Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹತ್ವದ ಸರಣಿಗೂ ಮುನ್ನ ಪಾಕ್‌ಗೆ ಪೆಟ್ಟು: ವೇಗದ ಬೌಲರ್‌ ಔಟ್‌

ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಏಳು ವರ್ಷಗಳ ಬಳಿಕ ಐಸಿಸಿ ಮೆಗಾ ಟೂರ್ನಿ ನಡೆಯಲಿದ್ದು ರೋಚಕತೆ ಹೆಚ್ಚಿಸಿದೆ. ಈಗಾಗಲೇ ಎಂಟು ತಂಡಗಳು ಭರದ ತಯಾರಿಯನ್ನು ನಡೆಸಿವೆ. ಇದೇ ವೇಳೆ ಪಾಕಿಸ್ತಾನ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ತ್ರಿಕೋನ ಸರಣಿಯಲ್ಲಿ ಬುಧವಾರ ಆತಿಥೇಯ ಪಾಕ್‌ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ. ಇದಕ್ಕೂ ಮೊದಲು ಆತಿಥೇಯ ತಂಡಕ್ಕೆ ಪೆಟ್ಟು ಬಿದ್ದಿದೆ.

ಪಾಕಿಸ್ತಾನದ ತಂಡದ ವೇಗದ ಬೌಲರ್‌ ಗಾಯಕ್ಕೆ ತುತ್ತಾಗಿದ್ದು, ಇನ್ನ ಚೇತರಿಕೆ ಕಾಣದ ಹಿನ್ನೆಲೆ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಹಾಗೂ ತ್ರಿಕೋನ ಸರಣಿಯಿಂದ ಹೊರ ನಡೆದಿದ್ದಾರೆ. ಇವರು ಪಾಕ್‌ ತಂಡದ ಬೌಲಿಂಗ್ ವಿಭಾಗದ ನೊಗವನ್ನು ತಮ್ಮ ಹೆಗಲ ಮೇಲೆ ಹೊತ್ತ ನಡೆಸುವ ಬೌಲರ್‌ಗಳಲ್ಲಿ ಒಬ್ಬರು ಇವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ.

Pakistan Suffers Blow as Haris Rauf Ruled Out of Tri-Series Before Champions Trophy

ಸ್ಟಾರ್ ಆಟಗಾರ ಔಟ್

ಪಾಕಿಸ್ತಾನ ತಂಡಕ್ಕೆ ತಮ್ಮ ವೇಗದ ಬೌಲಿಂಗ್ ಮೂಲಕ ನೆರವಾದ ಬೌಲರ್ ಹ್ಯಾರಿಸ್ ರೌಫ್. ಇವರು ಪಾಕಿಸ್ತಾನ ತಂಡದಿಂದ ಹೊರಗುಳಿದಿದ್ದಾರೆ. ಇವರು ಬಹು ದಿನಗಳಿಂದ ಗಾಯಕ್ಕೆ ತುತ್ತಾಗಿದ್ದರು. ಇವರು ಚೇತರಿಸಿಕೊಳ್ಳದ್ದರಿಂದ ಇವರನ್ನು ಕೈ ಬಿಡಲಾಗಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಹ್ಯಾರಿಸ್ ಅನ್‌ ಫಿಟ್ ಆಗಿದ್ದಾರೆ ಎಂದು ಘೋಷಿಸಿರುವುದು ಆತಿಥೇಯ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಪಾಕಿಸ್ತಾನ ತಂಡದ ಸ್ಟಾರ್ ಬೌಲರ್‌ ಹ್ಯಾರಿಸ್ ರೌಫ್‌ ಬದಲಿಗೆ ಅಕಿಬ್‌ ಜಾವೇದ್ ಅವರಿಗೆ ಪಿಸಿಬಿ ಅವಕಾಶವನ್ನು ನೀಡಿದೆ. ಇತ್ತೀಚಿಗೆ ಅಕಿಬ್‌ ನೀಡಿರುವ ಸ್ಥಿರ ಪ್ರದರ್ಶನವೇ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಮಾಡಿದೆ. ಯುವ ಬೌಲರ್‌ ತಮ್ಮ ಬಿಗುವಿನ ದಾಳಿಯಿಂದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಅಬ್ಬರಿಸಿದ್ದರು. ಅಕಿಬ್‌ 6 ಅಡಿ 1 ಇಂಚು ಎತ್ತರ ಇದ್ದು, ಬಾಂಗ್ಲಾ ಲೀಗ್‌ನಲ್ಲಿ ಸಂಚಲನ ಮೂಡಿಸಿದ್ದರು. ದೇಶೀಯ ಟೂರ್ನಿಗಳಲ್ಲಿ ಇವರು ನೀಡಿದ ಪ್ರದರ್ಶನವನ್ನು ಗಮನಿಸಿದ ಆಯ್ಕೆ ಸಮಿತಿ ಇವರಿಗೆ ಅವಕಾಶವನ್ನು ನೀಡಿದೆ. ಇವರ ಸ್ಥಿರ ಪ್ರದರ್ಶನ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನೆರವಾಗಿದೆ. ಇವರು ಪಿಎಸ್‌ಎಲ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಪ್ರತಿನಿಧಿಸಿದ್ದರು. ಈಗ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈಗಾಗಲೇ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿರುವ ನ್ಯೂಜಿಲೆಂಡ್ ತಂಡ ತ್ರಿ ಕೋನ ಸರಣಿಯ ಫೈನಲ್‌ಗೆ ಪ್ರವೇಶ ಪಡೆದಿದೆ. ದಕ್ಷಿಣ ಆಫ್ರಿಕಾ ಹಾಗೂ ಪಾಕ್‌ ಎರಡೂ ತಂಡಗಳು ಬುಧವಾರ ಮಹತ್ವದ ಪಂದ್ಯವನ್ನು ಆಡಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ.

Pakistan Suffers Blow as Haris Rauf Ruled Out of Tri-Series Before Champions Trophy

ಹ್ಯಾರಿಸ್‌ ರೌಫ್‌ ಪಾಕ್‌ ತಂಡದ ಅನುಭವಿ ಬೌಲರ್‌ಗಳಲ್ಲಿ ಒಬ್ಬರು. ಇವರು 46 ಏಕದಿನ ಪಂದ್ಯಗಳನ್ನು ಆಡಿದ್ದು, 83 ವಿಕೆಟ್‌ ಕಬಳಿಸಿದ್ದಾರೆ. ಇನ್ನು 79 ಟಿ20 ಪಂದ್ಯಗಳಲ್ಲಿ 110 ವಿಕೆಟ್‌ ಹೊಂದಿದ್ದಾರೆ. ಇವರು ತಮ್ಮ ವೇರಿಯೇಷನ್‌ಗಳಿಂದ ಹೆಸರುವಾಸಿ. ಇವರು ತಂಡದಿಂದ ಹೊರ ನಡೆದಿರುವುದು ನಿಜಕ್ಕೂ ತಂಡಕ್ಕೆ ಪೆಟ್ಟು ಬಿದ್ದಂತೆ ಆಗಿದೆ.

Story first published: Tuesday, February 11, 2025, 21:17 [IST]
Other articles published on Feb 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+