡೆದು ಮಿಂಚಿದರು.

ಇದು ರಿಜ್ವಾನ್ ನಾಯಕತ್ವದಲ್ಲಿ ಸತತ ಮೂರನೇ ಏಕದಿನ ಸರಣಿ ಜಯವಾಗಿದೆ. ಇದಕ್ಕೂ ಮುನ್ನ ತವರಿನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯವನ್ನು ಮಣಿಸಿರುವ ಪಾಕಿಸ್ತಾನ ತಂಡ ಜಿಂಬಾಬ್ವೆ ಪ್ರವಾಸದಲ್ಲಿ ಎರಡನೇ ಏಕದಿನ ಸರಣಿಯನ್ನು ಗೆದ್ದು ಇದೀಗ ಮೂರನೇ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಬಾಬರ್‌ ಅಜಮ್‌ ನಾಯಕತ್ವದಲ್ಲಿ ತಂಡ ಏಕದಿನ ಟೂರ್ನಿಯಲ್ಲಿ ಇಂತಹ ಪ್ರದರ್ಶನ ನೀಡಿರಲಿಲ್ಲ.

Story first published: Friday, December 20, 2024, 11:37 [IST]
Other articles published on Dec 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+