Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್: ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನಕ್ಕೆ 3 ವಿಕೆಟ್ ರೋಚಕ ಜಯ

Pakistan vs Afghanistan, Super Four, Match 2 - Live Score

ದುಬೈ, ಸೆಪ್ಟೆಂಬರ್ 21: ಏಷ್ಯಾ ಕಪ್ 2018ರ ಸೂಪರ್ ಫೋರ್ ಎರಡನೇ ಪಂದ್ಯದಲ್ಲಿ ಇಂದು (ಸೆಪ್ಟೆಂಬರ್ 21) ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ತಂಡ 3 ವಿಕೆಟ್ ರೋಚಕ ಜಯ ಗಳಿಸಿದೆ. ಇಮಾಮ್ ಉಲ್ ಹಕ್, ಬಾಬರ್ ಅಝಾಮ್, ಶೋಯೆಬ್ ಮಲ್ಲಿಕ್ ಅಜೇಯ ಅರ್ಧ ಶತಕ ನೆರವಿನಿಂದ ಪಾಕಿಸ್ತಾನ ಗೆಲುವಿನ ನಗೆ ಬೀರಿತು.

ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44053

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡ ಹಶ್ಮತುಲ್ಲ ಶಾಹಿದಿ (97) ಮತ್ತು ನಾಯಕ ಆಸ್ಗರ್ ಅಫ್ಘಾನ್ (67) ಅವರ ಆಕರ್ಷಕ ಅರ್ಧಶತಕ ನೆರವಿನಿಂದ 50 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 257 ಗರಿಷ್ಠ ರನ್ ಪೇರಿಸಿತ್ತು.

ಗುರಿ ಬೆನ್ನತ್ತಿದ ಪಾಕಿಸ್ತಾನ ಪರ ಇಮಾಮ್ 80, ಬಾಬರ್ 66, ಶೋಯೆಬ್ ಅಜೇಯ 51 ರನ್ ಪೇರಿಸಿದರು. ಕೊನೆಯ ಓವರ್ ನಲ್ಲಿ ಪಾಕಿಸ್ತಾನಕ್ಕೆ 10 ರನ್ ಗಳ ಅವಶ್ಯಕತೆಯಿತ್ತು. ಮಲ್ಲಿಕ್ ಸಿಕ್ಸ್ ಬೀಸಿ ಪಾಕ್ ಜಯಕ್ಕೆ ಕಾರಣರಾದರು. 49.3 ಓವರ್ ನಲ್ಲಿ ಪಾಕ್ 7 ವಿಕೆಟ್ ಕಳೆದು 258 ರನ್ ಪೇರಿಸಿತು.

ಅಫ್ಘಾನಿಸ್ತಾನ ತಂಡ: ಮೊಹಮ್ಮದ್ ಷಾಝಾದ್ (W), ಇಹಸಾನುಲ್ಲಾ ಜನತ್, ರಹ್ಮಾತ್ ಷಾ, ಹಶ್ಮಾತುಲ್ಲಾ ಶಾಹಿದ್ದಿ, ಅಸ್ಘರ್ ಅಫಘಾನ್ (ಸಿ), ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರನ್, ಗುಲ್ಬಾಡಿನ್ ನಾಯಿಬ್, ರಶೀದ್ ಖಾನ್, ಅಫ್ತಾಬ್ ಆಲಂ, ಮುಜೀಬ್ ಉರ್ ರಹಮಾನ್.

ಪಾಕಿಸ್ತಾನ ತಂಡ: ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಝಾಮ್, ಶೋಯೆಬ್ ಮಲಿಕ್, ಸರ್ಫ್ರಜ್ ಅಹ್ಮದ್ (ಸಿ / ಸಿ), ಆಸಿಫ್ ಅಲಿ, ಹರೀಸ್ ಸೊಹೈಲ್, ಮೊಹಮ್ಮದ್ ನವಾಜ್, ಹಸನ್ ಅಲಿ, ಉಸ್ಮಾನ್ ಖಾನ್, ಶಾಹೀನ್ ಅಫ್ರಿದಿ.

Story first published: Saturday, September 22, 2018, 1:42 [IST]
Other articles published on Sep 22, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+