For Quick Alerts
ALLOW NOTIFICATIONS  
For Daily Alerts
 

ಸೋತ ಪಾಕಿಸ್ತಾನಕ್ಕೆ ಮತ್ತೆರಡು ಬರೆ: ಏಷ್ಯಾಕಪ್ ಉಳಿದ ಪಂದ್ಯಗಳಿಗೆ ಇಬ್ಬರು ಸ್ಟಾರ್‌ಗಳು ಅಲಭ್ಯ ಸಾಧ್ಯತೆ!!

ಭಾರತದ ವಿರುದ್ಧ ಸೋಲು ಅನುಭವಿಸಿರುವ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಸಂಕಷ್ಟದಲ್ಲಿದೆ. ಕೊನೆಯ ಒಂದು ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ ಪಾಕ್ ಪಡೆ. ಈ ಸಂದರ್ಭದಲ್ಲಿ ಫಾಕಿಸ್ತಾನ ತಂಡಕ್ಕೆ ಎರಡು ದೊಡ್ಡ ಆಘಾತಗಳುಂಟಾಗಿದ್ದು ಮುಂದಿನ ಪಂದ್ಯಗಳಿಗೆ ಭಾರೀ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ.

ಭಾರತದ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನದ ಇಬ್ಬರು ವೇಗದ ಬೌಲರ್‌ಗಳು ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಏಷ್ಯಾಕಪ್ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಈ ಇಬ್ಬರು ವೇಗದ ಬೌಲರ್‌ಗಳು ಆಡುವುದು ಬಹುತೇಕ ಅನುಮಾನ. ಇದು ಪಾಕಿಸ್ತಾನ ತಂಡಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಅನುಮಾಣವೇ ಇಲ್ಲ.

Pakistan teams these two star pacers likely to miss remainder of Asia Cup 2023

ಗಾಯಗೊಂಡಿದ್ದಾರೆ ರೌಫ್, ನಸೀಮ್ ಶಾ

ಪಾಕಿಸ್ತಾನ ತಂಡದ ಇಬ್ಬರು ಪ್ರಮುಖ ವೇಗದ ಬೌಲರ್‌ಗಳಾದ ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಭಾರತದ ವಿರುದ್ಧ ನಡೆದ ಸೂಪರ್ 4 ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಈ ಇಬ್ಬರು ಕೂಡ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮುಂದುವರಿಯಲು ಗೆಲ್ಲಲೇ ಬೇಕಾದ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಅಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ.

ಭಾರತದ ವಿರುದ್ಧದ ಪಂದ್ಯದಲ್ಲಿ ಭಾನುವಾರ ಹ್ಯಾರಿಸ್ ರೌಫ್ ಫ್ಲ್ಯಾಂಕ್ ಇಂಜುರಿಗೆ ಒಳಗಾಗಿದ್ದರು. ಹೀಗಾಗಿ ರೌಫ್ ಭಾರತ ಪಾಕ್ ಪಂದ್ಯ ಸೋಮವಾರ ಮುಂದುವರಿದಾಗ ಕಣಕ್ಕಿಳಿಯಲಿಲ್ಲ. ರೌಫ್ ಇಲ್ಲದೆಯೇ ಪಾಕಿಸ್ತಾನ ಬೌಲಿಂಗ್ ದಾಳಿ ನಡೆಸಬೇಕಾಗಿತ್ತು. ಭಾತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಹಿನ್ನಡೆಗೆ ಇದು ಕೂಡ ಕಾರಣವಾಗಿತ್ತು.

ಇನ್ನು ಮತ್ತೋರ್ವ ವೇಗದ ಬೌಲರ್ ನಸೀಮ್ ಶಾ ಕೂಡ ಭಾರತ ವಿರುದ್ಧದ ಪಂದ್ಯದ ಕೊನೆಯ ಹಂತದಲ್ಲಿ ಗಾಯದಿಂದಾಗಿಉ ಮೈದಾನ ತೊರೆದಿದ್ದರು. ಭಾರತ ಬ್ಯಾಟಿಂಗ್ ನಡೆಸುತ್ತಿದ್ದಾಗ 49ನೇ ಓವರ್‌ನಲ್ಲಿ ನಸೀಮ್ ಶಾ ಮೈದಾನ ತೊರೆದಿದ್ದರು. ಬಳಿಕ ಈ ಇಬ್ಬರು ವೇಗದ ಬೌಲರ್‌ಗಳು ಕೂಡ ಬ್ಯಾಟಿಂಗ್‌ನಲ್ಲಿ ಕಣಕ್ಕಿಳಿದಿರಲಿಲ್ಲ. ನಸೀಮ್ ಶಾ ಬಲಭುಜದ ನೋವಿಗೆ ತುತ್ತಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡಕ್ಕೆ ಈಗಾಗಲೇ ಇಬ್ಬರು ವೇಗದ ಬೌಲರ್‌ಗಳನ್ನು ಬ್ಯಾಕಪ್ ಆಗಿ ಪಿಸಿಬಿ ಶ್ರೀಲಂಕಾಗೆ ಕಳುಹಿಸುವ ನಿರ್ಧಾರ ಮಾಡಿದೆ. ಶಹ್ನವಾಜ್ ದಹಾನಿ ಹಾಗೂ ಜಮನ್ ಖಾನ್‌ಗೆ ಈ ಕರೆಬಂದಿದ್ದು ಶೀಘ್ರದಲ್ಲಿಯೇ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

Story first published: Tuesday, September 12, 2023, 15:12 [IST]
Other articles published on Sep 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+