For Quick Alerts
ALLOW NOTIFICATIONS  
For Daily Alerts
 

ವಿಶ್ವದಾಖಲೆ ಬರೆದ ಪಾಕಿಸ್ತಾನ ಯುವ ಕ್ರಿಕೆಟರ್ ಮೊಹಮ್ಮದ್ ಹಸನೈನ್

Pakistan teenager Mohammad Hasnain creates world record with hat-trick

ಲಾಹೋರ್, ಅಕ್ಟೋಬರ್ 6: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಯುವ ಆಟಗಾರ ಮೊಹಮ್ಮದ್ ಹಸನೈನ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅದೂ ತಾನು ಆಡುತ್ತಿರುವ 2ನೇ ಟಿ20ಐ ಪಂದ್ಯದಲ್ಲೇ ಹಸನೈನ್ ದಾಖಲೆ ಬರೆದಿರುವುದು ವಿಶೇಷ. ಶನಿವಾರ (ಅಕ್ಟೋಬರ್ 5) ಶ್ರೀಲಂಕಾ ವಿರುದ್ಧದ 1ನೇ ಟಿ20ಯಲ್ಲಿ ಹಸನೈನ್ ವಿಶಿಷ್ಠ ದಾಖಲೆಗಾಗಿ ಗಮನ ಸೆಳೆದರು.

ಲಾಹೋರ್‌ನ ಗದಾಫಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ-ಪಾಕ್ ಮೊದಲನೇ ಟಿ20 ಪಂದ್ಯದಲ್ಲಿ 19 ವರ್ಷ, 183 ದಿನ ವಯಸ್ಸಿನವರಾದ ಮೊಹಮ್ಮದ್ ಹಸನೈನ್, ಹ್ಯಾಟ್ರಿಕ್ ವಿಕೆಟ್ ಪಡೆದರು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಅತೀ ಕಿರಿಯ ಆಟಗಾರ ಹೆಗ್ಗಳಿಕೆ ಹಸನೈನ್ ಪಾತ್ರರಾಗಿದ್ದಾರೆ.

ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಹಸನೈನ್, ಭಾನುಕ ರಾಜಪಕ್ಷ, ದಸುನು ಶನಕ ಮತ್ತು ಶೇಹನ್ ಜಯಸೂರ್ಯ ವಿಕೆಟ್‌ ಪಡೆದು ಹ್ಯಾಟ್ರಿಕ್ ದಾಖಲೆ ಬರೆದಿದ್ದಾರೆ. ಒಟ್ಟು 4 ಓವರ್‌ ಎಸೆದಿದ್ದ ಹಸನೈನ್ 37 ರನ್‌ಗೆ 3 ವಿಕೆಟ್ ಪಡೆದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ, ದನುಷ್ಕ ಗುಣತಿಲ 57, ಆವಿಷ್ಕಾ ಫೆರ್ನಾಂಡೋ 33, ಭಾನುಕ ರಾಜಪಕ್ಷ 31, ನಾಯಕ ದಸುನು ಶನಕ 17 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 165 ರನ್ ಮಾಡಿತು. ಪಾಕ್, ನಾಯಕ ಸರ್ಫರಾಜ್ ಅಹ್ಮದ್ 24, ಇಫ್ತಿಕರ್ ಅಹ್ಮದ್ 25 ರನ್‌ನೊಂದಿಗೆ 17.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 101 ರನ್ ಬಾರಿಸಿ ಶರಣಾಯ್ತು.

Story first published: Saturday, October 5, 2019, 23:30 [IST]
Other articles published on Oct 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+