PAK vs NZ: ಟೆಸ್ಟ್, ಏಕದಿನ ಸರಣಿಗಾಗಿ ಕಿವೀಸ್ ತಂಡಕ್ಕೆ ಪಾಕಿಸ್ತಾನದ ಆತಿಥ್ಯ; ಹೀಗಿದೆ ವೇಳಾಪಟ್ಟಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ನ್ಯೂಜಿಲೆಂಡ್ ತಂಡದ ವಿರುದ್ಧದ ತನ್ನ ತವರಿನ ಸರಣಿಯ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಡಿಸೆಂಬರ್ 26ರಿಂದ ಟೆಸ್ಟ್ ಪಂದ್ಯದ ಮೂಲಕ ಸರಣಿಗೆ ಚಾಲನೆ ನೀಡಲಾಗುತ್ತದೆ.
ಮಂಗಳವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಿಡುಗಡೆ ಮಾಡಿದ ಪ್ರವಾಸದ ಪ್ರಕಾರ, ಟೆಸ್ಟ್ ಸರಣಿಯು ಡಿಸೆಂಬರ್ 26ರಂದು ಕರಾಚಿಯಲ್ಲಿ ಪ್ರಾರಂಭವಾಗಲಿದ್ದು, ಎರಡನೇ ಪಂದ್ಯವು ಜನವರಿ 3ರಿಂದ ಮುಲ್ತಾನ್‌ನಲ್ಲಿ ನಡೆಯಲಿದೆ.
ಜನವರಿ 10, 12 ಮತ್ತು 14ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೂರು ಏಕದಿನ ಪಂದ್ಯಗಳನ್ನು ನಿಗದಿಪಡಿಸಲಾಗಿದೆ.
ನ್ಯೂಜಿಲೆಂಡ್ ಕಳೆದ ವರ್ಷ ಏಕದಿನ ಮತ್ತು ಟಿ20 ಸರಣಿಯನ್ನು ಆಡಬೇಕಾಗಿತ್ತು. ಆದರೆ ಕಿವೀಸ್ ತಂಡಕ್ಕೆ ಅನಾಮಧೇಯರಿಂದ ಭದ್ರತಾ ಬೆದರಿಕೆಯಿಂದಾಗಿ ಅವರ ಸರ್ಕಾರದ ಸೂಚನೆಯ ಮೇರೆಗೆ ಯಾವುದೇ ಪಂದ್ಯವನ್ನು ಆಡದೆ ರಾವಲ್ಪಿಂಡಿಯಿಂದ ಹಿಂತಿರುಗಿತು.

ಈ ವರ್ಷ ಪಾಕಿಸ್ತಾನ ಕ್ರಿಕೆಟ್‌ಗೆ ಲಾಭದಾಯಕವೆಂದು ಸಾಬೀತಾಗಿದೆ. ಏಕೆಂದರೆ ಅವರು ಈಗಾಗಲೇ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಿದ್ದಾರೆ. ಇನ್ನು ಅಕ್ಟೋಬರ್‌ನಲ್ಲಿ ಏಳು ಪಂದ್ಯಗಳ ಟಿ20 ಸರಣಿಯನ್ನು ಆಡಿದ ನಂತರ, ಇಂಗ್ಲೆಂಡ್ ಸದ್ಯ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ.
ಮಾರ್ಚ್ 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ಮಾಡಿದ ನಂತರ ವಿದೇಶಿ ತಂಡಗಳು ಭದ್ರತಾ ನೆಪದಿಂದ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಹೆದರುತ್ತಿದ್ದರು. 2009 ಮತ್ತು 2019ರ ನಡುವೆ ಯಾವುದೇ ಟೆಸ್ಟ್ ಅಥವಾ ಅಂತಾರಾಷ್ಟ್ರೀಯ ಸರಣಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಿರಲಿಲ್ಲ.

ಎರಡೂ ಕ್ರಿಕೆಟ್ ಮಂಡಳಿಗಳ ಒಪ್ಪಿಗೆಯೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಒಂದು ದಿನದ ಮಟ್ಟಿಗೆ ಮುಂದಕ್ಕೆ ತರಲಾಗಿದೆ. ನ್ಯೂಜಿಲೆಂಡ್ 2003ರಲ್ಲಿ ಪಾಕಿಸ್ತಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದೆ. ನ್ಯೂಜಿಲೆಂಡ್ ಮುಂದಿನ ವರ್ಷ ಏಪ್ರಿಲ್‌ನಲ್ಲಿ ಮತ್ತೊಂದು ವೈಟ್ ಬಾಲ್ ಸರಣಿಗಾಗಿ ಪಾಕಿಸ್ತಾನದ ಪ್ರವಾಸ ಕೈಗೊಳ್ಳಲಿದೆ.
ನ್ಯೂಜಿಲೆಂಡ್ ತಂಡದ ಪಾಕಿಸ್ತಾನ ಪ್ರವಾಸದ ವೇಳಾಪಟ್ಟಿ
ಮೊದಲ ಟೆಸ್ಟ್ ಪಂದ್ಯ - ಡಿಸೆಂಬರ್ 26ರಿಂದ 30 ನ್ಯಾಶನಲ್ ಬ್ಯಾಂಕ್ ಕ್ರಿಕೆಟ್ ಕ್ರೀಡಾಂಗಣ, ಕರಾಚಿ
ಎರಡನೇ ಟೆಸ್ಟ್ ಪಂದ್ಯ - ಜನವರಿ 3ರಿಂದ 7 ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂ
ಮೊದಲ ಏಕದಿನ ಪಂದ್ಯ - ಜನವರಿ 10ರಂದು ನ್ಯಾಷನಲ್ ಬ್ಯಾಂಕ್ ಕ್ರಿಕೆಟ್ ಕ್ರೀಡಾಂಗಣ, ಕರಾಚಿ
ಎರಡನೇ ಏಕದಿನ ಪಂದ್ಯ - ಜನವರಿ 12ರಂದು ನ್ಯಾಷನಲ್ ಬ್ಯಾಂಕ್ ಕ್ರಿಕೆಟ್ ಕ್ರೀಡಾಂಗಣ, ಕರಾಚಿ
ಮೂರನೇ ಏಕದಿನ ಪಂದ್ಯ - ಜನವರಿ 14 ರಂದು ನ್ಯಾಷನಲ್ ಬ್ಯಾಂಕ್ ಕ್ರಿಕೆಟ್ ಕ್ರೀಡಾಂಗಣ, ಕರಾಚಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications