Pak vs NZ 2nd Test : ಸೌದ್ ಶಕೀಲ್ ಶತಕ ಅಲ್ಪ ಹಿನ್ನಡೆಯಲ್ಲಿ ಪಾಕಿಸ್ತಾನ

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕಚಾಚಿಯಲ್ಲಿ ನಡೆಯುತ್ತಿದೆ. ಮೂರನೇ ದಿನದಾಟದಲ್ಲಿ ಪಾಕಿಸ್ತಾನ ಉತ್ತಮ ಬ್ಯಾಟಿಂಗ್ ನಡೆಸಿದ್ದು ಅಲ್ಪ ಮೊತ್ತದ ಹಿನ್ನಡೆಯಲ್ಲಿದೆ. ಪಾಕಿಸ್ತಾನದ ಪರವಾಗಿ ಸೌದ್ ಶಕೀಲ್ 124 ರನ್‌ಗಳಿಸಿ ಅಜೇಯವಾಗಿಳಿದಿದ್ದು ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅವರಿಗೆ ಕೊನೆಯ ಕ್ರಮಾಂಕದ ಆಟಗಾರ ಅಬ್ರಾರ್ ಅಹ್ಮದ್ ನಾಲ್ಕನೇ ದಿನದ ಆರಂಭದಲ್ಲಿ ಸಾಥ್ ನೀಡಲಿದ್ದಾರೆ.
ಪಾಕಿಸ್ತಾನದ ಪರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲಿಗೆ ಇಮಾಮ್ ಉಲ್ ಹಕ್ 83 ರನ್‌ಗಳ ಕೊಡುಗೆ ನೀಡಿ ತಂಡಕ್ಕೆ ನೆರವಾಗಿದ್ದರೆ ಬಳಿಕ ಸೌದ್ ಶಕೀಲ್ ಹಾಗೂ ಸರ್ಫರಾಜ್ ಅಹ್ಮದ್ ಉತ್ತಮ ಪ್ರದರ್ಶನ ನೀಡಿದರು. ಸರ್ಫರಾಜ್ ಅಹ್ಮದ್ 78 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಅಘಾ ಸಲ್ಮಾನ್ 41 ರನ್‌ಗಳನ್ನು ಗಳಿಸಿ ಔಟಾದರು. ಅಂತಿಮವಾಗಿ ಮೂರನೇ ದಿನದಾಟ ಮುಕ್ತಾಯದ ವೇಳೆಗೆ ಪಾಕಿಸ್ತಾನ 407 ರನ್‌ಗಳಿಸಿದ್ದು 9 ವಿಕೆಟ್ ಕಳೆದುಕೊಂಡಿದೆ. ಸದ್ಯ ಪಾಕಿಸ್ತಾನ 42 ರನ್‌ಗಳ ಹಿನ್ನಡೆಯಲ್ಲಿದ್ದು ಒಂದು ವಿಕೆಟ್ ಪಾಕ್ ಕೈಯಲ್ಲಿದೆ.
ಇನ್ನು ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ 449 ರನ್‌ಗಳಿಸಿ ಆಲೌಟ್ ಆಗಿತ್ತು. ಡೆವೋನ್ ಕಾನ್ವೆ ಶತಕ ಸಿಡಿಸಿದರೆ ಟಾಮ್ ಲಾಥಮ್, ಟಾಮ್ ಬ್ಲಂಡಲ್ ಹಾಗೂ ಮ್ಯಾಟ್ ಹೆನ್ರಿ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಅದರಲ್ಲೂ 10ನೇ ವಿಕೆಟ್‌ಗೆ ಹೆನ್ರಿ ಹಾಗೂ ಅಜಾಜ್ ಪಟೇಲ್ ಜೋಡಿ 104 ರನ್‌ಗಳ ದಾಖಲೆಯ ಜೊತೆಯಾಟ ನೀಡಿ ಮಿಂಚಿದ್ದಾರೆ.
ಇನ್ನು ಈ ಸರಣಿಯ ಮೊದಲ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗಿತ್ತು. ಹೀಗಾಗಿ ಎರಡನೇ ಹಾಗೂ ಸರಣಿಯ ಈ ಅಂತಿಮ ಪಂದ್ಯದಲ್ಲಿ ಎರಡು ತಂಡಗಳು ಕೂಡ ಗೆಲುವಿನ ಮೇಲೆ ಚಿತ್ತ ನೆಟ್ಟಿದ್ದು ಸರಣಿ ವಶಕ್ಕೆ ಪಡೆಯಲು ಹವಣಿಸುತ್ತಿದೆ. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಎರಡು ತಂಡಗಳು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪಾಕಿಸ್ತಾನ ಆಡುವ ಬಳಗ; ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಅಘಾ ಸಲ್ಮಾನ್,
ಹಸನ್ ಅಲಿ, ನಸೀಮ್ ಶಾ, ಮೀರ್ ಹಮ್ಜಾ, ಅಬ್ರಾರ್ ಅಹ್ಮದ್
ಬೆಂಚ್: ನೌಮನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಕಮ್ರಾನ್ ಗುಲಾಮ್, ಜಾಹಿದ್ ಮಹಮೂದ್, ಶಹನವಾಜ್ ದಹಾನಿ,
ಸಾಜಿದ್ ಖಾನ್
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್,
ಇಶ್ ಸೋಧಿ, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ಅಜಾಜ್ ಪಟೇಲ್
ಬೆಂಚ್: ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್, ಗ್ಲೆನ್ ಫಿಲಿಪ್ಸ್, ವಿಲ್ ಯಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications