Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2023ರ ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ; ವಿದೇಶಾಂಗ ಸಚಿವಾಲಯದ ಮಹತ್ವದ ಹೇಳಿಕೆ

ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡವು ಭಾರತಕ್ಕೆ ಆಗಮಿಸಲಿದೆ.

ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಸಹ ಭಾಗವಹಿಸುವ ಇತರ ರಾಷ್ಟ್ರಗಳ ತಂಡಗಳಂತೆ ಉಪಚರಿಸಲಾಗುವುದು ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ಖಚಿತಪಡಿಸಿದ್ದಾರೆ.

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಆಡಲು ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡವನ್ನು ಕಳುಹಿಸಲು ಪಾಕಿಸ್ತಾನ ಸರ್ಕಾರ ಕಳೆದ ವಾರ ಅನುಮತಿ ನೀಡಿದೆ.

pakistan-team-will-be-treated-like-any-other-teams

ಕಳೆದ ಒಂದು ದಶಕದಿಂದ ಉಭಯ ದೇಶಗಳ ಸರ್ಕಾರಗಳ ನಡುವಿನ ಹದಗೆಟ್ಟ ರಾಜತಾಂತ್ರಿಕ ಸಂಬಂಧಗಳಿಂದಾಗಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆಯು ಅನುಮಾನದಲ್ಲಿತ್ತು.

ಈ ಸನ್ನಿವೇಶಗಳ ನಡುವೆಯೇ, ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, "ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಭಾಗವಹಿಸುವ ಕುರಿತು ನಾವು ಈ ವರದಿಗಳನ್ನು ನೋಡಿದ್ದೇವೆ. ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಐಸಿಸಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಯಾವುದೇ ಇತರ ದೇಶದ ಕ್ರಿಕೆಟ್ ತಂಡದಂತೆಯೇ ಪರಿಗಣಿಸಲಾಗುವುದು," ಎಂದು ತಿಳಿಸಿದರು.

ಈ ವಾರದ ಆರಂಭದಲ್ಲಿ ವಿಶ್ವಕಪ್‌ ಪಂದ್ಯಾವಳಿಯ ಪರಿಷ್ಕೃತ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿತು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವು ಈ ಮೊದಲು ಅಕ್ಟೋಬರ್ 15, ಭಾನುವಾರದಂದು ಅಹಮದಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಈ ಪಂದ್ಯವನ್ನು ಒಂದು ದಿನ ಮುಂಚಿತವಾಗಿ ಆಡಿಸಲಾಗುತ್ತಿದೆ. ಅಂದರೆ ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಹೀಗಾಗಿ, ದೆಹಲಿಯಲ್ಲಿ ಅಕ್ಟೋಬರ್ 14ರಂದು ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಇಂಗ್ಲೆಂಡ್ ಪಂದ್ಯವನ್ನು ಭಾನುವಾರ, ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.

ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಪಂದ್ಯವು ಅಕ್ಟೋಬರ್ 12ರ ಗುರುವಾರದಿಂದ ಅಕ್ಟೋಬರ್ 10 ಮಂಗಳವಾರದಂದು ಆಡಿಸಲಾಗುತ್ತಿದೆ. ಇನ್ನು ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡದ ಪಂದ್ಯವು ಇದೀಗ ಶುಕ್ರವಾರ, ಅಕ್ಟೋಬರ್ 13ರ ಬದಲಿಗೆ ಒಂದು ದಿನದ ಮುಂಚೆ ಗುರುವಾರ, ಅಕ್ಟೋಬರ್ 12ರಂದು ಆಡಲಾಗುತ್ತದೆ.

ಇದೆ ವೇಳೆ, ನೆದರ್ಲ್ಯಾಂಡ್ಸ್ ವಿರುದ್ಧದ ಭಾರತ ತಂಡದ ಕೊನೆಯ ಲೀಗ್ ಪಂದ್ಯವನ್ನು ಈಗ ನವೆಂಬರ್ 11ರಿಂದ 12ಕ್ಕೆ ಮುಂದೂಡಲಾಗಿದೆ. ಇದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೊನಲು ಬೆಳಕಿನ ಪಂದ್ಯವಾಗಿದೆ.

Story first published: Friday, August 11, 2023, 23:05 [IST]
Other articles published on Aug 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+