ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!

ಕರಾಚಿ: ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಆರನೇ ಆವೃತ್ತಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪೂರ್ಣಗೊಳಿಸುವ ಆಲೋಚನೆಯಲ್ಲಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಇತ್ತು. ಆದರೆ ಪಿಸಿಬಿ ಆಸೆ ನಿರಾಸೆಯಾಗಿದೆ. ಯುಎಇಯಲ್ಲಿ ಪಿಎಸ್‌ಎಲ್ ನಡೆಯುವ ಸಾಧ್ಯತೆ ಕಡಿಮೆಯಿದೆ.
ಜೂನ್‌ನಲ್ಲಿ ಪಿಎಸ್‌ಎಲ್ ಇನ್ನುಳಿದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ಪಿಸಿಬಿ ಯೋಜನೆ ಹಾಕಿಕೊಂಡಿತ್ತು. ಆದರೆ ಯುಎಇ ಕೋವಿಡ್-19ರ ಕಾರಣ ಪಾಕಿಸ್ತಾನ್, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶಗಳಿಂದ ಪ್ರಯಾಣಕ್ಕೆ ನಿರ್ಬಂಧ ಹೇರಿದೆ.
ಮೇ 12ರ ಬುಧವಾರದಿಂದಲೇ ಯುಎಇಗೆ ಹೊರದೇಶಗಳಿಂದ ಬರುವ ನಿರ್ಬಂಧ ಜಾರಿಯಾಗಲಿದೆ. ಹೀಗಾಗಿ ಪಿಎಸ್‌ಎಲ್ ಇನ್ನುಳಿದ ಪಂದ್ಯಗಳು ಯುಎಇಯಲ್ಲಿ ನಡೆಸಲು ಸಾಧ್ಯವಾಗದಿರುವ ಸಾಧ್ಯತೆಯಿದೆ. ಆದರೆ ಪಾಕ್‌ಗೆ ಇನ್ನುಳಿದ ಪಂದ್ಯಗಳನ್ನು ಪಾಕ್‌ನಲ್ಲೇ ನಡೆಯುವ ಆಯ್ಕೆಯೊಂದು ಉಳಿದಿದೆ.
'ಉಭಯ ದೇಶಗಳಲ್ಲಿನ ಈದ್ ರಜಾದಿನಗಳಿಂದಾಗಿ ಮುಂದಿನ 24 ಗಂಟೆಗಳಲ್ಲಿ ಪಿಎಸ್‌ಎಲ್ ವಿಷಯಗಳನ್ನು ಅಂತಿಮಗೊಳಿಸಲಾಗುವುದು ಎಂದು ಪಿಸಿಬಿ ನಿರೀಕ್ಷಿಸುತ್ತಿತ್ತು, ಆದರೆ ಈಗ ಯುಎಇ ಸರ್ಕಾರವು ಮೇ 12 ರವರೆಗೆ ಪ್ರಯಾಣ ನಿರ್ಬಂಧ ಹೇರಿರುವುದರಿಂದ ಕರಾಚಿಯಲ್ಲಿ ಪಂದ್ಯಗಳನ್ನು ನಡೆಸುವುದು ಪಿಸಿಬಿಗೆ ಸದ್ಯ ಉಳಿದಿರುವ ಏಕೈಕ ಆಯ್ಕೆಯಾಗಿದೆ,' ಎಂದು ಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications