ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ಮಹಿಳಾ ತಂಡಕ್ಕೆ ಪಾಕಿಸ್ತಾನ ಆತಿಥ್ಯ: ಪಿಸಿಬಿ

ಲಾಹೋರ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಇದೇ ಚೊಚ್ಚಲ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಹೋಗಲಿದೆ. ಅಕ್ಟೋಬರ್‌ನಲ್ಲಿ ಪಾಕ್‌ಗೆ ತೆರಳಲಿರುವ ಇಂಗ್ಲೆಂಡ್ ಮಹಿಳಾ ತಂಡ ಅಲ್ಲಿ ಸೀಮಿತ ಓವರ್‌ಗಳ ಐದು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮಂಗಳವಾರ (ಆಗಸ್ಟ್ 25) ಘೋಷಿಸಿದೆ.
50 ಓವರ್‌ಗಳ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ಸ್ ಆಗಿರುವ ಇಂಗ್ಲೆಂಡ್ ತಂಡಕ್ಕೆ ಹೀದರ್ ನೈಟ್ ಅವರು ನಾಯಕಿಯಾಗಿರಲಿದ್ದಾರೆ. ಪಾಕ್‌ನಲ್ಲಿ ಇಂಗ್ಲೆಂಡ್ ತಂಡ ಎರಡು ಟಿ20ಐ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಅಕ್ಟೋಬರ್ 10-22ರ ವರೆಗೆ ಈ ಪಂದ್ಯಗಳು ರಾವಲ್ಪಿಂಡಿಯ ಪಿಂಡಿ ಸ್ಟೇಡಿಯಂನಲ್ಲಿ ನಡೆಯಲಿವೆ.
ಈ ವರ್ಷದ ಕೊನೆಯಲ್ಲಿ ಜಿಂಬಾಬ್ವೆಯಲ್ಲಿ ಮಹಿಳಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿರುವುದರಿಂದ ಆಟಗಾರ್ತಿಯರಿಗೆ ಹೆಚ್ಚಿನ ಅಭ್ಯಾಸ ಒದಗಿಸುವುದಕ್ಕಾಗಿ ಸೆಪ್ಟೆಂಬರ್‌ನಲ್ಲಿ ನಾಲ್ಕು ತಂಡಗಳ ದೇಸಿ ಏಕದಿನ ಕ್ರಿಕೆಟ್ ಟೂರ್ನಿಯನ್ನು ನಡೆಸಲಿರುವುದಾಗಿಯೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೇಳಿದೆ.
"ನಾವು ಬರೀ ಮುಣಮಟ್ಟದ ಸ್ಪರ್ಧಾತ್ಮಕ ದೇಸಿ ಕ್ರಿಕೆಟ್ ಟೂರ್ನಿ ನಡೆಸುತ್ತಿಲ್ಲ, ಜೊತೆಗೆ ಇಂಗ್ಲೆಂಡ್ ಮಹಿಳಾ ತಂಡದಂತ ದೊಡ್ಡ ತಂಡಗಳೂ ಇದೇ ಚೊಚ್ಚಲ ಬಾರಿಗೆ ದೇಶಕ್ಕೆ ಪ್ರವಾಸ ಬರುವುದರಲ್ಲಿವೆ," ಎಂದು ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷೆ ಉರೂಝ್ ಮುಮ್ತಾಜ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications